Admin

ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ ಪ್ರಕರಣ ದಾಖಲು

ದಾರಿ ಕೇಳಿದ ಸೈನಿಕನ ಮೇಲೆ ಹಲ್ಲೆ ಕೊರಟಗೆರೆ ಆಸ್ಪತ್ರೆಯಲ್ಲಿ ಸೈನಿಕನಿಗೆ ಚಿಕಿತ್ಸೆ.. ೫ಜನರ ಯುವಕರ ಮೇಲೆ ಪ್ರಕರಣ ದಾಖಲು. ಕೊರಟಗೆರೆ:- ಯೋಧನೋರ್ವ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಕ್ಕೆ ಸಿಟ್ಟಿಗೆದ್ದ ೫ ಜನ ಪುಡಿರೌಡಿಗಳ ತಂಡವೊಂದು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಮೇ.೨೧ರ ಮಂಗಳವಾರ ತಡರಾತ್ರಿ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಎನ್‌ಟಿಆರ್ ಕಂಪರ್ಟ್ ಮತ್ತು ಬಾರ್‌ ಅಂಡ್…

Read More

ವಿಜೃಂಭಣೆಯಿಂದ ನಡೆದ ಎಲೇರಾಂಪುರ ಜಾತ್ರಾ ಮಹೋತ್ಸವ

ತಾಲೂಕಿನ ಕೋಳಾಲ ಹೋಬಳಿಯ ಎಲೇರಾಂಪುರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಹಗಲು ಮತ್ತು ರಾತ್ರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು .ಹಾಗೂ ಜಾತ್ರಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ  ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಗಳನ್ನು ವಿಶೇಷವಾಗಿ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು ಜಾತ್ರೆಯಲ್ಲಿ ವಿಶೇಷವಾಗಿ ವೀರಭದ್ರ ಕುಣಿತ. ಕರಡಿ ವಾದ್ಯ. ಕಿಲುಕುದುರೆ. ತಮಟೆ. ವಾದ್ಯ. ಡೋಲು. ಹರೇ. ಸಿಡಿಮದ್ದು. ಹೆಣ್ಣು ಮಕ್ಕಳ ತ್ರಿಶೂಲ ಕುಣಿತ. ಜಾನಪದ ಕಲಾತಂಡ. ಆರ್ಕೆಸ್ಟ್ರಾ. ಮುಂತಾದ ಕಾರ್ಯಕ್ರಮಗಳು ಗಮನ…

Read More

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ,ವತಿಯಿಂದ ಭಗವನ್ ಬುದ್ದ ಜಯಂತಿ ಆಚರಣೆ

ತುಮಕೂರು:ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಶಾಖೆವತಿಯಿಂದ ಶಾಂತಿ ಮತ್ತು ಕರುಣೆಯನ್ನು ಜಗತ್ತಿಗೆ ಬೋಧಿಸಿದ ಭಗವಾನ್ ಬುದ್ದನ ೨೫೬೮ನೇ ಜನ್ಮ ಜಯಂತಿಯನ್ನು ಅಮಾನಿಕೆರೆಯ ಅರಳಿ ವೃಕ್ಷದ ಬಳಿ ಸರಳವಾಗಿ ಆಚರಿಸಲಾಯಿತು.       ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಬುದ್ದದೇವನ ೨೫೬೮ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅಖಿಲ ಭಾರತ…

Read More

ಮುಖ್ಯಮಂತ್ರಿಗಳಿಂದ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

ಮುಖ್ಯಮಂತ್ರಿಗಳಿಂದ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಜಿಲ್ಲೆಯ ಬರ ನಿರ್ವಹಣೆ, ಪೂರ್ವ ಮುಂಗಾರು ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ರಾಜ್ಯದಲ್ಲಿನ ಬರಪರಿಸ್ಥಿತಿ, ಪೂರ್ವ-ಮುಂಗಾರು ಮತ್ತು ಮುಂಗಾರು ಋತುಮಾನ ಪರಿಸ್ಥಿತಿ ಮತ್ತು ಮಳೆಯಿಂದ ಉಂಟಾದ ಹಾನಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಸ್ವಾನ್ ಮೂಲಕ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭಾಗವಹಿಸಿ ಜಿಲ್ಲೆಯ ಬರಪರಿಸ್ಥಿತಿ, ಮುಂಗಾರು ಋತುಮಾನ ಪರಿಸ್ಥಿತಿ ಹಾಗೂ ಮಳೆಯಿಂದ…

Read More

ಮಳೆ ಹಾನಿಯಿಂದಾದ ಸಮಸ್ಯೆ ಪರಿಹಾರಕ್ಕೆ : ಸಹಾಯವಾಣಿ ಸ್ಥಾಪನೆ

ತುಮಕೂರು: ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 9449872599ಕ್ಕೆ ಕರೆ ಮಾಡಿ ದೂರು ದಾಖಲಿಸಲು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉಪ್ಪಾರಹಳ್ಳಿ, ಅಂತರಸನಹಳ್ಳಿ, ದಿಬ್ಬೂರು, ಸದಾಶಿವನಗರ, ಅಮಾನಿಕೆರೆ ಕೋಡಿಹಳ್ಳ, ಶೆಟ್ಟಿಹಳ್ಳಿ, ಶಾಂತಿನಗರ ಹಾಗೂ ಎಲ್ಲಾ ಅಂಡರ್ ಪಾಸ್‍ಗಳು ಮತ್ತು ಇತರೆ ಸ್ಥಳಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ/ಹಾನಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಕ್ರಮಕೈಗೊಂಡು ಪಾಲಿಕೆ ಸಿಬ್ಬಂದಿಗಳು ಜೆಸಿಬಿ, ಜಟ್ಟಿಂಗ್ ಮತ್ತು ಸಕ್ಕಿಂಗ್…

Read More

ಕುಣಾಘಟ್ಟ ಗ್ರಾಮದಲ್ಲಿ ಅದ್ದುರಿಯಾಗಿ ನೆಡೆದ ನರಸಿಂಹ ಜಯಂತಿ

ಗುಬ್ಬಿ ಸುದ್ದಿ ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದಲ್ಲಿ ನರಸಿಂಹ ಜಯಂತಿಯನ್ನು ಶ್ರೀ ರಾಮಾನುಜಾ ಸೇವಾ ಸಮಿತಿ(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈ ಬಾರಿಯು ಶ್ರೀ ರಾಮಾನುಜ ಸೇವಾ ಸಮಿತಿಯು ನರಸಿಂಹ ಜಯಂತಿ ಅಂಗವಾಗಿ ಪುಣ್ಯಾಹ, ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ಶಾಂತಿ ಹೋಮ, ನರಸಿಂಹ ಹೋಮ, ಗಣ ಹೋಮವನ್ನು ಲೋಕ ಕಲ್ಯಾಣಾರ್ಥಕ್ಕಾಗಿ ಅಪಾರ ಭಕ್ತರ ಸಮುಖದಲ್ಲಿ ನೆರವೇರಿಸಿ ನಂತರ ಪೂರ್ಣಹೂತಿಯೊಂದಿಗೆ ಹೋಮವನ್ನು ಮುಕ್ತಾಯ ಗೋಳಿಸಲಾಯಿತು. ಅರಿಶಿನ ಅಲಂಕಾರದೊಂದಿಗೆ ಸ್ವಾಮಿಯವರು ಕಂಗೊಳಿಸುತ್ತಿದ್ದನ್ನು ಕಂಡ ಬಂದ ಭಕ್ತರು…

Read More

ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಏಕಕಾಲದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯನ್ನು ಪ್ರಾರಂಭಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂಜೆ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು…

Read More

ಸೀಗೆ ಕಟ್ಟೆ ಯಲ್ಲಿ ಹಲವಾರು ದಿನಗಳಿಂದ ನೀರಿಲ್ಲದೆ ಜನರ ಗೋಳಾಟ”

ಕೊರಟಗೆರೆ:- ತಾಲೂಕಿನ ಕೋಳಾಲ ಹೋಬಳಿ ಎಲೆೇರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕದಲ್ಲಿರುವ ಸೀಗೆ ಕಟ್ಟೆಯಲ್ಲಿ ಸುಮಾರು 30 ವರ್ಷಗಳಿಂದ ಇದೇ ಗ್ರಾಮದಲ್ಲಿ 8 ರಿಂದ 10 ಮನೆಗಳಿದ್ದು ಎಲೆೇರಾಂಪುರ ಗ್ರಾಮ ಪಂಚಾಯಿತಿಯ ಕರೆದುಗನಹಳ್ಳಿ ಹಾಗೂ ಹನುಮಂತಯ್ಯನಪಾಳ್ಳ ಈ ಒಂದೇ ಬೋರಿನಿಂದ ಗ್ರಾಮಗಳಿಗೆ ಬೋರ್ವೆಲ್ ನಲ್ಲಿ ಮೂರು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಾ ಇದ್ದು ಪಕ್ಕದ 8 ರಿಂದ 10 ಮನೆಗಳಿಗೆ ಇದೇ ಮಾರ್ಗವಾಗಿ ಹಲವಾರು ವರ್ಷಗಳಿಂದ ನೀರು ಬಿಡುತ್ತಿದ್ದರು. ಕಳೆದ 20 ದಿನಗಳಿಂದ ರಾಜಕೀಯ ವೈಶ್ಯಮದಿಂದ ನೀರನ್ನು…

Read More

ಮಲೇರಿಯ ರೋಗ ನಿರ್ಮೂಲನೆಗೆ ಅರಿವು ಅಗತ್ಯ :ಡಾ|| ಮಂಜುನಾಥ್

ತುಮಕೂರು: ರಾಜ್ಯದಲ್ಲಿ ಮಲೇರಿಯ ರೋಗವನ್ನು 2025ಕ್ಕೆ ಸಂಪೂರ್ಣ ನಿವಾರಣೆ ಮಾಡುವ ಗುರಿಯನ್ನು ಹೊಂದಿದ್ದು, ಮಲೇರಿಯಾ ರೋಗ ನಿರ್ಮೂಲನೆ ಮಾಡಲು ಸಮುದಾಯ ಹಂತದಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಂಜುನಾಥ್ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಲೇರಿಯ ರೋಗ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಮಲೇರಿಯ ರೋಗದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ 2008 ರಿಂದ ಪ್ರತಿ ವರ್ಷ ಏಪ್ರಿಲ್ 25ರಂದು…

Read More

ಭದ್ರತಾ ಕೊಠಡಿಗೆ ಮುಖ್ಯ ಚುನಾವಣಾಧಿಕಾರಿಗಳ ಭೇಟಿ ಪರಿಶೀಲನೆ

ತುಮಕೂರು: ಜಿಲ್ಲೆಯ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು 24 x 7 ಸಿಎಪಿಎಫ್ ಹಾಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇರಿಸಿರುವ ಭದ್ರತಾ ಕೊಠಡಿಗಳಿಗೆ ಇಂದು ಬೆಳಿಗ್ಗೆ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದರು. ಲೋಕಸಭಾ ಚುನಾವಣೆಯ ಮತ ಎಣಿಕೆಯು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದ್ದು, ಮತ…

Read More