ಜನಗಣತಿ-2027 ಸ್ವಯಂ-ಗಣತಿ ಪ್ರಕ್ರಿಯೆಗೆ ಗುಬ್ಬಿ ತಾಲೂಕು ಆಡಳಿತ ಸಕಲ ಸಿದ್ದತೆ

ಗುಬ್ಬಿ ಸುದ್ದಿ

ಜನಗಣತಿ-2027 ಕಾರ್ಯವನ್ನು ತಾಲ್ಲೂಕಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು , ಏಪ್ರಿಲ್ 01 ರಿಂದ ಸ್ವಯಂ-ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಹಶೀಲ್ದಾರ್ ಹಾಗೂ ರೂರಲ್ ಚಾರ್ಜ್ ಆಫೀಸರ್ ಆರತಿ ಬಿ ತಿಳಿಸಿದರು.

 

ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಅಧಿಸೂಚನೆ ಹೊರಡಿಸಿದ್ದು, ಅದರನ್ವಯ ಸ್ವಯಂ ಗಣತಿ ನಂತರ ಏ.16 ರಿಂದ ಮೇ.15 ರವರೆಗೆ ಮನೆ ಗಣತಿ. 2027ರಲ್ಲಿ ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದ್ದು ಸ್ವಯಂ-ಗಣತಿ ಕಾರ್ಯವು ಏ.1 ರಿಂದ ಏ.15 ರವರೆಗೆ ನಡೆಯಲಿದೆ. ಸಾರ್ವಜನಿಕರು ತಮ್ಮ ವಿವರಗಳನ್ನು ಜನಗಣತಿಯ ವೆಬ್‍ನಲ್ಲಿ ಭರ್ತಿ ಮಾಡಿಕೊಳ್ಳಬೇಕು. ಮೊಬೈಲ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ನಕ್ಷೆಯಲ್ಲಿ ತಮ್ಮಮನೆಯನ್ನು ಗುರುತಿಸಬೇಕು. ಮನೆಯ-ಕುಟುಂಬದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿ ತಮ್ಮ ಎಸ್‍ ಇ ರೆಫರೆನ್ಸ್ ಐಡಿ ಪಡೆಯಬೇಕು’ ಎಂದು ತಿಳಿಸಿದರು.

ತಾಲೂಕಿನಲ್ಲಿ 2011 ರ ಜನಗಣತಿ ಪ್ರಕಾರ 331 ಗ್ರಾಮಗಳಲ್ಲಿ ಒಟ್ಟು 2,44,072 ಜನಸಂಖ್ಯೆ ಇದ್ದು, ಪ್ರಸ್ತುತ ಪ್ರೊಜೆಕ್ಟೆಡ್ ಪಾಪ್ಯುಲೇಷನ್ 2,92,886 ಆಗಿದೆ. ಜನಗಣತಿ app ನಲ್ಲಿ ಒಟ್ಟು 373 ಗ್ರಾಮಗಳು ಸೃಜನೆಯಾಗಿದ್ದು, ಒಟ್ಟು 545 ಹೌಸ್ ಲಿಸ್ಟ್ ಬ್ಲಾಕ್ ಗಳನ್ನು ಸೃಜಿಸಲಾಗಿದ್ದು, ಈ ಪ್ರಕಾರ 425 +44 =469 ಗಣತಿದಾರರು ಮತ್ತು 70+7 =77 ಮೇಲ್ವಿಚಾರಕರನ್ನು ನೇಮಕಾತಿ ಮಾಡಲಾಗಿದೆ. ಏಪ್ರಿಲ್ 06 ರಿಂದ ಏಪ್ರಿಲ್ 14 ವರೆಗೆ ಬೆಳಗ್ಗೆ 09.30 ರಿಂದ ಸಂಜೆ 05.30 ವರೆಗೆ ಪ್ರತಿ ಬ್ಯಾಚ್ ಗೆ 50 ಮಂದಿಯಂತೆ ಒಟ್ಟು 11 ಬ್ಯಾಚ್ ಗೆ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ನಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಗಣತಿದಾರರು ಏ.16 ರಿಂದ ಮೇ.15 ರವರೆಗೆ ತಮಗೆ ಹಂಚಿಕೆ ಮಾಡಲಾದ ಬ್ಲಾಕ್‍ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿರುವ 33 ಪ್ರಶ್ನಾವಳಿಗಳಿಗೆ ಮಾಹಿತಿ ಸಂಗ್ರಹಿಸಲಿದ್ದು, ಜನಗಣತಿ ಕಾರ್ಯಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ. 469-ಗಣತಿದಾರರು, 77-ಮೇಲ್ವಿಚಾರಕರಿರುತ್ತಾರೆ. ಗ್ರಾಮೀಣ ಪ್ರದೇಶಕ್ಕೆ-ತಹಶೀಲ್ದಾರ್ ರೂರಲ್ ಚಾರ್ಜ್ ಆಫೀಸರ್, ನಗರಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ’ ಎಂದು ತಿಳಿಸಿದರು.

‘ಜನಗಣತಿ -2027 ಭಾರತದ ಅತಿದೊಡ್ಡ ಸಾರ್ವಜನಿಕ ಭಾಗವಹಿಸುವಿಕೆಯ ಚಟುವಟಿಕೆಯಾಗಿದೆ. ಇದು ಎಣಿಕೆಯಲ್ಲ, ಇದು ವಿಕಸಿತ ಭಾರತ–2047ರ ಅಡಿಪಾಯವಾಗಿದೆ. ದೇಶದಲ್ಲಿ 1881ರಲ್ಲಿ ಮೊದಲ ಜನಗಣತಿ ನಡೆದಿದ್ದು ಈಗ ನಡೆಯುತ್ತಿರುವ ಜನಗಣತಿಯು ‘ದೇಶದ ಭವಿಷ್ಯದ ನೀತಿಗಳಿಗೆ ನಿಖರವಾದ ಆಧಾರ. ಸಂಪನ್ಮೂಲಗಳ ನ್ಯಾಯಯುತ ವಿತರಣೆ. ಸರಿಯಾದ ಸ್ಥಳದಲ್ಲಿ ಸೂಕ್ತ ಯೋಜನೆಗಳು ಸರಿಯಾದ ಅಭಿವೃದ್ಧಿ ಜನಗಣತಿಯ ಪ್ರಯೋಜನಗಳಾಗಿವೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಜನಗಣತಿ ಅರ್ಬನ್ ಚಾರ್ಜ್ ಆಫೀಸರ್ ಮಂಜುಳಾ ದೇವಿ ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *

error: Content is protected !!