ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿಗ್ರಾಮಸ್ಥರ ಪ್ರತಿಭಟನೆ

  1. ಗುಬ್ಬಿ,  : ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಬುಧವಾರ ತಡರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು.

ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ
ಬಿದರೆಹಳ್ಳ ಕಾವಲ್ ನಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ ಎಂದು ರೀ ಬೋರ್ವೆಲ್ ಮಾಡಿಸಲಾಯಿತು. ಆದರೆ ಕೊಳವೆಬಾವಿಯಲ್ಲಿ ಬೋರ್ ವೆಲ್ ನ ಯಂತ್ರೋಪಕರಣಗಳು ಕಳಚಿ ಬಿದ್ದ ಪರಿಣಾಮ ನೂತನ ಯಂತ್ರೋಪಕರಣಗಳನ್ನು ಬಿಡಲು ಆಗದೆ ಕುಡಿಯುವ ನೀರಿಗೆ ವಿಪರಿತ ಆಹಾಕಾರ ಉಂಟಾದ ಹಿನ್ನೆಲೆ ನೂತನಕೊಳವೆ ಬಾವಿ ಹಾಕಿಸಿ ಕೊಡಬೇಕು ಎಂದು ಗ್ರಾಮಸ್ಥರು ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದರು. ನೂತನ ಕೊಳವೆ ಬಾವಿ ಹಾಕಿಸಿಕೊಡದೆ ಹೋದರೆ ಇಲ್ಲೇ ಕುಳಿತು ತೀವ್ರ ಸ್ವರೂಪದ ಉಗ್ರ ಸ್ವರೂಪದ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿಕಾರಿದರು.

ಗ್ರಾಮದ ಮುಖಂಡ ಫಣೀಂದ್ರಮುನಿ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ. ಜನ – ಜಾನುವಾರುಗಳಿಗೂ ತೀವ್ರ ಸಮಸ್ಯೆಯಾಗಿದೆ. ಕೊಳವೆ ಬಾವಿಗೆ ರಿ ಬೋರ್ವೆಲ್ ಮಾಡಿಸಿದರೂ ನೀರು ಬರುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ನೂತನ ಕೊಳವೆಬಾವಿ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿದರು.

 

 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ ಆರತಿ ಅವರು ಜನರ ಸಮಸ್ಯೆಯನ್ನು ಆಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಹಿಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ಬಿದರಹಳ್ಳ ಕಾವಲ್ ನ ಕೊಳವೆ ಬಾವಿಗೆ ಎಸ್,ಡಿ,ಆರ್,ಎಫ್, ಯೋಜನೆ ಅಡಿಯಲ್ಲಿ ಕೊಳವೆ ಬಾವಿಗೆ ರಿ ಬೋರ್‌ವೆಲ್ ಮಾಡಲು ಅನುಮೋದನೆ ನೀಡಲಾಗಿತ್ತು. ಈಗ ರಿ ಬೋರ್ವೆಲ್ ಮಾಡಿದರೂ ನೀರು ಬರುತ್ತಿಲ್ಲ. ಈ ಸಂಬಂಧ ಬಿದರೆಹಳ್ಳ ಕಾವಲ್ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಗ್ರಾಮಸ್ಥರು ಈಗ ನೂತನ ಕೊಳವೆ ಭಾವಿ ಕೊರೆಸುವಂತೆ ಪ್ರತಿಭಟನೆಯಲ್ಲಿ ತಿಳಿದ್ದಾರೆ. ಇದರ ಬಗ್ಗೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರತಿಭಟನಾ ಸ್ಥಳದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಟರಾಜು, ಪಿಎಸ್ಐ ಸುನಿಲ್ ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತನುಜ ಬೆನಕಟ್ಟೆ ಹಾಜರಿದ್ದರು.

Leave a Reply

Your email address will not be published. Required fields are marked *