ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ ನಲ್ಲಿ ಪ್ರಥಮ MBA ಬ್ಯಾಚ್ ಉದ್ಘಾಟನೆ

ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ ನಲ್ಲಿ ಪ್ರಥಮ MBA ಬ್ಯಾಚ್ ಉದ್ಘಾಟನೆ
ನಗರದ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ ತನ್ನ ಮೊದಲ MBA ಬ್ಯಾಚ್ (2025-26) ಅನ್ನು ನವೆಂಬರ್ 17, 2025 ರಂದು ವೈಸಿರಿ ಕ್ಯಾಂಪಸ್‌ನಲ್ಲಿ ಉದ್ಘಾಟಿಸಿತು.

ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಕೆ. ಬಿ. ಜಯಣ್ಣರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೈಗಾರಿಕಾ ಕ್ಷೇತ್ರದೊಂದಿಗೆ ದೃಢವಾದ ನಂಟಿನ ಅಗತ್ಯತೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಜೀವನದ ಬೆಳವಣಿಗೆಗೆ ವಿದ್ಯಾವಾಹಿನಿ ಸಂಸ್ಥೆಯಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂದು ಭರವಸೆ ನೀಡಿದರು.

 

ಈ ಕಾರ್ಯಕ್ರಮದ ಗೌರವಾನ್ವಿತ ಅಥಿತಿಗಳಾದ ಶ್ರೀಮತಿ ಕೆ ಜೆ ನಾಗಪ್ರಿಯ ವ್ಯವಸ್ಥಾಪಕರು V-Tech Solutions ಅವರು ವಿದ್ಯಾರ್ಥಿಗಳಿಗೆ ಕಲಿಕಾ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಉದ್ಯಮತ್ವದ ಮಾರ್ಗಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಸುಬ್ರಹ್ಮಣ್ಯ ದೇಸಾಯಿ, Co-Founder & Director, Synthesis ಅವರು ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿಗಳು ನಿರಂತರ ಕಲಿಕೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಮುಂದಿನ ಎರಡು ವ?ಗಳನ್ನು ತಮ್ಮ ವೃತ್ತಿ ಭಾವಿ ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಮಹತ್ವವನ್ನು ಬೆಳೆಸಿದರು.

 

ಈ ಸಂದರ್ಭದಲ್ಲಿ ಗಣ್ಯರಿಗೆ ಸ್ವಾಗತವನ್ನು ಕೋರಿದ ಒಃಂ ವಿಭಾಗದ ನಿರ್ದೇಶಕಾರದ ಡಾ. ಪ್ರಸನ್ನ ಕುಮಾರ್ ಟಿ.ಎಂ ಅವರು ಪ್ರಮುಖ ಕಲಿಕಾ ಉಪಕ್ರಮಗಳಾದ ಉದ್ಯಮ ಸಿದ್ಧತೆ, ಸಾಮಾಜಿಕ ನೈಪುಣ್ಯ, ನೇತೃತ್ವ ವೃದ್ಧಿ ಹಾಗೂ ಮಾರ್ಗದರ್ಶನ-ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಮತ್ತು ಉದ್ಯಮ-ಸಂಬಂಧಿತ ನಿರ್ವಾಹಕರಾಗಿ ರೂಪಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿಯ ಪ್ರಾಂಶುಪಾಲರದ ಅಮೂಲ್ಯ ಜಿ, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!