ಕುಣಿಗಲ್ ರಸ್ತೆ ಸೇತುವೆಗೆ ತಡೆಗೋಡೆ ನಿರ್ಮಿಸಿ ಅಪಾಯ ತಡೆಯಲು ಆಯುಕ್ತರಿಗೆ ಇಕ್ಬಲ್ ಅಹ್ಮದ್ ಮನವಿ

 

ತುಮಕೂರು: ನಗರದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಮೇಲೆ ಎರಡೂ ಬದಿ ತಡೆಗೋಡೆಗಳಿಲ್ಲದೆ ಪ್ರಾಣಾಪಾಯ ಎದುರಾಗುವ ಸಾಧ್ಯತೆಗಳಿವೆ. ಕೂಡಲೇ ತಡೆಗೋಡೆಗಳನ್ನು ನಿರ್ಮಾಣ ಮಾಡಿ ನಾಗರೀಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರಿಗೆ ಮನವಿ ಮಾಡಿದ್ದಾರೆ.

ಹಾಳಾಗಿದ್ದ ಕುಣಿಗಲ್ ರಸ್ತೆಯ ರೈಲ್ವೆ ಸೇತುವೆಯ ಕೆಳ ರಸ್ತೆಯನ್ನು ಇತ್ತೀಚೆಗೆ ದುರಸ್ಥಿ ಮಾಡಲಾಗಿದೆ. ಆದರೆ ಸೇತುವೆ ಮೇಲ್ಭಾಗ ಎರಡೂ ಬದಿಯಲ್ಲಿ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ. ಸೇತುವೆ ಮೇಲೆ ತಡೆಗೋಡೆಗಳಿಲ್ಲ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸೇತುವೆ ಮೇಲ್ಭಾಗದ ರಸ್ತೆಗಳಲ್ಲಿ ಓಡಾಡುವುದು ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈದ್ಗಾ ಮೊಹಲ್ಲಾ ಕಡೆಯಿಂದ ಬರುವ ವಾಹನ ಸವಾರರು ತಿರುವಿನಲ್ಲಿ ಆಯತಪ್ಪಿದರೆ ಸೇತುವೆ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಆಳದ ಈ ಸೇತುವೆಯ ಗಾಂಧಿನಗರ ಭಾಗದಲ್ಲಿ ಸರ್ಕಾರಿ ಶಾಲೆ, ಶಾಲೆಯ ಮೈದಾನವಿದ್ದು, ಇಲ್ಲಿಯೂ ತಡೆಗೋಡೆ ಇಲ್ಲ. ಆಟವಾಡುವ ಮಕ್ಕಳು ಸೇತುವೆ ಕೆಳಗೆ ಬೀಳುವ ಅಪಾಯವಿದೆ. ಈ ಕಾರಣದಿಂದ ಅತಿ ಶೀಘ್ರವಾಗಿ ಸೇತುವೆಯ ಎರಡೂ ಬದಿಯಲ್ಲಿ ಎತ್ತರದ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ಸಾರ್ವಜನಿಕರ ಸುರಕ್ಷತೆ ಕಾಪಾಡುವಂತೆ ಇಕ್ಬಾಲ್ ಅಹ್ಮದ್ ಅವರು ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!