ತುರುವೇಕೆರೆ: 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಟ್ಟಣದ ಪ್ರಿಯಾ ಆಂಗ್ಲ ಪ್ರೌಢಶಾಲೆಯು ಸತತ 15 ನೇ ಬಾರಿ ಶೇ.100 ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದೆ ಎಂದು ಶಾಲೆಯ ಕಾರ್ಯದರ್ಶಿ ಪುಷ್ಪಲತಾ ಚಂದ್ರೇಗೌಡ ತಿಳಿಸಿದರು.
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಶಾಲೆಯಿಂದ 28 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 8 ಮಂದಿ ಉನ್ನತ, 12 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿಂಚನ ಎಂ.ಬಿ (607) ಶೇ.97.12, ಪಲ್ಲವಿ ಎನ್. (585) ಶೇ.93.06, ವಿಶೃತ(581) ಶೇ.92.96, ಹೇಮಲತಾ ಎಂ.ಟಿ.(566) ಶೇ.90.56, ಜಿ.ಆರ್.ಜೀವಿತಾ(565) ಶೇ.90.04, ವಿಖ್ಯಾತ್ ಗೌಡ (562) ಶೇ.90, ನಿತ್ಯಶ್ರೀ ಎನ್.(558) ಶೇ.90, ಕುಸುಮ ಎಂ.(557) ಶೇ.90, ಬಿ.ಎಂ.ದೀಕ್ಷಿತ್ ಗೌಡ(548) ಶೇ.87.68, ದಿಶಾಂತ್ ಗೌಡ(544) ಶೇ.87.04, ಬಿಂದುಶ್ರೀ ಬಿ.ಎಂ. (540) ಶೇ.86.04, ಮಾನಸ ಬಿ.ಆರ್.(534) ಶೇ.85.44, ತುಷಾರ್ ಆರಾಧ್ಯ (531) ಶೇ.84.96, ಅನುಷ ಎಲ್.(531) ಶೇ.84.32, ನಾಗಶ್ರೀ ಎ.ಎನ್.(522) ಶೇ.83.52, ಸೋನಿಕಾ(513) ಶೇ.82.08 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳನ್ನು ವಾಧಾ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಹಾಗೂ ಪ್ರಿಯಾ ಆಂಗ್ಲಶಾಲೆಯ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ, ಸಹ ಕಾರ್ಯದರ್ಶಿ ಚೇತನ್ ಚಂದ್ರೇಗೌಡ, ಕಾರ್ಯಕಾರಿ ಮಂಡಳಿ, ಶಾಲೆಯ ಬೋಧಕ, ಬೋದಕೇತರ ವರ್ಗ ಅಭಿನಂದಿಸಿದೆ ಎಂದು ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ