ತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಕೆಂಪಯ್ಯ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಉಪಾಧ್ಯಕ್ಷ ಎಂ.ವೆಂಕಟೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. 16 ಸದಸ್ಯ ಬಲದ ಮಾದಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮಾದಿಹಳ್ಳಿ ಕ್ಷೇತ್ರದ ಸದಸ್ಯೆ ಕೆಂಪಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆ ವೇಳೆ ಉಪಾಧ್ಯಕ್ಷ ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿ, ತಹಸೀಲ್ದಾರ್ ರೇಣುಕುಮಾರ್ ಅವರು ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಕೆಂಪಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಉಪಾಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಉಪಾಧ್ಯಕ್ಷ ಕೆಂಪಯ್ಯ ಅವರನ್ನು ಅಧ್ಯಕ್ಷೆ ಶಿವಮ್ಮಲಕ್ಕಜ್ಜಯ್ಯ, ಸದಸ್ಯರಾದ ಬೊಮ್ಮಲಿಂಗಯ್ಯ, ಲತಾ ಯೋಗಾನಂದ್, ಶೃತಿ, ಅನುಸೂಯ, ಜಗದೀಶ್, ವಿನೋದ, ದಿವ್ಯ, ಹರೀಶ್, ನಂಜುಂಡಯ್ಯ, ಕಾಳಮ್ಮ, ನಂಜಮ್ಮ, ಗಿರೀಶ್, ಮಂಜುನಾಥ್, ಗ್ರಾಮಸ್ಥರಾದ ಶೇಷಣ್ಣ, ಬೊಮ್ಮಲಿಂಗಯ್ಯ, ಗಂಗಾಧರ್, ಕೆಂಪಯ್ಯ, ಚಂದ್ರಕುಮಾರ್, ದೇವರಾಜ್, ವಿನೋದ್, ಮನೋಜ್, ಗೌತಮ್ ಸೇರಿದಂತೆ ಹಲವರು ಪುಷ್ಪಾಹಾರ ಹಾಕಿ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ