ತುಮಕೂರು :ಕಳೆದ 25 ವರ್ಷದ ಹೋರಾಟದ ಫಲವಾಗಿ ಹಾಗಲವಾಡಿ ಹೋಬಳಿಯ ಜನತೆಯ ಕನಸು ನನಸಾಗಿದ್ದು ಪ್ರಸ್ತುತ ವರ್ಷವೇ ಹೇಮಾವತಿ ನೀರು ಈ ಭಾಗಕ್ಕೆ ಹರಿಯಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಗುಬ್ಬಿ ತಾಲೂಕಿನ ಮೂಕನಹಳ್ಳಿ ಪಟ್ಟಣ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಎಂ ಹೆಚ್ ಪಟ್ಟಣ ಮಾರ್ಗವಾಗ ಸೇರ್ವೆಗಾರನ ಪಾಳ್ಯ ಮತ್ತು ಮಣ್ಣಿಮಾರಿ ದೇವಸ್ಥಾನ ಸಂಪರ್ಕದ ಸುಮಾರು 7ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ಹಾಗಲವಾಡಿ ಹೋಬಳಿಯ ಜನತೆ ನೀರಾವರಿ ಹೋರಾಟವನ್ನು ನಡೆಸುವ ಮೂಲಕ ಎರಡು ಬಾರಿ ಚುನಾವಣೆಯನ್ನು ಬಹಿಷ್ಕರಿಸಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸದೆ ಹೋರಾಟ ಮಾಡಿದ ಫಲವಾಗಿ ಇದು ಮಠದ ಹಳ್ಳಿ. ಕೆರೆಗೆ ಏತ ನೀರಾವರಿ ಯೋಜನೆ ಚಾಲನೆಗೊಂಡಿದ್ದು ಇದರಿಂದ ಹಾಗಲವಾಡಿ ಹೋಬಳಿಯ ಹಲವು ಗ್ರಾಮಗಳಿಗೆ ಕುಡಿಯಲು ಹೇಮಾವತಿ ನೀರು ಹರಿಸಲು ಸಾಧ್ಯವಾಗಿದೆ ಕಾಮಗಾರಿಯೂ ಒಂದು ವರ್ಷದ ಒಳಗಡೆ ಪೂರ್ಣಗೊಳ್ಳಲಿದ್ದು ಪ್ರಸ್ತುತ ವರ್ಷವೇ ಹೇಮಾವತಿ ನೀರು ಈ ಭಾಗದಲ್ಲಿ ಅರಿಯಲಿದೆ ಎಂದರು.
ಲಿಂಕ್ ಕೆನಲ್ ಕಾಮಗಾರಿ ಕುರಿತು ಪ್ರಾರಂಭದ ದಿವಸಗಳಿಂದ ಇಂದಿನವರೆಗೂ ಸಹ ನಾನು ವಿರೋಧವನ್ನೇ ವ್ಯಕ್ತಪಡಿಸುತ್ತಾ ಬಂದಿದ್ದು ಅದರಂತೆ ಜುಲೈ ನಾಲ್ಕನೇ ತಾರೀಕಿನಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಭೆಯನ್ನು ಕರೆದಿದ್ದು ಅಂದು ಲಿಂಕ್ನಾಲ್ ಕಾಮಗಾರಿಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳುವಂತೆ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು ಉಪಮುಖ್ಯಮಂತ್ರಿಗಳು ರೈತರಿಗೆ ತೊಂದರೆ ಆಗದಂತೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇನ್ನು ಹೇಮಾವತಿ ಲಿಂಕ್ ಕೆನಲ್ ಕಾಮಗಾರಿ ರದ್ದುಪಡಿಸಿ . ಪರ್ಯಾಯವಾಗಿ ನಾಲೆ ಅಗಲೀಕರಣ ಮಾಡುವಂತೆ ನಾನು ಸಹ ಸರ್ಕಾರವನ್ನು ಒತ್ತಾಯಿಸಿದ್ದು ನೀರಾವರಿ ಸಭೆಯಲ್ಲಿ ಈ ಯೋಜನೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸರ್ಕಾರ ಉತ್ತಮ ನಿರ್ಧಾರಕ್ಕೆ ಬರುವ ಭರವಸೆ ಇದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನಾನು ಮಾತನಾಡುವುದು ಸೂಕ್ತವಲ್ಲ ರಾಜ್ಯದಲ್ಲಿ ಯಾವ ಶಾಸಕ ಸಚಿವರಿಗೂ ಸಹ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವಂತಹ ಅಧಿಕಾರ ವಿಲ್ಲ ಅದನ್ನು ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವಂಥದ್ದು ಅದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಉಪಾಧ್ಯಕ್ಷ ಭಾಗ್ಯಮ್ಮ ಮುಖಂಡರಾದ ನರಸಿಂಹಯ್ಯ ನೇಮರಾಜು.ರವಿ.ವೆಂಕಟೇಶ್ ಶ್ರೀನಿವಾಸ್. ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್. ಗುತ್ತಿಗೆದಾರ ಬೋರೇಗೌಡ. ಸ್ಥಳೀಯ ಮುಖಂಡರು ಹಾಜರಿದ್ದರು.