ಪಾವಗಡ :-ಪಾವಗಡದಲ್ಲಿ ರಾಷ್ಟ್ರ ಪ್ರಗತಿ ಶಿಕ್ಷಣ ಸಂಸ್ಥೆ ಪ್ರೌಢಶಾಲೆ ಕಟ್ಟಡ ಉದ್ಘಾಟನೆ ಸಮಾರಂಭ ಜರುಗಿತು. ಶಾಂತಿ ಬೃಂದಾವನ ಹಿಂಭಾಗದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಈರಣ್ಣ
ಮಾತನಾಡಿ, ಈ ಶಾಲೆಯು ಉತ್ತಮ ವಾತಾವರಣದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಗಡಿ ಪ್ರದೇಶದಲ್ಲಿ ಆರಂಭಗೊಂಡಿದೆ. ಹೆಚ್ಚು ಹೆಚ್ಚು ಮಕ್ಕಳು ಈ ಶಾಲೆಗೆ ಸೇರಿ ಉತ್ತಮ ಮಟ್ಟದಲ್ಲಿ ಜೀವನ ರೂಪಿಸಿಕೊಳ್ಳಬೇಕೆಂದು ಹಾರೈಸಿದರು.

ನಂತರ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ಅವರು, ಪಾವಗಡ ತಾಲ್ಲೂಕು ಗಡಿ ಪ್ರದೇಶವಾಗಿರುವುದರಿಂದ ಇಲ್ಲಿ ಅತಿ ಹೆಚ್ಚು ಬಡವರಿದ್ದಾರೆ. ಈ ಹಿನ್ನೆಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಆಸೆಯಿಂದ ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ಮಹಾರಾಜ್ ಜಪಾನಂದ ಸ್ವಾಮಿ, ಪುರಸಭೆಯ ಅಧ್ಯಕ್ಷರಾದ ಸುದೇಶ್ ಬಾಬು , ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಗೀತಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕರು ಚೆನ್ನಮಲ್ಲಯ್ಯ, ಸಮಾಜಸೇವಕರು ಮೈಲಾರ ರೆಡ್ಡಿ, ಜಿಲ್ಲಾ ಪಂಚಾಯಿತಿ ಕ್ವಾಟಗುಡ್ಡ ಅಂಜಪ್ಪ, ಬಲರಾಮ್ ರೆಡ್ಡಿ, ತಿಮ್ಮರೆಡ್ಡಿ, ಗಡಂ ತಿಮ್ಮಪ್ಪ, ಕಮಲ್ ಬಾಬು, ಮತ್ತು ರೂಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಗೂರಸುಮಾವು ಹನುಮಂತರಾಯಪ್ಪ ಮನು ಮಹೇಶ್, ರಮೇಶ್ ನಾಯಕ, ಮನೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.