ರಾಜ್ಯ ವಾಲ್ಮೀಕಿ ಸಮುದಾಯದ ಪಕ್ಷತೀತ ನಾಯಕ ಕೆ, ಎನ್, ರಾಜಣ್ಣ  ಪಾಳೇಗಾರ್ ಲೋಕೇಶ್

 

ಪಾವಗಡ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಾವಗಡ ತಾಲೂಕು ವಾಲ್ಮೀಕಿ ಸಮುದಾಯದ ಸಂಘ ಸಂಸ್ಥೆಗಳ ಮುಖಂಡರು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅಮೃತ ಮಹೋತ್ಸವ ಹಾಗೂ ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮ ಕುರಿತು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತುಮಕೂರು ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪಾಳೇಗಾರ್ ಲೋಕೇಶ್ ಮಾತನಾಡಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮುದಾಯದ ಪಕ್ಷತೀತ ನಾಯಕ ಸರ್ವ ಜನಾಂಗದ ಸರ್ವಧರ್ಮಗಳ ಏಳಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಹಕಾರಿ ಸಚಿವರ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ  ಇರುವ ವಾಲ್ಮೀಕಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು
ಕೆ .ಎನ್. ಆರ್ .ಅಭಿಮಾನಿ ಬಳಗದ ಅಧ್ಯಕ್ಷ ಡಿ.ಸಿ.ಸಿ. ಬ್ಯಾಂಕ್ ಶ್ರೀನಿವಾಸ್ ಮಾತನಾಡಿ. ಸಹಕಾರಿ ಸಚಿವರಾದ ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ಜಾತಿ ಧರ್ಮಗಳನ್ನು ಸಮಾನತೆಯಿಂದ ನೋಡಿ ಸಹಕಾರ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ ಇಂತಹ ಮಹಾನ್ ನಾಯಕನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ತರು ಭಾಗವಹಿಸುವಂತೆ ಕರೆ ನೀಡಿದರು
ಪತ್ರಿಕಾಗೋಷ್ಠಿಯಲ್ಲಿ. ಕಸಬಾ ವಿ. ಎಸ್. ಎಸ್.ಎನ್. ಸಿ .ಇ.ಓ.ನಾರಾಯಣಮೂರ್ತಿ. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಓಂಕಾರ್ ನಾಯಕ. ಮಹಿಳಾ ವೇದಿಕೆ ಅಧ್ಯಕ್ಷರಾದ ಅಂಬಿಕಾ ರಮೇಶ್. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಈ ಸಂದರ್ಭದಲ್ಲಿ. ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್. ಕ.ರ.ವೇ ಅಧ್ಯಕ್ಷ ಲಕ್ಷ್ಮೀನಾರಾಯಣ್. ಎಸ್. ಸಿ .ಎಸ್. ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಜಿತ್ ಕುಮಾರ್.  ಆದರ್ಶ ಶಾಲೆಯ ಸಮಿತಿ ಅಧ್ಯಕ್ಷ ಪ್ರಕಾಶ್ ನಾಯಕ. ಮುಖಂಡರಾದ. ಕನ್ನಮೆಡಿ ಸುರೇಶ್ ಭೋಜರಾಜ್. ರಾಮಾಂಜಿನಪ್ಪ. ಆಟೋ ಸತ್ತಿ. ದಾಸ ನಾಯಕ. ರಾಜಾಗೋಪಾಲ್. ಗೋಪಾಲ್. ಹರ್ಷ ಈರಣ್ಣ. ಶಿವಕುಮಾರ್ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!