ಪ್ರಾದೇಶಿಕ ಧ್ವನಿಗಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಶ್ರವಿುಸಿ: ನಿಖಿಲ್ ಕುಮಾರಸ್ವಾಮಿ

ಕೊರಟಗೆರೆ: ಪಕ್ಷವನ್ನುನಿಖಿಲ್ ಕುಮಾರಸ್ವಾಮಿ ತಳಮಟ್ಟದಿಂದ ಅಭಿವೃದ್ಧಿ ಪಡಿಸಲು ಕಾರ್ಯಕರ್ತರು ಮುಂದಾಗಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಶ್ರಮ ವಹಿಸಬೇಕು. ರಾಜ್ಯದ ಅಸ್ತಿತ್ವ ನಾಡು-ನುಡಿಗಳ ರಕ್ಷಣೆ ಹಾಗೂ ಜಲ ಸಂಪತ್ತಿನ ಹಕ್ಕು ಸಂರಕ್ಷಣೆ ಪ್ರಾದೇಶಿಕ ಪಕ್ಷಗಳ ಪಾತ್ರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವೇ ಕರ್ನಾಟಕಕ್ಕೆ ಅತ್ಯಅವಶ್ಯ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

 

ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

 

 

ರಾಷ್ಟ್ರೀಯ ಪಕ್ಷಗಳು ದೆಹಲಿ ಕೇಂದ್ರೀಕೃತ ನಿಲುವುಗಳಿಂದ ರಾಜ್ಯದ ಪ್ರಾದೇಶಿಕ ಸಮಸ್ಯೆಗಳಿಗೆ ಸ್ಪಂದನೆ ನೀಡುವಲ್ಲಿ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಪಕ್ಷವೊಂದೇ ನಿಜವಾದ ಪ್ರಾದೇಶಿಕ ಧ್ವನಿ ಎಂದರು. ಜೆಡಿಎಸ್ ಸ್ಥಾಪಕ ಎಚ್. ಡಿ. ದೇವೇಗೌಡ 92ರ ವಯಸ್ಸಿನಲ್ಲೂ ಪಕ್ಷದ ಇತಕ್ಕಾಗಿ ಶ್ರಮಿಸುತ್ತಿರುವುದು ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ಅವರಿಂದ ಸ್ಥಾಪಿತ ಮಹಿಳಾ ಮೀಸಲಾತಿ ನೀತಿಯ ಫಲವಾಗಿ ಗ್ರಾಮ ಪಂಚಾಯಿತಿ ಮಟ್ಟದ ಆಡಳಿತದಲ್ಲಿ ಮಹಿಳೆಯರಿಗೂ ಸಾಮಾಜಿಕ ನ್ಯಾಯ ದೊರೆತಿದೆ. ಎಂದು ನಿಖಿಲ್ ಹೇಳಿದರು.

ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಗಮನಿಸುತ್ತಿದ್ದು. ಮುಂಬರಲಿರುವ ಚುನಾವಣೆಯಲ್ಲಿ ಜನತೆ ನಮ್ಮನ್ನು ಆಶೀರ್ವದಿಸಲಿದ್ದಾರೆ. ರಾಜ್ಯಕ್ಕೆ ಕುಮಾರಣ್ಣ ನಾಯಕತ್ವ ಅನಿವಾರ್ಯ. ಕುಮಾರಸ್ವಾಮಿ ರಾಜ್ಯದ ಜನತೆಯ ಹೃದಯ ಗೆದ್ದಿದ್ದಾರೆ‌. ಅವರು ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದು. ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಜನತೆ ಬಯಸಿದ್ದಾರೆ.

ಇಂದಿನ ಸದಸ್ವತ್ವ ನೋಂದಣಿಯ ಮುಂಬರಲಿರುವ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ತಯಾರಿ ನಡೆಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ರಾಜ್ಯದಾದ್ಯಂತ 58 ದಿನಗಳಲ್ಲಿ 116 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನಾ ಶಕ್ತಿ ವಿಸ್ತಾರಗೊಳ್ಳಲಿದೆ.

 

ಮತ ಪ್ರಮಾಣದಲ್ಲಿ ಮುಂದೆ: ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ, ಸಂಖ್ಯೆಯಲ್ಲಿ ಶಾಸಕರನ್ನು ಕಡಿಮೆ ಮಾಡಿಕೊಂಡಿದ್ದರು. ಶೇಕಡ 34 ರಷ್ಟು ಮತ ಪಡೆದು ಇತರ ಪಕ್ಷಗಳಿಗಿಂತ ಜೆ ಡಿ. ಎಸ್.ಪಕ್ಷ ಮುಂದಿದೆ. ಕೊರಟಗೆರೆ ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದರೆ ಇತ್ತೀಚಿಗೆ ಬೆಂಗಳೂರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅವರು ತೋರಿದ ಅಸಹಾಯಕತೆ‌. ಅಸಮರ್ಥತೆ. ರಾಜ್ಯದ ಜನ ನೋಡಿದ್ದಾರೆ.

 

ರಾಜ್ಯದಲ್ಲಿ ಅಜಾರು ಕಥೆ ಸಂಭಾವ್ಯ ಯುವಶಕ್ತಿ ನಾಡಿನ ಉಳಿಯುವುದಾಗಿ ರಾಜಕೀಯ ಮಾಡಬೇಕು. ಕಾರ್ಯಕರ್ತರಲ್ಲಿ ವಿಶ್ವಾಸ ಉಳಿಸಿಕೊಂಡವರಿಗೆ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ನೀಡಲಿದ್ದು. ಜನಪರವಾದ ಕೆಲಸಗಳಲ್ಲಿ ತೊಡಗಿಕೊಳ್ಳಿ ಕೊರಟಗೆರೆ ಕ್ಷೇತ್ರವು ನಿಮಗೆ ಮಾತೃ ಕ್ಷೇತ್ರವಿದ್ದಂತೆ. ಇಲ್ಲಿನ ಕಾರ್ಯಕರ್ತರು ಯಾರು ಭಯಪಡುವ ಅಗತ್ಯವಿಲ್ಲ. ಯಾರನ್ನು ಬಿಟ್ಟು ಕೊಡುವ ಮಾತಿಲ್ಲ ಎಂದರು.

 

ಮಾಜಿ ಶಾಸಕ ಸುಧಾಕರ್ ಲಾಲ್ ಮಾತನಾಡಿ: ದೇವೇಗೌಡರು ತಮ್ಮ ಜೀವನವನ್ನೇ ಜೆಡಿಎಸ್ ಸಂಘಟನೆಯ ಕೈಗೆ ಒಪ್ಪಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ರೈತರು. ಬಡವರು. ಮಹಿಳೆಯರಿಗಾಗಿ. ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಹಾಗೂ ರೈತರ ಸಾಲ ಮನ್ನ ಮಾಡುವ ಮೂಲಕ ಜನಪ್ರಿಯತೆ ಹೊಂದಿದ್ದಾರೆ ಎಂದರು. ಕಾರ್ಯಕ್ರಮ ಮುನ್ನ ನೂರಾರು ಯುವ ಕಾರ್ಯಕರ್ತರು ಕೊರಟಗೆರೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಭರ್ಜರಿ ಬೈಕ್ ಜಾತ ನಡೆಸಿದರು.

 

ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆಂಜಿನಪ್ಪ. ತಾಲ್ಲೂಕು ಅಧ್ಯಕ್ಷ ಕಾಮರಾಜು. ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ. ಕಾರ್ಯಾಧ್ಯಕ್ಷ ಲಕ್ಷ್ಮಿಶ್. ವಕ್ತಾರ ಮಾವತೂರು ಮಂಜುನಾಥ್. ಯುವ ಅಧ್ಯಕ್ಷ ವೆಂಕಟೇಶ್. ಜಿ.ಪಂ.ಮಾ. ಸದಸ್ಯ ಶಿವರಾಮಯ್ಯ. ರಾಜು. ಸಿದ್ದಮಲ್ಲಪ್ಪ. ಪಿ. ಎಲ್.ಡಿ.ಬ್ಯಾಂಕ್ ಚಿಕ್ಕ ರಂಗಯ್ಯ ದೇವರಾಜು ಮಲ್ಲಣ್ಣ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!