76ನೇ ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಅವರಿಗೆ ಅವಮಾನ: ಬಾಬಾ ಸಾಹೇಬ್ ಅವರ ಭಾವಚಿತ್ರ ಇಡದೆ ದಿನಾಚರಣೆ

ತುಮಕೂರು: ಸಂವಿಧಾನ ಶಿಲ್ಪಿ ಭಾರತ ರತ್ನ ಡಾಬಿ ಆರ್ ಅಂಬೇಡ್ಕರ್ ಅವರು ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಗೆ ನೀಡಿದ ಸಂವಿಧಾನ ಮಾದರಿಯಾಗಿದ್ದು ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಅವರನ್ನು ಪ್ರಜಾಪ್ರಭುತ್ವದ ಜ್ಞಾನಿಯೆಂದು ಪೂಜಿಸುತ್ತಿದ್ದಾರೆ ಇಂತಹದರ ನಡುವೆ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ವಿಶೇಷ ಸ್ಥಾನಮಾನಗಳಿದ್ದು ಎಲ್ಲಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ದಿನಾಚರಣೆಗಳ ಸಮಯ ಸಂದರ್ಭದಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಫೋಟೋಗಳನ್ನು ಇಟ್ಟು ಪೂಜಿಸಬೇಕು ಎಂಬ ಆದೇಶವಿದ್ದರೂ ಕೂಡಾ ಇದನ್ನ ಧಿಕ್ಕರಿಸಿ ಅಂಬೇಡ್ಕರ್ ಅವರ ಭಾವಚಿತ್ರ ಇರದೆ 76ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿರುವುದು ಖಂಡನೀಯವೆಂದು ಮಾದಿಗ ವಿದ್ಯಾರ್ಥಿ ಪರಿಷತ್ನ ರಾಜ್ಯಾಧ್ಯಕ್ಷ ರವಿವರ್ಮ ಕುಮಾರ್ ಅವರು ಆಕ್ರೋಶ ಹಾಕಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಆಚರಣೆ ವೇಳೆ ದೇಶ ಕಂಡ ಮಹಾನ್ ಮಾನವತವಾದಿ ತತ್ವಜ್ಞಾನಿ ಸಂವಿಧಾನ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈ ರಾಷ್ಟ್ರದ ಎಲ್ಲಾ ಧರ್ಮ ಎಲ್ಲಾ ಜನಾಂಗ ಮತ್ತು ಸ್ತ್ರೀಯರಿಗೆ ವಿಶೇಷವಾದ ಆದ್ಯತೆಯನ್ನು ನೀಡಿ ಇಡೀ ವಿಶ್ವದಲ್ಲಿಯೇ ದೊಡ್ಡ ಸಂವಿಧಾನವನ್ನು ನೀಡಿದ ಮಹಾನ್ ಪುರುಷ ಚೇತನ ಡಾ. ಬಿ ಆರ್ ಅಂಬೇಡ್ಕರ್ ರವರ ಫೋಟೋವನ್ನು ಇಡದೆ ಗಣರಾಜ್ಯೋತ್ಸವ ಆಚರಿಸಿರುವುದು ತುಂಬಾ ಕೇದಕರ ವಿಷಯವಾಗಿದೆ.

ಶೋಷಿತ ಸಮಾಜ ದುರ್ಬಲರಿಗೆ ಬಡವರಿಗೆ ಎಲ್ಲಾ ವರ್ಗದವರಿಗೂ ಮೀಸಲಾತಿ ತಂದುಕೊಟ್ಟ ಮಹಾನ್ ಪುರುಷ ಡಾ. ಬಿ ಆರ್ ಅಂಬೇಡ್ಕರ್ ಇವರನ್ನು ಈ ಗ್ರಾಮ ಪಂಚಾಯಿತಿಯ, ಪಂಚಾಯಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಬಾಬಾ ಸಾಹೇಬರ ಫೋಟೋವನ್ನು ಇಡದೆ ಗಣರಾಜ್ಯೋತ್ಸವ ಆಚರಿಸಿರುವುದು ದುರಂತವೇ ಆಗಿದೆ. ಇದನ್ನು ಮಾದಿಗ ವಿದ್ಯಾರ್ಥಿ ಯುವ ಪರಿಷತ್ ನ ರಾಜ್ಯಾಧ್ಯಕ್ಷನಾಗಿ ಇದನ್ನು ಖಂಡಿಸುತ್ತೇನೆ. ಕೂಡಲೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಅಧಿಕಾರಿಯನ್ನು ಸೇವೆಯಿಂದ ಅಮಾನತು ಗೊಳಿಸಬೇಕು ಎಂದು ರವಿವರ್ಮ ವಿ ರವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!