ತುಮಕೂರು : ಹಲವಾರು ಬಾರಿ ಜಾಗೃತಿ ಮೂಡಿಸಿದ್ದರೂ ರಾತ್ರಿ ಹಗಲು ನಿರ್ಭೀತಿಯಿಂದ ವ್ಯಾಪಕ ಮರಳು ಮಾರಾಟ ದಂಧೆಗಳು ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಧುಗಿರಿ ಡಿವೈಎಸ್ಪಿ ಹಾಗೂ ತಂಡ ಶನಿವಾರ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿ ಅಕ್ರಮ ಸಾಗಾಣಿಕೆಯ ಮರಳು ಟ್ರಾಕ್ಟರ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಅರಸೀಕೆರೆ,ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಕೆರೆಕುಂಟೆ ಹಾಗೂ ಇತರೆ ಹಳ್ಳಗಳಿಂದ ಪಕ್ಕದ ಆಂಧ್ರದ ನಗರ ಪ್ರದೇಶಗಳಿಗೆ ಅಕ್ರಮ ಮರಳು ಸಾಗಾಣಿಕೆ ಮತ್ತು ಇಸ್ಪೀಟ್ ಹಾಗೂ ಮಟ್ಕಾ ದಂಧೆಗಳಿಂದ ರೈತರು ಕೂಲಿಕಾರರು ಬೀದಿಪಾಲಾಗುತ್ತಿರುವ ವಿಚಾರ ಕುರಿತು ಆ ಭಾಗದಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದ ಬೆನ್ನಲ್ಲೇ ಗಡಿ ಭಾಗದ ತಾಲೂಕಿನ ಸಿದ್ಧಾಪುರ,ದೊಡ್ಡಹಳ್ಳಿ,ನಾಗಲಾಪುರ ಮಾರಮ್ಮನಹಳ್ಳಿ ಇತರೆ ಸುತ್ತಮುತ್ತಲ ಗ್ರಾಮಗಳ ಹಳ್ಳಕೊಳ್ಳ ಹಾಗೂ ಕೆರೆ ಕುಂಟೆಗಳಲ್ಲಿ ವ್ಯಾಪಕ ಮರಳುದಂಧೆಗಳು,ನಡೆಯುತ್ತಿದ್ದು,ರಾಜರೋಷವಾಗಿ ಟ್ರಾಕ್ಟರ್ಗಳ ಮೂಲಕ ನಗರ ಪ್ರದೇಶಗಳಿಗೆ ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.
ಸ್ಥಳೀಯ ಪೊಲೀಸರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮರಳು ದಂಧೆಕೋರರು,ರಾಜಕೀಯ ಪ್ರಭಾವ ಬಳಸಿ ಅಕ್ರಮ ಮರಳು ದಂಧೆಯ ಸಾಗಾಣಿಕೆಯಲ್ಲಿ ನಿರತರಾಗಿರುವುದಾಗಿ ಅನೇಕ ಮಂದಿ ಸ್ಥಳೀಯರು ಆರೋಪದ ಹಿನ್ನೆಲೆಯಲ್ಲಿ ಇದರ ಬೆನ್ನಲ್ಲೇ,ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಲೂಕಿನ ಹೊಸಕೋಟೆ ಗ್ರಾಮದ ಮಾಲೂರಪ್ಪ ತನ್ನ ಪ್ರಭಾವ ಬಳಸಿ ಕಳೆದ ಅನೇಕ ತಿಂಗಳಿಂದಲೂ ಟ್ರಾಕ್ಟರ್ ಮೂಲಕ ರಾಜರೋಷವಾಗಿ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಕೆರೆಕುಂಟೆಗಳಿಂದ ನಗರ ಪ್ರದೇಶಗಳಿಗೆ ಮರಳು ಸಾಗಾಣಿಕೆಯಲ್ಲಿ ನಿರತರಾಗಿದ್ದರು.ಇಲ್ಲಿನ ಸಂಬಂಧಪಟ್ಟ ಠಾಣೆಯ ಪಿಎಸ್ಐ,ಎಎಸ್ಐ ಹಾಗೂ ಪೊಲೀಸರಿಗೆ ಕಣ್ಣುತಪ್ಪಿಸಿ,ಮರಳು ಸಾಗಾಣಿಕೆ ನಡೆಸುತ್ತಿದ್ದರು.ಈ ಸಂಬಂಧ ಸಾರ್ವಜನಿಕ ದೂರುಗಳ ಮೇರೆಗೆ ,ತಾಲೂಕಿನ ಸಿದ್ದಾಪುರ ಗ್ರಾಮದ ದೊಡ್ಡ ಕೆರೆಯಿಂದ ತಾಲೂಕಿನ ವೈ.ಎನ್ ಹೊಸಕೋಟೆ ಮಾರ್ಗವಾಗಿ ಟ್ರಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಡಿಧೀರ್ ಭೇಟಿ ನೀಡಿದ ಡಿವೈಎಸ್ಪಿ ಹಾಗೂ ತಂಡ,ಮರಳು ತುಂಬಿದ ಟ್ರಾಕ್ಟರ್ ಹಿಡಿದು ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.ಈ ವೇಳೆ ಸಾರ್ವಜನಿಕರಿಂದ ಮರಳು ಸಾಕಾಣಿಕೆ ಹಾಗೂ ಇಸ್ಪೀಟ್ ಮಟ್ಕಾ ಇತರೆ ಅಕ್ರಮ ಚಟವಟಿಕೆ ಕುರಿತು ಮಾಹಿತಿ ಪಡೆದ ಡಿವೈಎಸ್ಪಿ,ಅಕ್ರಮ ಚಟವಟಿಕೆ ತಡೆಯಲು ಈಗಾಗಲೇ ಸಿದ್ದತೆ ಕೈಗೊಳ್ಳಲಾಗಿದೆ.ಪಾವಗಡ ವೃತ್ತ ಸೇರಿದಂತೆ ತಾಲೂಕಿನ ತಿರುಮಣಿ ಹಾಗೂ ಗ್ರಾಮಾಂತರ ವೃತ್ತ,ಅರಸೀಕೆರೆ ಸೇರಿದಂತೆ ತಾಲೂಕಿನ ಯಾವುದೇ ಭಾಗದಲ್ಲಿ ಅಕ್ರಮ ಮರಳು ಮಾಫಿಯ,ಇತರೆ ಸಮಾಜ ಬಾಹೀರ ಅಕ್ರಮ ಚಟವಟಿಕೆ ತಡೆಯಲು ಬದ್ದರಿದ್ದೇವೆ.ತನಿಖೆ ಆರಂಭಿಸಿದ್ದು ಮರಳು ಸಾಗಾಣಿಕೆ ಸೇರಿದಂತೆ ಇತರೆ ಭಾಗಿಯಾದ ದಂಧೆಕೋರರ ವಿರುದ್ಧ ನಿರ್ಧಾಕ್ಷಣ ಕ್ರಮ ಕೈಗೊಳ್ಳಲಾಗುವುದಾಗಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ವರದಿ ಪಾವಗಡ ಕೆ ಮಾರುತಿ ಮುರಳಿ