ಜೂ.17ಕ್ಕೆ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅಗಮನ

ತುಮಕೂರು :ಕರ್ನಾಟಕ ಪ್ರದೇಶ್‌ ಜಾತ್ಯಾತೀತ ಜನತಾ ದಳ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ ಹಾಗೂ ಇತರೆ ರಾಜ್ಯ ಮಟ್ಟದ ಗಣ್ಯರು ಇದೇ ಜೂ.17ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪಾವಗಡಕ್ಕೆ ಅಗಮಿಸಲಿದ್ದು ಪಕ್ಷದ ವತಿಯಿಂದ ಪಟ್ಟಣದ ಶ್ರೀ ಅಂಜನೇಯಸ್ವಾಮಿ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಪಕ್ಷ ಸಂಘಟನೆ ರಾಜ್ಯ ಪ್ರವಾಸ ಹಾಗೂ ಮಿಸ್ಡ್‌ ಕಾಲ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವುದಾಗಿ ತಾಲೂಕು ಜೆಡಿಎಸ್‌ ಅಧ್ಯಕ್ಷರಾದ ಎನ್‌.ಎ.ಈರಣ್ಣ ತಿಳಿಸಿದ್ದಾರೆ.

ಅವರು ತಾಲೂಕು ಜೆಡಿಎಸ್ ವತಿಯಿಂದ ಭಾನುವಾರ ಸಂಜೆ 4 ಗಂಟೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,ರಾಜ್ಯದ ಜನತೆ ಬದಲಾವಣೆ ಬಯಸಿದ್ದು,ಜನಸಾಮಾನ್ಯರು,ಕಾರ್ಮಿಕರು ಹಾಗೂ ರೈತರ ಬದುಕು ಹಸನಾಗಬೇಕಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರ ಅವಧಿಯಲ್ಲಿ ಅನೇಕ ರೀತಿಯ ಜನಪರ ಯೋಜನೆ ರೂಪಿಸಿ ಅನುಕೂಲ ಕಲ್ಪಿಸಲಾಗಿತ್ತು.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅನೇಕ ಯೋಜನೆ ರೂಪಿಸಿ ಜಾರಿಗೆ ತಂದಿದೆ.ಸ್ಥಳೀಯ ಸಂಸ್ಥೆಯ ಚುನಾವಣೆ ಘೋಷಣೆ ಅಗುವ ಸಾಧ್ಯತೆಗಳಿದ್ದು ತಾಲೂಕಿನಲ್ಲಿ ಪಕ್ಷವನ್ನು ಸದೃಡವಾಗಿ ಕಟ್ಟಿ ಸಂಘಟಿಸಬೇಕು.ಪಾವಗಡ ತಾಲೂಕು ಜೆಡಿಎಸ್‌ ಭದ್ರಕೋಟೆಯಾಗಿದೆ.ಈ ಕೋಟೆಯನ್ನು ಮತ್ತೆ ಸದೃಡವಾಗಿ ಪಕ್ಷವನ್ನು ಸಂಘಟಿಸುವ ಮೂಲಕ ಜೆಡಿಎಸ್‌ ಪ್ರಬಲ ಗೊಳಿಸಬೇಕು ಎಂದು ಕರೆ ನೀಡಿದರು.

 

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು,ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ ಇತರೆ ರಾಜ್ಯ ಮುಖಂಡರ ನೇತೃತ್ವದ,ಸಲಹೆ ಸೂಚನೆ ಮೇರೆಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ.ಪಕ್ಷ ಸಂಘಟಿಸುವ ಸಲುವಾಗಿ ಅವರು,ರಾಜ್ಯಾಧ್ಯಂತ ಪ್ರವಾಸ ಕಾರ್ಯಕ್ರಮ ರೂಪಿಸಿದ್ದು,ಇದೇ ಜೂ.17ರಂದು ಪಾವಗಡಕ್ಕೆ ಅಗಮಿಸಿ,ಮಿಸ್ಡ್‌ ಕಾಲ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.ಈ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಪಕ್ಷದ ರಾಜ್ಯ ಮುಖಂಡರು ಅಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ತಾಲೂಕಿನ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ತಾಲೂಕು ಜೆಡಿಎಸ್‌ ಮುಖಂಡರಾದ ಬಲರಾಮರೆಡ್ಡಿ,ರಾಜಶೇಖರಪ್ಪ ಹಾಗೂ ವಿ.ವೆಂಕಟೇಶ್‌ ಪಕ್ಷ ಸಂಘಟನೆ ಕುರಿತು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸುವಂತೆ ಕರೆ ನೀಡಿದರು.
ಯುವ ಮುಖಂಡರಾದ ನೆರಳೇಕುಂಟೆ ಭರತ್‌ ಕುಮಾರ್‌,ರೊಪ್ಪ ಶಿವಕುಮಾರ್‌ ಸೇರಿದಂತೆ ಅನೇಕ ಮಂದಿ ಜೆಡಿಎಸ್‌ ಮುುಖಂಡರು ಹಾಗೂ ಕಾರ್ಯಕರ್ತರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!