ತುಮಕೂರು : ಆಗಸ್ಟ್ 1 ರೊಳಗೆ ಆಟೋ ರಿಕ್ಷಾಗಳಿಗೆ ಸಂಬಂದಿಸಿದ ಚಾಲನ ಪರವಾನಗಿ, ಎಫ್ ಸಿ,ವಿಮಾ, ಪರ್ಮಿಟ್, ಸಮವಸ್ತ್ರ ಇನ್ನಿತರೆ ದಾಖಲಾತಿಗಳು ಕಡ್ಡಾಯವಾಗಿ ಆಟೋ ಚಾಲಕರು ಹೊಂದಿರಬೇಕು ಇಲ್ಲವಾದಲ್ಲಿ ದಂಡದ ಬದಲು ಕೇಸು ದಾಖಲಿಸಿ ಆಟೋವನ್ನು ಸೀಜ್ ಮಾಡಲಾಗುವುದೆಂದು ಆಟೋ ಚಾಲಕರಿಗೆ ಪಾವಗಡ ಪೊಲೀಸ್ ಠಾಣೆಯ ಸಿ.ಪಿ,ಐ. ಸುರೇಶ್ ಖಡಕ್ ಎಚ್ಚರಿಕೆ ನೀಡಿದರು.
ಪಾವಗಡ ಪಟ್ಟಣದ ಎಸ್ ಎಸ್ ಕೆ ಹಳೆ ಛತ್ರದಲ್ಲಿ ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪವಿಭಾಗ, ಪಾವಗಡ ಪೊಲೀಸ್ ಠಾಣೆ ವತಿಯಿಂದ ಆಟೋ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಇತ್ತೀಚಿಗೆ ಅಪಘಾತಗಳು ಹೆಚ್ಚಾಗುತ್ತಿದ್ದು ಈ ಹಿನ್ನಲೆ ಆಟೋ ಚಾಲಕರು ಸಾರಿಗೆ ಇಲಾಖೆಯ
ಮಾನದಂಡಗಳನ್ನು ಅನುಸರಿಸದೆ ಅಗತ್ಯ ದಾಖಲಾತಿಗಳಿಲ್ಲದೆ ಬೇಕಾಬಿಟ್ಟಿ ಆಟೋ ಚಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಆಗಸ್ಟ್ 1 ರೊಳಗೆ ದಾಖಲಾತಿ ಸರಿಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಆಟೋಗಳಿಗೆ ಸಂಬಂದ ಪಟ್ಟ ದಾಖಲಾತಿ ನೀಡಿ ಪೊಲೀಸ್ ಠಾಣೆಯ ಕ್ರಮ ಸಂಖ್ಯೆಯನ್ನು ಪಡೆದು ಆಟೋಗಳನ್ನು ಚಲಾಯಿಸುವಂತೆ ಖಡಕ್ ಸಂದೇಶ ನೀಡಿದರು.
ನಾಳೆಯಿಂದಲೇ ರಸ್ತೆ ಸುರಕ್ಷಾ ನಿಯಮಗಳು ಪಾಲಿಸುವುದರೊಂದಿಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸಿವುದು
ಮತ್ತು ಆಟೋಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬುವುದನ್ನು ನಿಷೇದಿಸಿದೆ ಪ್ರಯಾಣಿಕರೊಂದಿಗೆ ಸಭ್ಯತೆ ಯಿಂದ ವರ್ತಿಸುವುದು, ಸರತಿ ಸಾಲಿನಲ್ಲಿ ಆಟೋಗಳ ನಿಲುಗಡೆ ಇನ್ನೂ ಮುಂತಾದ ಕಟ್ಟಪ್ಪಣೆಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಮಸ್ಯೆಗಳನ್ನು ಅಲಿಸಿದ ಸಿ, ಪಿ,ಐ,ಸುರೇಶ್ ಗ್ಯಾಸ್ ಬಂಕ್ ಸ್ಥಾಪನೆ, ಆಟೋ ನಿಲ್ದಾಣಗಳಲ್ಲಿ ಮೂಲಭೂತ ಸೌಲಭ್ಯ, ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಮನ್ವಯವಾಗಿ ಚರ್ಚಿಸಿ ಆಟೋ ದಾಖಲಾತಿಗಳನ್ನು ಸರ್ಕಾರ ನಿಗದಿಪಡಿಸಿರುವ ವೆಚ್ಚದಲ್ಲಿ ಸರಿಪಡಿಸಲು ಸಾರಿಗೆ ಇಲಾಖೆ ಅಧಿಕಾರಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಪ್ರವೀಣ್, ದೀಪಕ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್, ಆಟೋ ಚಾಲಕರ ಸಂಘಟನೆಯ ಪದಾಧಿಕಾರಿಗಳು, ಸುಮಾರು 200 ಕ್ಕೂ ಹೆಚ್ಚು ಆಟೋ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ ಪಾವಗಡ ಕೆ ಮಾರುತಿ ಮುರಳಿ