ತುಮಕೂರು:ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಮಟ್ಟದ ಉದ್ಯಮಿ ಮಿತ್ರ ಸಹಕಾರ ಸಂಘ ನಿಯಮಿತ ಸ್ಥಾಪನೆ ಮಾಡಲಾಗಿದೆ ಎಂದು ಉದ್ಯಮಿ ಮಿತ್ರ ಸಹಕಾರ ಸಂಘದ ಮುಖ್ಯಪ್ರವರ್ತಕ ಸಂತೋಷ್ ಕುಮಾರ್.ಹೆಚ್.ಎನ್.ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೊಸದಾಗಿ ಉದ್ದಿಮೆ ಆರಂಭಿಸುವ ಯುವಜನರಿಗೆ ಜ್ಞಾನದ ಕೊರತೆಯಿಂದ ಕೆಲವಷ್ಟು ದಿನ ಉದ್ದಿಮೆ ನಡೆಸಿ, ನಂತರ ಬಾಗಿಲು ಹಾಕಿರುವ ಪ್ರಕರಣಗಳೇ ಹೆಚ್ಚಿವೆ.ಬಂಡವಾಳ ಹೂಡಿಕೆ, ಸಂಪನ್ಮೂಲ ಕ್ರೂಢೀಕರಣ,ಮಾರುಕಟ್ಟೆ ಇನ್ನಿತರ ಸಮಸ್ಯೆಗಳನ್ನು ಎದುರಿಸಲಾಗದೆ. ಅರ್ಧಕ್ಕೆ ಕೈಬಿಡುವ ಪ್ರಸಂಗಗಳೇ ಹೆಚ್ಚಾಗಿವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಉದ್ಯಮಿ ಮಿತ್ರ ಸಹಕಾರ ಸಂಘ ಪ್ರಯತ್ನಿಸುತ್ತಿದೆ ಎಂದರು.
ಉದ್ಯಮಿ ಮಿತ್ರ ಸಹಕಾರಿ ಸಂಘ ಕೇವಲ ಹಣಕಾಸು ವ್ಯವಕಾರಕ್ಕೆ ಸಂಬಂಧಿಸಿದ ಸೋಸೈಟಿಯಲ್ಲ.ಬದಲಿಗೆ ಉದ್ದಿಮೆದಾರರು, ವ್ಯಾಪಾರಸ್ಥರು,ಮಾರಾಟಗಾರರು,ಏಜೆಂಟರುಗಳ ಹೀಗೆ ಬಹು ಹಂತದ ಸೇವೆಯನ್ನು ಉದ್ದಿಮೆದಾರರಿಗೆ ಒದಗಿಸಿ, ಯುವಜನರ ಬೆನ್ನೆಲುಬಾಗಿ ಕೆಲಸ ಮಾಡಲಿದೆ.ತುಮಕೂರಿನ ರೆಡ್ಕ್ರಾಸ್ ಭವನದಲ್ಲಿ ಮುಖ್ಯ ಕಚೇರಿಯಿದ್ದು, ರಾಜ್ಯದ ನಾಲ್ಕು ವಿಭಾಗಗಳಲ್ಲಿಯೂ ಸಂಪರ್ಕ ಕಚೇರಿಯನ್ನು ಹೊಂದಿದೆ.ಪ್ರಸ್ತುತ 250 ಜನ ಸದಸ್ಯರಿದ್ದು, ಈ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಂತೋಷಕುಮಾರ್ ತಿಳಿಸಿದರು.
ಉದ್ದಿಮೆದಾರರಾಗಲು ಬಯಸುವವರಿಗೆ ಡಿಪಿಆರ್ ನಿಂದ, ಪರವಾನಗಿ,ಉತ್ಪಾಧನಾ ಕಚ್ಚಾವಸ್ತು, ತಂತ್ರಜ್ಞಾನ, ಮಾರುಕಟ್ಟೆ, ಮಾರುಕಟ್ಟೆಯ ವಿಸ್ತರಣೆ ಸೇರಿದಂತೆ ಎಲ್ಲಾ ವಿಧದದಲ್ಲಿಯೂ ಉದ್ದಿಮೆ ಮಿತ್ರ ಸಹಕಾರ ಸಂಘದ ಸಹಾಯ ನೀಡಲಿದೆ.ಬ್ಯಾಂಕುಗಳ ಮೂಲಕ ಹೊಸ ಉದ್ದಿಮೆದಾರರಿಗೆ ಹಣಕಾಸು ನೆರವು ಒದಗಿಸುವುದು, ಮಾರುಕಟ್ಟೆ ವಿಸ್ತರಣೆಗಾಗಿ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಂಪರ್ಕ ಜಾಲ ಸೃಷ್ಟಿಸುವುದು ಸೇರಿದಂತೆ ಬಹುವಿಧವಾದ ಸೇವೆ ಒದಗಿಸಲಿದೆ ಎಂದರು.
ಉದ್ದಿಮೆದಾರರು, ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಎಂ.ಎಸ್.ಎಂ.ಇ. ಹಾಗೂ ಇನ್ನಿತರ ಯೋಜನೆಗಳ ಅಡಿಯಲ್ಲಿ ಹೇಗೆ ಸಾಲ, ಸೌಲಭ್ಯ ಪಡೆಯಬಹುದು ಎಂಬುದನ್ನು ಸಹ ಯುವ ಉದ್ದಿಮೆದಾರರಿಗೆ ಜಾಗೃತಿ ಮೂಡಿಸಲಾಗುವುದು.ಸ್ಟಾರ್ಟ್ ಅಫ್ಗಳ ಪ್ರಾರಂಭ,ಹಣಕಾಸಿನ ನೆರವು ನೀಡಲಾಗುವುದು.ಅಸಂಘಟಿತ ವಲಯದ ಸ್ವಯಂ ಉದ್ಯೋಗಿಗಳು, ಪ್ರಿಲಾನ್ಸರ್ಗಳು, ಯುವ ಉದ್ದಿಮೆದಾರರು, ಗ್ರಾಮೀಣ ಉದ್ಯಮಿಗಳು, ಮಹಿಳಾ ಉದ್ದಿಮೆದಾರರ ಸಹ ನಮ್ಮ ಸಹಕಾರಿ ಸಂಘದಲ್ಲಿ 1150 ರೂ ನೀಡಿ ಸದಸ್ಯತ್ವ ಪಡೆಯಬಹುದು. ಸದಸ್ಯರಿಗೆ ಯಶಸ್ವಿನಿ ಸೇರಿದಂತೆ ಸರಕಾರ ಸೌಲಭ್ಯಗಳ ಲಭ್ಯವಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಯಾಗುವಂತೆ ಸಂತೋಷಕುಮಾರ್ ಮನವಿ ಮಾಡಿದರು.
ಇದೇ ಪ್ರಥಮವಾಗಿ ವಾಹನ. ಮನೆ ಬಳಕೆಗೆ ಬಳಕೆ ಮಾಡುವ ಬ್ಯಾಟರಿಗಳ ಕುರಿತು ಕಾರ್ಯಾಗಾರ ಎರ್ಪಡಿಸಿದ್ದು, ಹಲವರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಮಿತ್ರ ಸಹಕಾರ ಸಂಘದ ಪ್ರವರ್ತಕರಾದ ರಾಮಮೂರ್ತಿ, ಅಜ್ಜಯ್ಯ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.