ಯುವಜನರು ಸ್ವಯಂ ಉದ್ಯೋಗಿಗಳಾಗಲು ಸುವರ್ಣಾವಕಾಶ ಜೂ.9ರಂದು ಪತ್ರಿಕಾ ಭವನದಲ್ಲಿ ವಿಶೇಷ ಕಾರ್ಯಾಗಾರ

ತುಮಕೂರು: ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಹೊರ ಹೊಮುತ್ತಲಿದ್ದಾರೆ ಇದರ ಜೊತೆಗೆ ನಿರುದ್ಯೋಗವು ಕೂಡಾ ಕಾಡುತ್ತಲೇ ಇದೆ ಸರ್ಕಾರ ಸಂಘ ಸಂಸ್ಥೆಗಳು ಕೇವಲ ಸ್ಪರ್ಧಾತ್ಮಕ ಮತ್ತು ಕೌಶಲ್ಯಾಧಾರಿತ ಪರಿಣಿತಿ ಹೊಂದಿದವರಿಗೆ ಮಾತ್ರ ಉದ್ಯೋಗಗಳನ್ನು ನೀಡುತ್ತಿದೆ ಈ ನಿಟ್ಟಿನಲ್ಲಿ ಇಂದಿನ ಯುವಜನರು ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗಿಗಳಾಗಿ ಪರಿವರ್ತನೆಗೊಂಡು ಇತರರಿಗೂ ಉದ್ಯೋಗ ನೀಡಲು ಬೆಂಬಲಿಸುವ ಸಲುವಾಗಿ ಉದ್ಯಮಿ ಪರಿವಾರ ಸೇವಾ ಫೌಂಡೇಶನ್ ಅರನ್ ವಿಕ್ ಇಂಡಸ್ತ್ರೀಯಲ್ ಸಿಸ್ಟಮ್ಸ್ ಪ್ರೈ.ಲಿ. ಸಹಯೋಗದೊಂದಿಗೆ ಸುವರ್ಣ ಅವಕಾಶವನ್ನು ಕಲ್ಪಿಸಿದೆ.

ತುಮಕೂರು ನಗರದ ಬಾಳನಕಟ್ಟೆಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕ ಭವನದಲ್ಲಿ ಜೂನ್ 9ರಂದು ಬೆಳಗ್ಗೆ 11ಗಂಟೆಗೆ ಯುವಕರು ಸ್ವಯಂ ಉದ್ಯೋಗಿಗಳಾಗಿ ಸಣ್ಣ ವ್ಯವಹಾರಗಳಲ್ಲಿ ತೊಡಗಿಸುವುದು ಮತ್ತು ಉದ್ಯಮಶೀಲತಾ ಜಾಗೃತಿಯನ್ನು ಉತ್ತೇಜಿಸಲು ಬ್ಯಾಟರಿ ನವೀಕರಣ ತಂತ್ರಜ್ಞಾನ ಮತ್ತು ಉದ್ಯಮಶೀಲತಾ ವ್ಯಾಪಾರ ಅವಕಾಶಗಳ ಕುರಿತು ಕಾರ್ಯಗಾರವನ್ನ ರೂಪುಗೊಳಿಸಿದೆ ಇದರಿಂದ ಹೊರಹೊಮ್ಮುವ ಯುವ ಜನರು ಸಣ್ಣ ಸಣ್ಣ ವ್ಯವಹಾರಗಳನ್ನು ಸ್ವಯಂ ಉದ್ಯೋಗಿಯಾಗಿ ರೂಪಿಸಿಕೊಂಡು ಇರುವ ಅವಕಾಶಗಳನ್ನು ಸದ್ಬಳಕೆ ಮಾಡುವಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಆಯೋಜನೆ ಮಾಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉದ್ಯಮಿ ಪರಿವಾರ ಸೇವಾ ಫೌಂಡೇಶನ್ ಮುಖ್ಯಸ್ಥರಾದ ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ಇ-ಮೇಲ್ chiefpromoter@udyamimithracoop.org
ನೋಂದಣಿಗೆ https://www.udyamimithracoop.org/register
ದೂರವಾಣಿ : 9900881079 /0816-2009909
ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!