ಪೊಲೀಸಪ್ಪನ ಅಜಾಗುರುಕತೆಗೆ ಬಲಿಯಾದ ಎರಡು ಬಡಜೀವಗಳು
ಇತ್ತೀಚೆಗೆ ಪೋಲೀಸ್ ಇಲಾಖೆಯಲ್ಲಿ ಬಡವರಿಗೆ ಒಂದು ಕಾನೂನು ಉಳ್ಳವರಿಗೆ ಒಂದು ಕಾನೂನು ಎಂಬಂತಾಗಿದೆ ಸರ್ವೆ ಸಾಮಾನ್ಯವಾಗಿ ಯಾವುದೇ ವಾಹನಗಳ ಅಪಘಾತ ಸಂಭವಿಸಿದಾಗ ಅಂದರೆ ದ್ವಿಚಕ್ರ ವಾಹನ ಮತ್ತು ಕಾರು ಲಾರಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದರೆ ದೊಡ್ಡ ವಾಹನಗಳ ಮೇಲೆ ಪ್ರಕರಣ ದಾಖಲಾಗುವುದನ್ನು ನಾವು ಕಂಡಿದ್ದೇವೆ ಆದರೆ ಇತ್ತೀಚಿಗೆ ತುಮಕೂರು ನಗರದಲ್ಲಿ ನಡೆದ ಪೊಲೀಸಪ್ಪನ ಖಾಸಗಿ ವಾಹನಕ್ಕೂ ದ್ವಿಚಕ್ರವಾಹನಕ್ಕೂ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದ ಸಾವವರರು ಪೊಲೀಸ್ ಅಪ್ಪನ ವಾಹನ ಗುದ್ದಿದ ರಭಸಕ್ಕೆ ಚಿಂತಾ ಜನಕ ಪರಿಸ್ಥಿತಿಗೆ ಸೇರುವಂತೆ ನಿರ್ಮಾಣವಾದ ಘಟನೆ ನಡೆದಿದ್ದು ಈ ಘಟನೆಯಲ್ಲಿ ತಪ್ಪು ಸರಿ ಯಾರದೆಂದು ಪರಿಸಿಲನೆ ಮಾಡದೆ ಪೊಲೀಸ್ ಠಾಣೆಯಲ್ಲಿ ತನ್ನ ಅಜಾಗರುಕತೆಯಿಂದ ವಾಹನ ಚಲಾಯಿಸಿ ದ್ವಿಚಕ್ರ ವಾಹನ ಸವಾರರಿಗೆ ಗುದ್ದಿದರೂ ಸಹ ಸ್ಥಳ ಪರಿಶೀಲನೆ ಮಾಡದೆ ಪೊಲೀಸಪ್ಪನು ತನ್ನ ಅಧಿಕಾರವನ್ನು ಬಳಸಿಕೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಅಮಾಯಕ ಕೂಲಿ ಕಾರ್ಮಿಕರ ಮೇಲೆಯೇ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಬಡ ಕುಟುಂಬದವರ ಆರೋಪವಾಗಿದೆ
ದಿನಾಂಕ 2-3-2025 ರಂದು ಬೆಳಿಗ್ಗೆ ಸುಮಾರು 9:30 ರ ಸಮಯದಲ್ಲಿ ನಾಗರಾಜು ಮತ್ತು ಎಸ್ ಕೆ ಮೂರ್ತಿ ಎಂಬುವರು ಕೆಎ 64 ಆರ್ 5178 ನಂಬರಿನ ಹೀರೋ ಸ್ಪ್ಂಡರ್ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ತುಮಕೂರು ನಗರದ ಗೋಕುಲ ಬಡಾವಣೆಯ ವೃತ್ತದ ಪೂರ್ವದ ಕಡೆಯಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿರುವಾಗ ಗಾನ ಶಾಲೆಯ ಸಮೀಪ ನಾಲ್ಕು ರಸ್ತೆಗಳು ಕೂಡುವ ರಸ್ತೆಯಲ್ಲಿ ತಿರುವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅದೇ ವೃತ್ತದ 7ನೇ ಕ್ರಾಸ್, ಉತ್ತರದ ಕಡೆಯಿಂದ ದಕ್ಷಿಣದ ಕಡೆ ಅತಿ ವೇಗ ಮತ್ತು ಅಜಾಗರುಕತೆಯಿಂದ ಬರುತ್ತಿದ್ದ ಕೆಂಪುಬಣ್ಣದ ಕಾರ್ K A 04 M V 9728 ಸಂಖ್ಯೆಯ ವಾಹನದ ಕಾರಿನ ಚಾಲಕ ಪೊಲೀಸ್ ಸಮವಸ್ತ್ರ ಧರಿಸಿದ್ದ ASI ಜಗದೀಶ್ ಎಂಬುವರು
ದ್ವಿಚಕ್ರವಾಹನದ ಮಧ್ಯಭಾಗಕ್ಕೆ ಅತಿ ವೇಗದಿಂದ ಗುದ್ದಿದ ರಭಸಕ್ಕೆ ನನ್ನ ತಮ್ಮ ನಾಗರಾಜು ಸುಮಾರು 20 ಅಡಿಗಳ ಮುಂದೆ ಚರಂಡಿಯ ಪಕ್ಕ ಬಿದ್ದಿರುತ್ತಾರೆ ಮತ್ತು ಮೂರ್ತಿ ರವರು ದ್ವಿಚಕ್ರ ವಾಹನ ಸಮೇತ ಸುಮಾರು 25 ಅಡಿಗಳ ಮುಂದೆ ರಸ್ತೆಯಲ್ಲಿ ಬಿದ್ದಿರುತ್ತಾರೆ.
ತಕ್ಷಣವೇ ಅಲ್ಲಿಯೇ ಇದ್ದಂತಹ ಸಾರ್ವಜನಿಕರು ಹಾಗೂ ಅವನ ಜೊತೆ ಕೆಲಸ ಮಾಡುವವರು ಇಬ್ಬರನ್ನು ಉಪಚರಿಸಿ ನೋಡಿ ನನ್ನ ತಮ್ಮ ನಾಗರಾಜರವರಿಗೆ ತಲೆಗೆ ಹೆಚ್ಚು ಪೆಟ್ಟು ಬಿದ್ದು ಎರಡು ಕಿವಿಗಳಲ್ಲಿ ರಕ್ತಸ್ರವವಾಗಿರುತ್ತದೆ ಹಾಗೂ ಕೈ ಕಾಲ್ ಎದೆಗೆ ಗಾಯಗಳಾಗಿರುತ್ತವೆ ಜೊತೆಯಲ್ಲಿದ್ದ ಮೂರ್ತಿರವರಿಗೆ ಕಾರು ಹೊಡೆದ ರಭಸಕ್ಕೆ ಅಲ್ಲಿಯೇ ಕಾಲು ಮುರಿದು ನೇತಾಡುತ್ತಿದ್ದು ಕೈಕಾಲು ತಲೆಗೆ ಪೆಟ್ಟು ಬಿದ್ದು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿರುತ್ತದೆ.
ತಕ್ಷಣವೇ ಆಟೊ ದಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಅವರನ್ನು ಚಿಕಿತ್ಸೆಗಾಗಿ ದಾಖಲಿಸಿ ನನಗೆ ದೂರವಾಣಿ ಮೂಲಕ ಮಾಹಿತಿಯನ್ನು ತಿಳಿಸಿರುತ್ತಾರೆ ಅದರಂತೆ ನಾನು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ವಿಚಾರಿಸಿದಾಗ ನನ್ನ ತಮ್ಮನಾದ ನಾಗರಾಜು ಪ್ರಜ್ಞಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಿವಿ ತಲೆಯಲ್ಲಿ ರಕ್ತ ಸೋರುತಿದ್ದು ಕೈಕಾಲುಗಳು ಗಾಯಗೊಂಡಿರುತ್ತವೆ. ತಕ್ಷಣವೇ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿ 108 ಆಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ತಲೆಗೆ ಆಪರೇಷನ್ ಮಾಡಿರುತ್ತಾರೆ ಸುಮಾರು ಮೂರು ದಿನಗಳ ಕಾಲ ಪ್ರಜ್ಞಹೀನ ಸ್ಥಿತಿಯಲ್ಲಿದ್ದು ನಾನು ನನ್ನ ತಮ್ಮನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಕೊಡಿಸುತ್ತಿದ್ದೇನು ಈ ಸಂದರ್ಭದನ್ನು ಬಳಸಿಕೋಂಡು ಪೊಲೀಸರು ಅದೇ ದಿನಾಂಕ ನನ್ನ ತಮ್ಮನಿಗೆ ಅಪಘಾತ ಗೊಳಿಸಿದ ಕಾರಿನ ಚಾಲಕ ಪೊಲೀಸ್ ಸಮವಸ್ತ್ರದಲ್ಲಿದ್ದ ಚೇಳುರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಜಗದೀಶ್ ರವರು ಅಪಘಾತ ಗೊಳಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ತಮ್ಮನ ಮೇಲೆ ಸುಳ್ಳು ದೂರು ದಾಖಲಿಸಿರುವುದು ತಿಳಿದುಬಂದಿರುತ್ತದೆ.
ಆದರೆ ಅತಿ ವೇಗ ಮತ್ತು ಅಜಾಗ್ರತೆಯಿಂದ ವಾಹನವನ್ನು ಚಲಾಯಿಸಿ ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಹಾಗೂ ಕಾರಿನ ವಾಹನದ ಮಾಲೀಕನ ಮೇಲೆ ಪ್ರಕರಣವನ್ನು ದಾಖಲಿಸಿ ಸರಿಯಾದ ರೀತಿಯಲ್ಲಿ ತನಿಖೆಯನ್ನು ಕೈಗೊಳ್ಳಬೇಕೆಂದು ಹಾಗೂ ಕಾನೂನಿನ ರಿತ್ಯಾ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಬೇಕೆಂದು ನಾಗರಾಜು ರವರ ಅಣ್ಣನಾದ ಕದರಪ್ಪನವರು ಮಾಧ್ಯಮದ ಮೂಲಕ ಜಿಲ್ಲಾ ವರಿಷ್ಟಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.