ತುಮಕೂರು ಜಿಲ್ಲೆ ಹಲವಾರು ಕ್ಷೇತ್ರದಲ್ಲಿ ಹೆಸರು ವಾಸಿಯದ ಜಿಲ್ಲೆ ಅದರಲ್ಲು ರಂಗಭೂಮಿಯ ತವರು ಎಂದು ಪ್ರಖ್ಯಾತವಾಗಿದೆ ವಿಶೇಷವಾಗಿ ತುಮಕೂರಿನ ಪೋಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ರಾತ್ರಿ ಪೋಲೀಸರೇ ಅಭಿನಯಿಸಿದ ಕುರುಕ್ಷೇತ್ರ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಹಲವಾರು ಒತ್ತಡಗಳ ನಡುವೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಮ್ಮಲ್ಲಿಯೂ ಸಹ ಕಲೆ ಇದೆ ಎಂಬುದನ್ನು ಬಹಳ ಅದ್ಭುತವಾಗಿ ಅಭಿನಯ ಮಾಡುವ ಮೂಲಕ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಿದ್ದು ವಿಶೇಷವಾಗಿತ್ತು.
ಈ ನಾಟಕದಲ್ಲಿ ಅಭಿಯಿಸಿದ ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್ ಮತ್ತು ನಗರ ಠಾಣೆ ಪೋಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ರವರ ಅಭಿನಯಕ್ಕೆ ಜಿಲ್ಲೆಯ ಕಲಾಭಿಮಾನಿಗಳು ಪ್ರೇಕ್ಷಕರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ದುರ್ಯೋಧನ ಪಾತ್ರಧಾರಿಯಾದ ದಿನೇಶ್ ಕುಮಾರ್ ರವರು ಛಲದಂಕ ಮಲ್ಲ ದುರ್ಯೋಧನನ ಪಾತ್ರದಲ್ಲಿ ರಂಗ ಪ್ರವೇಶ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಪೋಲೀಸರು ಶಿಳ್ಳೆ ಹಾಕುತ್ತಾ ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಸುರಿಸುತ್ತಾ ಸಂಭ್ರಮಿಸಿದರು.

ಇಷ್ಟೆಲ್ಲ ಅಭಿಮಾನಿಗಳು ಕಲಾಭಿಮಾನಿಗಳು ಸಂಭ್ರಮಿಸಿದರೂ ಯಾವುದಕ್ಕೂ ವಿಚಲಿತರಾಗದೇ ದಿನೇಶ್ ಕುಮಾರ್ ರವರು ನಾಟಕದ ಡೈಲಾಗ್ ಗಳನ್ನು ಎತ್ತರದ ಧ್ವನಿಯಲ್ಲಿ ಹಾಗೂ ತಮ್ಮದೇ ಆದ ಶೈಲಿಯಲ್ಲಿ ಅಭಿನಯವನ್ನು ಮಾಡಿ ಕಲಾಭಿಮಾನಿಗಳನ್ನು ರಂಜಿಸಿದರು. ಇದೇ ರೀತಿ ಅರ್ಜುನ ಪಾತ್ರ ಧಾರಿ ಮತ್ತು ಶ್ರೀ ಕೃಷ್ಣನ ಪಾತ್ರಧಾರಿ ಸಹ ಉತ್ತಮವಾಗಿ ಆಭಿನಯಿಸಿದರು. ಈ ಕುರುಕ್ಷೇತ್ರ ನಾಟಕವನ್ನು ನೋಡಲು ನೂರಾರು ಮಂದಿ ಆಸೀನರಾಗಿದ್ದರು ಶಿಳ್ಳೆ ಚಪ್ಪಾಳೆಯನ್ನು ಹಾಕುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು.
ಮಾಜಿ ಸಚಿವ ಎಸ್. ಶಿವಣ್ಣ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ವರಿಷ್ಠಾಧಿಕಾರಿ ಕೆ, ವಿ, ಅಶೋಕ್, ಜಿಲ್ಲಾ ಪಂಚಾಯತ್ ಸಿಇಓ ಪ್ರಭು, ಪಾಲಿಕೆ ಆಯುಕ್ತರಾದ ಅಶ್ವಿಜ, ಹೆಚ್ಚುವರಿ ಎಸ್ಪಿ ಮರಿಯಪ್ಪ ಸೇರಿದಂತೆ ಪೋಲೀಸ್ ಅಧಿಕಾರಿಗಳು ಆಸೀನರಾಗಿ ಈ ನಾಟಕಕ್ಕೆ ಸಾಕ್ಷಿಯಾದರು.