ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ರಾಜೇಶ್ ಬಿನ್ ಶಿವಣ್ಣ, ರವರು, ದಿನಾಂಕ 02/02/2025 ರಂದು ರಾತ್ರಿ ಯಾವುದೋ ಹೊತ್ತಿನಲ್ಲಿ ಯಾರೋ ಕಳ್ಳರು ತಮ್ಮ ಮನೆಯ ಮುಂದೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಇಟ್ಟಿದ್ದ ರಾಗಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದು ಈ ವಿಚಾರವಾಗಿ ಗುಬ್ಬಿ ಪೊಲೀಸ್ ಠಾಣಾ ಮೊ.ನಂ.35/2025 ಕಲಂ 303(2) ಬಿ.ಎನ್.ಎಸ್ ಪ್ರಕರಣ ದಾಖಲು ಮಾಡಿದ್ದು ತನಿಖೆಯನ್ನು ಕೈಗೊಂಡಿದ್ದು, ಬಾತ್ಮೀದಾರರಿಂದ ಬಂದ ಮಾಹಿತಿಯಂದೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳಾದ ಗುಬ್ಬಿ ಟೌನ್ ವಾಸಿ ಪ್ರಶಾಂತ್ ಕುಮಾರ್ ಬಿನ್ ಮೂರ್ತಿ ಮತ್ತು ರಾಜ ಬಿನ್ ಗುರುವಪ್ಪ ಸಾತೇನಹಳ್ಳಿ ಗ್ರಾಮ ಇವರನ್ನು ದಿನಾಂಕ:-02/02/2025ರಂದು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಆರೋಪಿಗಳ ಕಡೆಯಿಂದ 1,55,000/- ರೂ ಬೆಳೆ ಬಾಳುವ 3,713 ಕೆ ಜಿ ರಾಗಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಕೆಎ.06.ಎಸಿ.1344 ನೇ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ ಹಾಗೂ ಒಟ್ಟು 02 ಪ್ರಕರಣಗಳನ್ನು ಭೇದಿಸಲು ಗುಬ್ಬಿ ಪೊಲೀಸ್ ಯಶಸ್ವಿಯಾಗಿರುತ್ತಾರೆ.
ಆರೋಪಿತರ ಹೆಸರು ಮತ್ತು ವಿಳಾಸ:
1) ಪ್ರಶಾಂತ್ ಕುಮಾರ್ ಬಿನ್ ಮೂರ್ತಿ, 30 ವರ್ಷ, ವಾಸ: ಮಹಾಲಕ್ಷ್ಮೀ ನಗರ ಗುಬ್ಬಿ ಟೌನ್
2) ರಾಜ ಬಿನ್ ಗುರವಯ್ಯ, 25 ವರ್ಷ ವಾಸ: ಸತ್ತೇನಹಳ್ಳಿ ಗ್ರಾಮ, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು, ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ಸಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಬಿ.ಕೆ ಶೇಖರ್ ರವರ ಮಾರ್ಗಸೂಚನೆ ಮೇರೆಗೆ, ಗುಬ್ಬಿ ಆರಕ್ಷಕ ವೃತ್ತ ನಿರೀಕ್ಷಕರವರಾದ ರಾಘವೇಂದ್ರ, ಟಿ.ಆರ್. ಹಾಗೂ ಗುಬ್ಬಿ ಪೊಲೀಸ್‌ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುನೀಲ್‌ಕುಮಾರ್ ಜಿ ಕೆ. ಸಿಬ್ಬಂದಿಯವರಾದ ನವೀನ್‌ಕುಮಾರ್, ವಿಜಯ್ ಕುಮಾರ್, ರಬ್ಬಾನಿ, ಭೂತೇಶ್, ನಟರಾಜು, ಪ್ರಶಾಂತ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ಮತ್ತು ದುಶ್ಯಂತ್ ರವರನ್ನು ಒಳಗೊಂಡ ತಂಡ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.