ತುಮಕೂರು : ಇತ್ತಿಚಿನ ರಾಜಕೀಯ ಬೆಳವಣಿಗೆಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಅವರು ಸಹ ಎಲ್ಲಾ ರಂಗದಲ್ಲಿ ಅಧಿಕಾರಕ್ಕೆ ಬರಬೇಕು ಯಾವುದೇ ರಾಜಕೀಯ ಪಕ್ಷಗಳು ಅವರನ್ನು ಗುರುತಿಸುವಂತಹ ಕೆಲಸ ವಾಗಬೇಕು ಎಂದು ಗುಬ್ಬಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಕೆ, ಎಸ್, ಆರ್, ಟಿ, ಸಿ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ರವರ ಹೇಳಿಕೆಯನ್ನು ಸ್ವಾಗತಿಸಿದ ಎಡಗೈ ಸಮುದಾಯದ ಮುಖಂಡರು ಇಂದು ಅವರಿಗೆ ಅಭಿನಂದನೆ ಸಲ್ಲಿಸಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರು ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಜಕೀಯ ಕ್ಷೇತ್ರದಲ್ಲಿ ಈಗಾಗಲೇ ಎಲ್ಲಾ ಸಮುದಾಯದ ಸಚಿವರು ಮತ್ತು ಶಾಸಕರುಗಳು ಇದ್ದು ಎಡಗೈ ಸಮುದಾಯ ಎಲ್ಲೋ ಒಂದು ಕಡೆ ರಾಜಕೀಯದಿಂದ ಹಿಂದುಳಿದಿದೆ ಸಾಮಾಜಿಕ ನ್ಯಾಯವೆಂದರೆ ಎಲ್ಲರಿಗೂ ಸಮಾನವಾದ ಅವಕಾಶ ನೀಡುವುದೇ ಸಾಮಾಜಿಕ ನ್ಯಾಯ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿರುವ ಎಡಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಮುಂಬರುವ ದಿನಗಳಲ್ಲಿ ಎಡಗೈ ಸಮುದಾಯದ ಮುಖಂಡರನ್ನು ಗುರುತಿಸಿ ಅವರಿಗೆ ರಾಜಕೀಯ ಅಸ್ತಿತ್ವಕ್ಕೆ ಅವಕಾಶ ಕೊಡಿಸುವಂತ ಕೆಲಸ ಆಗಬೇಕು ಎಂದು ಹೇಳಿದ ಶಾಸಕ ಎಸ್ ಆರ್ ಶ್ರೀನಿವಾಸ್ ರವರ ಹೇಳಿಕೆಯನ್ನು ಸ್ವಾಗತಿಸುವ ಮೂಲಕ ಅವರಿಗೆ ಅಭಿನಂದನೆಯನ್ನು ಸಲ್ಲಿಸುತಿದ್ದೇವೆ ಎಂದು ಎಂ,ಎನ್ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನರಸಯ್ಯನವರು ತಿಳಿಸಿದರು.
ತುಮಕೂರು ನಗರದ ಶಾಸಕರ ನಿವಾಸದಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಸಿ, ಮಾತನಾಡಿದ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಯ್ಯನವರು ಇಲ್ಲಿಯವರೆಗೆ ಯಾವುದೇ ಪಕ್ಷದ ನಾಯಕರುಗಳು ನಮ್ಮ ಎಡಗೈ ಸಮುದಾಯದ ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಸಹ ಧ್ವನಿ ಎತ್ತಲಿಲ್ಲ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮುದಾಯವನ್ನು ಕೇವಲ ಚುನಾವಣೆ ಗಾಗಿ ಬಳಸಿಕೊಂಡು ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಎಡಗೈ ಸಮುದಾಯದ ರಾಜಕೀಯ ಅಸ್ತಿತ್ವದ ವಿಚಾರವಾಗಿ ಯಾರೂ ಸಹ ಚಕಾರ ಎತ್ತಲಿಲ್ಲ ಸರಳತೆಯ ಸಾಹುಕಾರ ಗುಬ್ಬಿ ತಾಲೂಕಿನಲ್ಲಿ ಸದಾ ದಲಿತರ ಒಡನಾಡಿಯಾಗಿರುವಂತಹ ಹಾಗೂ ಬಡವರ ಬಗ್ಗೆ ಕಾಳಜಿ ತೋರುವಂತಹ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಶಾಸಕರಾದ ಎಸ್ ಆರ್ ಶ್ರೀನಿವಾಸ್ ರವರು ಅವರು ಇಂದು ಗಂಟಾಗೋಷವಾಗಿ ನಮ್ಮನ್ನಾಳುವ ಸರ್ಕಾರಕ್ಕೆ ಜಿಲ್ಲೆಯ ಎಡಗೈ ಸಮುದಾಯದ ರಾಜಕೀಯ ಅಸ್ತಿತ್ವದ ಬಗ್ಗೆ ಧ್ವನಿ ಎತ್ತಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಆತ್ಮಸ್ಥೈರ್ಯ ಹೆಚ್ಚಿಸಿದಂತಾಗಿದೆ ಹಾಗಾಗಿ ಅವರಿಗೆ ತುಮಕೂರು ಜಿಲ್ಲೆಯ ಎಲ್ಲ ಸಮಸ್ತ ಎಡಗೈ ಸಮುದಾಯದ ಬಂಧುಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಗ್ರಾಪಂ ಅಧ್ಯಕ್ಷ ನರಸಯ್ಯನವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಟ್ಟೂರು ರಂಗಸ್ವಾಮಿ, ಕೊಡಿಯಾಲ ಮಹದೇವಯ್ಯ,ಕುಂದರನಹಳ್ಳಿ ನಟರಾಜು, ಎಂ ಎನ್ ಕೋಟೆ ಕಲ್ಲೇಶ್, ಗ್ಯಾರೆಹಳ್ಳಿ ಯೋಗೀಶ್, ಹೊಸಹಳ್ಳಿ ರವಿಕುಮಾರ್, ಮಂಚಿಹಳ್ಳಿ ರಾಮು ಹಾಗೂ ಮುಂತಾದವರು ಉಪಸ್ಥಿತರಿದ್ದರು.