ಸಮಾನ ಮನಸ್ಕ ವಕೀಲರಿಂದ ಸಹಕಾರ ಸಚಿವ ಕೆ, ಎನ್, ರಾಜಣ್ಣನವರ ಅಮೃತ ಮಹೋತ್ಸವಕ್ಕೆ ಅಭಿನಂದನೆಗಳು

ಐತುಮಕೂರು : ರಾಜ್ಯದ ಸರ್ವ ಜನಾಂಗದ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ ಸಹಕಾರ ರತ್ನ ಎಂಬ ಬಿರುದನ್ನು ಪಡೆದಿರುವ ಕೆ, ಎನ್, ರಾಜಣ್ಣನವರ 75 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿರುವುದು ನಾಡಿನ ಜನತೆಗೆ ಸಂತಸದ ವಿಷಯ ಎಂದು ವಕೀಲರಾದ ಬಿ ಜಿ ಲಿಂಗರಾಜು ತಿಳಿಸಿದರು.

ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಸಮಾನ ಮನಸ್ಸಿನ ವಕೀಲರು ಸೇರಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆ, ಎನ್ ರಾಜಣ್ಣನವರು ವಕೀಲ ವೃತ್ತಿಯಲ್ಲಿ ನಮ್ಮೆಲ್ಲರಿಗೂ ಹಿರಿಯರಾಗಿದ್ದು ತುಮಕೂರು ಜಿಲ್ಲೆಯ ವಕೀಲರಿಗೆ ಅವರು ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ರಾಜಣ್ಣನವರು ಜಿಲ್ಲೆಯಲ್ಲಿ ಯಾವುದೇ ಸಮುದಾಯದ ವ್ಯಕ್ತಿಗಳು ಅವರನ್ನು ಬೇಟಿ ಮಾಡಿ ಸಹಾಯವನ್ನು ಕೋರಿದಾಗ ಅವರಿಗೆ ಪ್ರೀತಿ ತೋರಿಸಿ ಸಹಾಯ ಮಾಡಿದ ಸರ್ವಜನಾಂಗದ ಸರದಾರ ಎಂದು ಹೇಳಲು ನಮಗೆ ಹೆಮ್ಮೆ ಆಗುತ್ತದೆ ಅಂತಹ ಮೇರು ಪರ್ವತವಾದರಿಗೆ ಅಮೃತ ಮಹೋತ್ಸವ ಮಾಡುತ್ತಿರುವುದು ಜಿಲ್ಲೆಯ ಜನತೆಗೆ ಸಂತಸದ ದಿನವಾಗಿದೆ ಎಂದು ತಿಳಿಸಿದರು.

ನಾಳೆ ನೆಡೆಯುವ ಕೆ, ಎನ್, ಆರ್ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನ ವಕೀಲರು ವಕೀಲರ ಸಮವಸ್ತ್ರ ಧರಿಸುವ ಮೂಲಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಿ ಸಹಕಾರ ರತ್ನ ಕೆ,ಎನ್, ರಾಜಣ್ಣನವರಿಗೆ ಅಭಿನಂದನೆ ಸಲ್ಲಿಸುವಂತೆ ಸಮಾನ ಮನಸ್ಸಿನ ವಕೀಲ ಬಾಂಧವರಲ್ಲಿ ಮನವಿ ಮಾಡಿದರು .

 

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಆರ್, ಪಾತಣ್ಣ ಕೆ,ಸಿ, ವೆಂಕಟೇಶ್,ಲೋಕೇಶ್ ಎನ್,ಆರ್, ಸುರೇಶ್ ಎಸ್, ಕೆ ಎನ್ ಹರೀಶ್ ಕಂಬತ್ತನಹಳ್ಳಿ ಹಾಗೂ ಸಮಾನ ಮನಸ್ಸಿನ ವಕೀಲ ಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!