ದಿನಾಂಕ:-05/09/2024 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಗುಬ್ಬಿ ತಾಲ್ಲೂಕು ಹೇರೂರು ಗ್ರಾಮದ ಸಿ.ಐ.ಟಿ ಕಾಲೇಜಿನ ಮುಂಭಾಗವಿರುವ ಕೇಕ್ ಹೌಸ್ ನಲ್ಲಿ ಬಸವರಾಜು ಬಿನ್ ನಂಜೇಗೌಡ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು. ನಂತರ ಮೃತ ಬಸವರಾಜು ರವರ ಮೊಬೈಲ್ ನ್ನು ಪರಿಶೀಲಿಸಲಾಗಿ ಆತ್ಮಹತ್ಯೆಗೆ ಕಾರಣ ಹೇರೂರು ಗ್ರಾಮದ ವಾಸಿಯಾದ ನಾಗರಾಜು @ ಬಡ್ಡಿ ನಾಗ ಈತನು ತಾನು ಕೊಟ್ಟ ಸಾಲಕ್ಕಾಗಿ ಬಸವರಾಜು ರವರಿಂದ ಚೆಕ್ ಗಳನ್ನು ಪಡೆದುಕೊಂಡಿದ್ದು, ಚೆಕ್ ಗಳನ್ನು ವಾಪಸ್ ಕೊಡುವಂತೆ ಕೇಳಿದಾಗ ಬಸವರಾಜು ರವರನ್ನು ಬೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿರುತ್ತಾರೆ ಎಂದು ಬಸವರಾಜು ರವರ ಪತ್ನಿ ಶ್ರೀಮತಿ ಭವ್ಯ ರವರು ನೀಡಿದ ದೂರನ್ನು ಪಡೆದು ಗುಬ್ಬಿ ಠಾಣಾ ಮೊ.ನಂ.336/2024 ಕಲಂ 108 ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆಯನ್ನು ಕೈಗೊಂಡಿರುತ್ತದೆ.
ದಿನಾಂಕ:-08/09/2024 ರಂದು ರಾತ್ರಿ 8.30 ಗಂಟೆಗೆ ದಾಬಸ್‌ಪೇಟೆ ಬಸ್ ನಿಲ್ದಾಣದಲ್ಲಿ ಪ್ರಕರಣದ ಆರೋಪಿ ನಾಗರಾಜು ಹೆಚ್ ಎಂ @ ಬಡ್ಡಿನಾಗ ಬಿನ್ ಮೂಡ್ಲಗಿರಿಯಪ್ಪ, 39 ವರ್ಷ, ಕಾಪೆರ್ಂಟರ್ ಕೆಲಸ ವಾಸ: ಹೇರೂರು ಫಾರಂ ತೋಟದ ಮನೆ ಕಸಬಾ ಹೋಬಳಿ ಗುಬ್ಬಿ ತಾಲ್ಲೂಕು ಹಾಲಿ ವಾಸ: 04 ನೇ ಕ್ರಾಸ್ ವಿನಾಯಕ ನಗರ ಗುಬ್ಬಿ ಟೌನ್‌ರವರನ್ನು ಬಂಧಿಸಿದ್ದು, ನಂತರ ಆರೋಪಿಯ ಮನೆಯನ್ನು ಶೋಧಿಸಿ. ಮನೆಯಲ್ಲಿ ಮೃತ ಬಸವರಾಜು ರವರಿಗೆ ಸೇರಿದ 03 ಚೆಕ್ ಗಳು ಹಾಗೂ ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ.
ಆರೋಪಿ ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರರುಗಳಾದ ವಿ. ಮರಿಯಪ್ಪ ಮತ್ತು ಬಿ.ಎಸ್. ಅಬ್ದುಲ್ ಖಾದರ್ ರವರ ಹಾಗೂ ಸಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಕೆ ಶೇಖರ್ ರವರ ಮಾರ್ಗದರ್ಶನದಲ್ಲಿ ಗೋಪಿನಾಥ ವಿ ಹಾಗೂ ಗುಬ್ಬಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಜಿ.ಕೆ ಹಾಗೂ ನವೀನ್ ಕುಮಾರ್ ಹಾಗೂ ವಿಜಯ್ ಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ಅದರಂತೆ ಆರೋಪಿಯನ್ನು ಬಂಧಿಸಲು ಯಶಸ್ವಿಯಾದ ತಂಡವನ್ನು ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಐ.ಪಿ.ಎಸ್ ರವರು ಅಭಿನಂದಿಸಿರುತ್ತಾರೆ.