ತುಮಕೂರು : ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತದೆ ಅದನ್ನು ಗುರುತಿಸಿ ಹೊರಗೆ ತರುವ ಉದ್ದೇಶದಿಂದ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಬೇಕು ಎಂದು ಶ್ರೀ ವಿಶ್ವ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ತಿಳಿಸಿದರು.
ಅವರು ಶುಕ್ರವಾರ ಮಲ್ಲಸಂದ್ರ ಗ್ರಾಮದ ಶ್ರೀ ವಿಶ್ವ ಭಾರತಿ ಪ್ರೌಡಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ತುಮಕೂರು ಹಾಗು ಮಲ್ಲಸಂದ್ರ ಕ್ಲಸ್ಟರ್ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಪ್ರತಿಯೊಬ್ಬ ಶಿಕ್ಷಕರು ಶಾಲೆಗೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಭಾವಿಸಬೇಕು, ಹಾಗು ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆ ತರುವ ಉದ್ದೇಶದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ವನಜಾ ಶಶಿಧರ್ ಮಾತನಾಡಿ ಶಿಕ್ಷಕರು ಮತ್ತು ಮಕ್ಕಳ ನಡುವೆ ಭಾಂದವ್ಯ ಅತ್ಯಂತ ಮುಖ್ಯವಾದದ್ದು ಅಂತಹ ಬಾಂಧವ್ಯವನ್ನು ಉಳಿಸಿ ಬೆಳೆಸುವ ನಮ್ಮ ಸಂಸ್ಥೆಯ ಪ್ರತಿಭೆಯುಳ್ಳ ಮಕ್ಕಳನ್ನು ಪ್ರೋತ್ಸಾಯಿಸುವ ಮೂಲಕ ಸಮಾಜದಲ್ಲಿ ಉತ್ತಮ ಗುಣಮಟ್ಟದ ಕಳಿಗೆ ಸಹಕರಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನರ್ ವ್ಹೀಲ್ ಕಾರ್ಯದರ್ಶಿ ಶ್ರೀಮತಿ ಪ್ರಿಯದರ್ಶಿನಿ, ಮಲ್ಲಸಂದ್ರ ಪಿಡಿಓ ವಿನಾಯಕ್, ಮುಖ್ಯ ಶಿಕ್ಷಕರಾದ ಜಾವೇದ್ ಫಾಷ, ವೀರನಾಗಯ್ಯ, ಸಿ.ಆರ್ ಪಿ ಗಿರೀಶ್, ಶಿಕ್ಷಕರಾದ ಮಂಜುನಾಥ್, ಮಲ್ಲಸಂದ್ರ ಕಾರ್ಯದರ್ಶಿ ಚಿಕ್ಕರಂಗಯ್ಯ, ಹಾಗು ಕ್ಲಸ್ಟರ್ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರು ಮತ್ತು ನೂರಾರು ಮಕ್ಕಳು ಪಾಲ್ಗೊಂಡಿದ್ದರು.