ತುಮಕೂರು : ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಧೇಣಿಗೆಯಾಗಿ ನೀಡುವುದರ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.
ತುಮಕೂರಿನ ದಿಬ್ಬೂರು ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿನ ಮಕ್ಕಳು ಮಧ್ಯಾಹ್ನ ಊಟಕ್ಕೆ ಉಪಯೋಗಿಸಲು ತಟ್ಟೆ, ಲೋಟಗಳು ಹಾಗೂ ಶೈಕ್ಷಣಿಕ ಪರಿಕರಗಳನ್ನು ಧೇಣಿಗೆಯಾಗಿ ನೀಡಿ ವಿಶಿಷ್ಠ ರೀತಿಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಶಾಲಾ ಮುಖ್ಯೋಪಾಧ್ಯಯರಾದ ನರಸಿಂಹಮೂರ್ತಿರವರು ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಬಲಿದಾನದ ಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಿ, ನಂತರ ಇಂದು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಘಟಕದವರು ನಮ್ಮ ಶಾಲೆಗೆ ಆಗಮಿಸಿ ಇಲ್ಲಿನ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಪರಿಕರಗಳನ್ನು ನೀಡಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ನಮ್ಮ ಸುದೈವವಾಗಿದೆ, ನಮ್ಮ ಶಾಲೆಯು ಇತ್ತೀಚಿನ ದಿನಗಳಲ್ಲಿ ಕೆಲವು ಕುಂದು ಕೊರತೆಗಳಿಂದ ಬಳಲುತ್ತಿದ್ದು, ಇದನ್ನು ಅರಿತ ಇವರು ಶಾಲೆಯ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮುಂದೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು.
ನಂತರ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ರವರು ಮಾತನಾಡಿ ವಿದೇಶಿಯರ ಗುಲಾಮಗಿರಿಯಿಂದ ವಿಮೋಚನೆಗೊಂಡ ಭವ್ಯ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 77 ವರ್ಷಗಳು ತುಂಬಿ 78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ, ಸ್ವದೇಶಿಯರ ಆಡಳಿತ ಈ 77 ವರ್ಷಗಳ ಸುದೀರ್ಘ ಅವಧಿಯಲ್ಲಿ ಭಾರತವು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆಯಾದರೂ ಸಂಪೂರ್ಣ ಅಭಿವೃದ್ದಿಯು ಸಕಾರಗೊಳ್ಳದೇ ಇರುವುದಕ್ಕೆ ಭಾರತದೊಳಗೆ ಅಂರ್ತಗತಗೊಂಡಿರುವ ವಿರೋಧ ಭಾಷೆಗಳನ್ನು ಮತ್ತು ಪ್ರತಿಗಾಮಿ ಶಕ್ತಿಗಳನ್ನು ನಮ್ಮನ್ನಾಳುತ್ತಿರುವ ಸರ್ಕಾರಗಳು ಸಮರ್ಥವಾಗಿ ನಿಭಾಯಿಸಿದ ಎಡವುತ್ತಿವೆ, ಅನಕ್ಷರತೆ, ಹಸಿವು, ಅಸ್ಪøಶ್ಯತೆ, ಅಪೌಷ್ಠಿಕತೆ, ಅನಾರೋಗ್ಯ, ಸೇರಿದಂತೆ ಹತ್ತು ಹಲವಾರು ಕುಂದು ಕೊರತೆಗಳು ಎದ್ದು ಕಾಣುತ್ತಿವೆ. ಇಂತಹ ಕುಂದು ಕೊರತೆಗಳನ್ನು ನಮ್ಮ ಸಮಿತಿಯ ವತಿಯಿಂದ ಕೊಂಚ ಮಟ್ಟದಲ್ಲಿಯಾದರೂ ನಿವಾರಿಸುವ ಪ್ರಯತ್ನಗಳಿಗೆ ನಾವು ಮುಂದಾಗಿದ್ದೇವೆ, ಅದರ ಪರಿಣಾಮದಿಂದ ನಮ್ಮ ಭಾರತದಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳನ್ನು ಮೊದಲಿನಿಂದಲೂ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ, ಅದರಂತೆ ಕೆಲ ವ್ಯಕ್ತಿಗಳಿಂದ ಈ ಶಾಲೆಯಲ್ಲಿನ ಮಕ್ಕಳ ಮಧ್ಯಾಹ್ನದ ಊಟಕ್ಕೆ ತಟ್ಟೆ, ಲೋಟಗಳು ಸೇರಿದಂತೆ ಕೆಲ ಪಠ್ಯೋಪಕರಣ ವಸ್ತುಗಳು ಅಗತ್ಯವಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ನಮ್ಮ ಸಮಿತಿಯ ವತಿಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಅದನ್ನು ಮಕ್ಕಳಿಗೆ ವಿತರಣೆ ಮಾಡುತ್ತಿರುವುದರ ಮೂಲಕ ನಾವು ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ.
ಇಂದಿನ ಮಕ್ಕಳೇ ದೇಶದ ಮುಂದಿನ ಪ್ರಜೆಗಳು ಎಂಬ ಮಾತುಗಳು ಮೊದಲಿನಿಂದಲೂ ಎಲ್ಲರೂ ಹೇಳಿಕೊಂಡು ಬರುತ್ತಾರೆ, ಆದರೆ ಸರ್ಕಾರಿ ಶಾಲೆಯಲ್ಲಿನ ಬಡ ಮಕ್ಕಳ ಕುಂದುಕೊರತೆ ಬಗ್ಗೆ ಯಾರೊಬ್ಬರೂ ಸಹ ಸರಿಯಾಗಿ ಯೋಚಿಸದೇ ಇರುವುದು ನಮ್ಮ ದುರದೃಷ್ಠಕರ ಸಂಗತಿ, ಇದನ್ನು ನಾವು ದೃಷ್ಠಿಯಲ್ಲಿಟ್ಟುಕೊಂಡು ಭಾರತದ ಪ್ರತಿಯೊಂದು ರಾಷ್ಟ್ರೀಯ ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ ನಮ್ಮ ಸಮಿತಿಯ ವತಿಯಿಂದ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಿ ಅವರಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಅದರಂತೆಯೇ ಈ ದಿವಸವೂ ಸಹ ದಿಬ್ಬೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿನ ಮಕ್ಕಳ ಅಗತ್ಯತೆಯನ್ನು ನಿವಾರಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿರುವುದು ನಮಗೆ ಸಂತಸ ತಂದಿದೆ ಎಂದು ಅತಿಥಿಗಳ ಭಾಷಣದಲ್ಲಿ ಎನ್.ಕೆ.ನಿಧಿಕುಮಾರ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯಲ್ಲಿ ಮೊದಲಿಗೆ ಧ್ವಜಾರೋಹಣ, ರಾಷ್ಟ್ರಗೀತೆ, ಅತಿಥಿಗಳ ಭಾಷಣ, ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ಮತ್ತು ಪಠ್ಯ ಪರಿಕರಗಳ ವಿತರಣೆ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು, ಕೊನೆಯಲ್ಲಿ ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎಸ್.ಡಿ.ಎಂ.ಸಿ. ಸದಸ್ಯರುಗಳು ಸೇರಿದಂತೆ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್, ನಗರಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಇಂದ್ರಕುಮಾರ್, ನಾರಾಯಣ್, ಜಗದೀಶ್ (ಟೈಲರ್), ನರಸಹನುಮಯ್ಯ, ಗಂಗಾಧರ್ ಜಿ.ಆರ್, ಗ್ರಾಮದ ಮುಖಂಡರುಗಳಾದ ವಿಜಯ್ ಕುಮಾರ್, ಭೈರೇಶ್ ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.