30 ವರ್ಷದಿಂದ ಪೋಲಿಸ್ ಮಖ್ಯ ಪೆದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಿಗುವುದೆ ಮುಂಬಡ್ತಿ ಭಾಗ್ಯ

ರಾಜ್ಯ ರಾಜಧಾನಿಗೆ ಹತ್ತಿರ ಇರುವ ಜಿಲ್ಲೆ ಎಂದರೆ ತುಮಕೂರು ಈ ಜಿಲ್ಲೆಯನ್ನು ಕಲ್ಪತರ ನಾಡು ಎಂದು ಕರೆಯಲ್ಪಡುತ್ತದೆ ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಷ್ಟೇ ಬೃಹದಾಕಾರವಾಗಿ ತುಮಕೂರು ಬೆಳೆಯುತ್ತಿದ್ದು ಈ ಜಿಲ್ಲೆಯು 11 ತಾಲೂಕುಗಳನ್ನು ಒಳಗೊಂಡಿದೆ ಬೆಂಗಳೂರಿಗೆ ಹತ್ತಿರವಾಗಿರುವ ಈ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಒಂದಲ್ಲ ಒಂದು ರೀತಿಯ ದೊಡ್ಡ ದೊಡ್ಡ ಕಾರ್ಖಾನೆಗಳು ಪ್ರಾರಂಭವಾಗುತ್ತಿದ್ದು ಅಷ್ಟೇ ಪ್ರಮಾಣದಲ್ಲಿ ತುಮಕೂರು ಜಿಲ್ಲೆಯಲ್ಲಿ ಜನಸಂಖ್ಯೆಯ ಪ್ರಮಾಣವು ಸಹ ಹೆಚ್ಚುತ್ತಿದ್ದು ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಇಂದಿನ ದಿನಮಾನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳ ದಾಖಲೆ ಮಟ್ಟ ಹೆಚ್ಚುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

 

 

ಆದರೆ ತುಮಕೂರು ಜಿಲ್ಲೆಯಲ್ಲಿ 42 ಪೊಲೀಸ್ ಠಾಣೆಗಳಿದ್ದು ಪ್ರತಿಯೊಂದು ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಮರುಕಳಿಸುವ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ 112 ತುರ್ತು ಪೋಲಿಸ್ ಸಹಾಯವಾಣಿ ಗಸ್ತು ವಾಹನಗಳನ್ನು ಜಾರಿಗೆ ತಂದಿದ್ದು ತುಮಕೂರು ಜಿಲ್ಲೆಯಲ್ಲಿ 22 ಸಾರ್ವಜನಿಕರ ತುರ್ತು ಸೇವಾ 112 ವಾಹನವಿದ್ದು ಈ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

 

ರಾಜ್ಯ ಸರ್ಕಾರ ಬೆಂಗಳೂರು ನಗರದದ್ಯಾಂತ್ಯ ಸಾರ್ವಜನಿಕ ಸಹಾಕ್ಕೆ ಅನುಕೂಲ ವಾಗುವಂತೆ 112 ತುರ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸಲು ಸುಮಾರುಸ 500 ಎ ಎಸ್ ಐ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಬೆಂಗಳೂರಿನಷ್ಟೇ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ 112 ತುರ್ತು ಸೇವಾ ವಹನದಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳ ಕೊರತೆಯ ಜೊತೆಗೆ ಹೆದ್ದಾರಿಯ ಗಸ್ತಿನ ಕರ್ತವ್ಯಕ್ಕೂ ಸಹ ಇದೇ ವಾಹನವನ್ನು ಬಳಸಿಕೊಳ್ಳಲಾಗುತ್ತಿದ್ದು ಈ ವಾಹನದಲ್ಲಿ ಪೋಲಿಸ್ ಪೆದೆ ಮುಖ್ಯಪೆದೆಯನ್ನು ಹೊರತುಪಡಿಸಿ ಉನ್ನತ ಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂಬ ಆದೇಶವಿದ್ದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.

 

 

ತುಮಕೂರು ಜಿಲ್ಲೆಯ ಪ್ರಜ್ಞಾವಂತ ನಾಗರೀಕರ ಚರ್ಚೆ ಏನೆಂದರೆ ಬೆಂಗಳೂರು ನಗರದಲ್ಲಿ 112 ತುರ್ತು ನಾಗರೀಕರ ಸೇವಾ ಕರ್ತವ್ಯ ನಿರ್ವಹಿಸಲು 500 ಎಎಸ್ಐ ಸಿಬ್ಬಂದಿಗಳನ್ನು ಸರ್ಕಾರ ನೇಮಕ ಮಾಡಿಕೊಂಡಿರುವುದು ಸ್ವಾಗತಾರ್ಹ ಆದರೆ ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು ಅದರಲ್ಲಿಯೂ ಸಹ ಗೃಹ ಸಚಿವರು ಇದೇ ಜಿಲ್ಲೆಯವರಾಗಿರುವುದರಿಂದ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ 30 ರಿಂದ 40 ವರ್ಷದವರೆಗೆ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಅಂತಹವರಿಗೆ ಎ, ಎಸ್, ಐ, ಆಗಿ ಮುಂಬಡ್ತಿ ನೀಡಿದರೆ ಸರ್ಕಾರದ ಸುತ್ತೋಲೆಯಂತೆ 112 ತುರ್ತು ಸೇವಾ ವಾಹನದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

 

ಕೂಡಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ,ಜಿ ಪರಮೇಶ್ವರ್, ಅವರು ಪ್ರಜ್ಞಾವಂತ ನಾಗರಿಕರ ಈ ಚರ್ಚೆಯನ್ನು ಮನ ಗಂಡು ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಎ ಎಸ್ ಐ ಮುಂಬಡ್ತಿ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!