ಡಿ ಹೆಚ್ ಓ ಸಾಹೇಬರೇ ಈ ಅಕ್ರಮಕ್ಕೆ ಕಡಿವಾಣ ಯಾವಾಗ ????
ತುಮಕೂರು ನಗರದ ಕೋತಿ ತೋಪಿನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ತಪಾಸಣೆಗೆಂದು ಬರುವ ಸಾರ್ವಜನಿಕರಿಗೆ ಈ ಆರೋಗ್ಯ ಕೇಂದ್ರದಲ್ಲಿ ಬಿಪಿ ಪರೀಕ್ಷೆಗೆ ಹಣ ಕೊಡಬೇಕು ಮಧುಮೇಹ ಕಾಯಿಲೆಯ ರೋಗಿಗಳು ರಕ್ತಪರೀಕ್ಷೆ ಮಾಡಿಸಲು ಈ ಆರೋಗ್ಯ ಕೇಂದ್ರಕ್ಕೆ ಬಂದರೆ ಇಲ್ಲಿನ ಸಿಬ್ಬಂದಿಗಳು ಕೇಳಿದಷ್ಟು ಹಣ ನೀಡಬೇಕು ಇದು ಸರ್ಕಾರಿ ಆಸ್ಪತ್ರೆಯೋ ಅಥವಾ ಖಾಸಗಿ ಆಸ್ಪತ್ರೆಯೋ ಎಂಬ ಅನುಮಾನ ಇಲ್ಲಿನ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ತುಮಕೂರು ನಗರದ ಹೃದಯ ಭಾಗದಲ್ಲಿ ಇದ್ದರೂ ಸಹ ಇಲ್ಲಿಗೆ ಬರುವ ಅದೆಷ್ಟೋ ಬಡ ರೋಗಿಗಳು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅವರು ಕೇಳಿದಷ್ಟು ಹಣ ನೀಡಿ ಹೋಗುತ್ತಿರುವುದು ವಿಪರ್ಯಾಸ ಎಂದು ಇಲ್ಲಿನ ಸಾರ್ವಜನಿಕರ ಮಾತಾಗಿದೆ.
ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಏನಾದರೂ ಇಲ್ಲಿಗೆ ರಕ್ತ ಪರೀಕ್ಷೆ ಮಾಡಿಸಲು ಬಂದರೆ ಈ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಛಾಯಾ ಎಂಬುವರು ಯಾವುದೇ ಅಧಿಕಾರಿಗಳ ಭಯವಿಲ್ಲದೆ ಮತ್ತು ಇವರಿಗೆ ಸಂಕೋಚವಿಲ್ಲದೆ ನೇರವಾಗಿ ರೋಗಿಗಳ ಹತ್ತಿರ ಹಣ ಕೇಳುತ್ತಾರೆ.
ಏಕೆಂದರೆ ಇವರಿಗೆ ಇದೆಯಂತೆ ಪ್ರಭಾವಿ ರಾಜಕೀಯ ಮುಖಂಡರುಗಳ ಮತ್ತು ರಾಜ್ಯದ ಪ್ರತಿಷ್ಠಿತ ಟಿವಿ ಮಾಧ್ಯಮದವರ ಶ್ರೀರಕ್ಷೆ
ಹೌದು ಇವರು ಸುಮಾರು ವರ್ಷಗಳಿಂದ ಪ್ರತಿಷ್ಠಿತ ಟಿವಿ ಮಾಧ್ಯಮದವರ ಸಹಕಾರ ಹಾಗೂ ರಾಜಕೀಯ ಮುಖಂಡರ ಬೆಂಬಲದಿಂದ ಗುಂಡಾಗಿರಿ ಮಾಡುತ್ತ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಇಲ್ಲಿ ಮಾಡುವಂತಹ ಅವ್ಯವಹಾರದ ಬಗ್ಗೆ ತುಮಕೂರು ಜಿಲ್ಲೆಯ ಯಾರಾದರೂ ಪ್ರಜ್ಞಾವಂತ ನಾಗರಿಕರು ಅಥವಾ ಸ್ಥಳೀಯ ಮಾಧ್ಯಮದವರು ಇದನ್ನು ಖಂಡಿಸಲು ಮುಂದಾದರೆ ಅವರಿಗೆ ಬರುತ್ತದೆಯಂತೆ ಪ್ರತಿಷ್ಠಿತ ಮಾಧ್ಯಮ ಪ್ರತಿನಿಧಿಗಳ ಕರೆ ಅದು ಅಲ್ಲದೆ ಇವರಿಗೆ ಗೃಹ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವು ಪ್ರಭಾವಿ ಮುಖಂಡರ ಬೆಂಬಲವಿದೆಯಂತೆ ಇವರೆಲ್ಲರ ಬೆಂಬಲದಿಂದಲೇ ಇವರಿಗೆ ಡಿ ಎಚ್ ಓ, ಟಿ ಹೆಚ್ ಓ, ಹಾಗೂ ಕೋತಿ ತೋಪಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಯ ಭಯವಿಲ್ಲದೆ ಇಲ್ಲಿಗೆ ಬರುವ ಬಡವರ ಕತ್ತು ಕುಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಇವರು ಸುಮಾರು ವರ್ಷಗಳಿಂದ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಕಾರಣವೇನು ಇವರು ಸರ್ಕಾರಿ ನೌಕರರೇ ಅಥವಾ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರೇ ಇವರ ವಿರುದ್ಧ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವಾರು ರೀತಿಯ ದೂರುಗಳು ಇದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇವರ ಮೇಲೆ ಕ್ರಮ ತೆಗೆದುಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಇವರು ಇಲ್ಲಿಯೇ ಕರ್ತವ್ಯ ನಿರ್ವಹಿಸಲು ಇಲ್ಲಿ ಇವರಿಗೆ ಎಂತಹ ಪ್ರಭಾವಿಗಳ ಬೆಂಬಲವಿರಬೇಕು ಇವರಿಗೆ ಇಲ್ಲಿ ಎಷ್ಟು ಆದಾಯವಿರಬೇಕು ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ನಡೆದರೂ ಸಹ ಕಣ್ಮುಚ್ಚಿ ಕುಳಿತ ಇಲ್ಲಿನ ವೈದ್ಯಾಧಿಕಾರಿಗೆ ಇವರಿಂದ ಎಷ್ಟು ಲಾಭವಿರಬೇಕು ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೂಡಲೇ ಇವರನ್ನು ಕರ್ತವ್ಯದಿಂದ ವಜಾ ಗೊಳಿಸಬೇಕೆಂದು ಇವರಿಂದ ನೊಂದ ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.