ಕೆಪಿಸಿಸಿಯ ನೂತನ ಸದಸ್ಯರಾಗಿ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿಸಿ ಗೌರಿಶಂಕರ್ ನೇಮಕವಾಗಿದ್ದಾರೆ.
ಕೆಪಿಸಿಸಿಯ ನೂತನ ಸದಸ್ಯರಾಗಿ ಡಿಸಿ ಗೌರಿಶಂಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಡಿ ಸಿ ಗೌರೀಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಐದೇ ತಿಂಗಳಲ್ಲಿ ಗ್ರಾಮಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸದೃಢಗೊಳಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡರಿಗೆ 71000 ಮತ ಹಾಕಿಸಿ ಗಮನ ಸೆಳೆದಿದ್ದರು ಕೆಪಿಸಿಸಿಯ ನೂತನ ಸದಸ್ಯರನ್ನಾಗಿ ನೇಮಿಸಿದ ಪಕ್ಷದ ವರಿಷ್ಠರಿಗೆ ಡಿ ಸಿ ಗೌರಿಶಂಕರ್ ರವರು ಸಹ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ