ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿದವರಿಗೆ ಬಹುಮಾನ

ತುಮಕೂರು ದಸರಾ ಸಮಿತಿಯಿಂದ ಗೊಂಬೆಗಳ ಪ್ರದರ್ಶನ ಸ್ಪಧೆ

 

ತುಮಕೂರು: ಈ ನವರಾತ್ರಿಯಲ್ಲಿ ಮನೆಗಳಲ್ಲಿ ಗೊಂಬೆ ಅಲಂಕಾರ ಮಾಡಿರುವವರಿಗೆ ತುಮಕೂರು ದಸರಾ ಸಮಿತಿ ವಿಶೇಷ ಬಹುಮಾನ ಪಡೆಯುವ ಅವಕಾಶ ನೀಡಿದೆ. ದಸರಾದ ಸಾಂಪ್ರದಾಯಕ ಗೊಂಬೆ ಪ್ರದರ್ಶನವನ್ನು ಪ್ರೋತ್ಸಾಹಿಸಲು ಹೊಸ ತಲೆಮಾರಿನವರಿಗೆ ಅದರ ವಿಶೇಷತೆ ಪರಿಚಯಿಸಲು ಈ ಬಾರಿ ಮನೆಗಳಲ್ಲಿ ಬೊಂಬೆ ಅಲಂಕಾರ ಮಾಡಿರುವವರಿಗೆ ಸಮಿತಿಯ ದಸರಾ ಉತ್ಸವದ ಸಮಾರಂಭಕ್ಕೆ ಆಹ್ವಾನಿಸಿ ಬಹುಮಾನ ನೀಡಲಾಗುವುದು ಎಂದು ಈ ಉಪಸಮಿತಿಯ ರೇಖಾ ಮಹೇಶ್ ಹೇಳಿದ್ದಾರೆ.

ಗೊಂಬೆ ಪ್ರದರ್ಶನದ ಸ್ಪರ್ಧೆಯಲ್ಲಿ ಆಕಷರ್ಣೀಯವಾಗಿ ಉತ್ತಮ ಅಲಂಕಾರ ಮಾಡಿರುವ ತೀರ್ಪುಗಾರರು ಆಯ್ಕೆ ಮಾಡುವ ಮೂವರು ಮಹಿಳೆಯರಿಗೆ ಮೂರು ಹಂತದಲ್ಲಿ ನಗದು ಬಹುಮಾನ, ಪಾರಿತೋಷಕ ನೀಡಿ ಪ್ರೋತ್ಸಾಹಿಸಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಗೊಂಬೆ ಅಂಕಾರ ಮಾಡಿರುವವರು ಸಮಿತಿಯ ತಂಡವನ್ನು ಸಂಪರ್ಕಿಸಿದರೆ, ಅವರು ನಿಮ್ಮ ಮನೆಗೇ ಬಂದು ಗೊಂಬೆ ಅಲಂಕಾರ ವೀಕ್ಷಣೆ ಮಾಡುತ್ತಾರೆ. ಸಾಂಪ್ರದಾಯಕ, ಆಕರ್ಷಕ ಮತ್ತು ಪರಿಸರ ಸ್ನೇಹಿ ಗೊಂಬೆಗಳಿಗೆ ಆದ್ಯತೆ ನೀಡಲಾಗುತ್ತದೆ. ಥರ್ಮಾಕೋಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರು ತಾವು ಅಲಂಕರಿಸಿರುವ ಗೊಂಬೆಗಳ ಫೊಟೊ ತೆಗೆದು ಕೆಳಗೆ ತಿಳಿಸುವ ಮೊಬೈಲ್ ನಂಬರ್‍ಗಳಿಗೆ ವಾಟ್ಸ್‍ಆ್ಯಪ್ ಮಾಡಿ, ನಿಮ್ಮ ಮೊಬೈಲ್ ನಂಬರ್, ಮನೆ ವಿಳಾಸ ನೀಡಿದರೆ ಸಮಿತಿಯ ತಂಡದವರು ನಿಮ್ಮ ಮನೆಗೆ ಭೇಟಿ ನೀಡಿ ಗೊಂಬೆಗಳನ್ನು ವೀಕ್ಷಿಸಿ ವರದಿ ನೀಡುತ್ತಾರೆ ಎಂದು ರೇಖಾ ಮಹೇಶ್ ತಿಳಿಸಿದ್ದಾರೆ.

 

ಗೊಂಬೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಗ.ಸಿ.ಶ್ರೀನಿವಾಸಮೂರ್ತಿ-9686808931, ರೇಖಾ ಮಹೇಶ್-9480424207, ವಸಂತ ರಂಭಾಪುರಿ-9945236281, ಮಂಜುಳಾ ರವಿಶಂಕರ್-9008475999 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!