ತಿಪಟೂರು: ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಂತಹ ವಾಹನ ಮಾಲೀಕನಿಗೆ 25000 ರೂ ಗಳ ದಂಡವನ್ನು ವಿಧಿಸಿದ CJ & JMFC ಕೋರ್ಟ್ ತಿಪಟೂರು.
ಅಪ್ರಾಪ್ತರು ವಾಹನ ಚಾಲನೆ ಮಾಡುವುದು & ವಾಹನ ಚಾಲನೆಗೆ ನೀಡುವುದು ಕಾನೂನುಗೆ ವಿರುದ್ಧವಾದುದ್ದು.
ಅರಸೀಕೆರೆ ತಾಲೂಕಿನ ಬಾಣಾವರದ ಹೋಬಳಿಯ ಬಸವರಾಜಪುರ ಮೂಲದ ಜಯಂತ್ ಗೌಡ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆಂಗಳೂರು- ಹೊನ್ನಾವರ ಹೆದ್ದಾರಿಯ 206ರ ಕೊನೇಹಳ್ಳಿ ಸಮೀಪ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದನ್ನು ಗಮನಿಸಿದ ಹೊನ್ನವಳ್ಳಿ ಪೊಲೀಸ್ ಪಿಎಸ್ಐ ರಾಜೇಶ್ ಮತ್ತು ಸಿಬ್ಬಂದಿ ವಾಹನ ತಡೆದು ಪರಿಶೀಲಿಸಿದಾಗ ಚಾಲಕ ಅಪ್ರಾಪ್ತನೆಂದು ತಿಳಿದು ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅಪ್ರಾಪ್ತರ ವಾಹನ ಚಾಲನೆ ಮತ್ತು ಅಪ್ರಾಪ್ತರಿಂದ ಆಗುತ್ತಿರುವ ಅಪಘಾತಗಳನ್ನು ಮನಗಂಡು ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅದಕ್ಕೆ ನ್ಯಾಯಾಲಯವು ವಾಹನ ಮಾಲೀಕ ಲಿಂಗರಾಜುವಿಗೆ 25,000 ದಂಡ ವಿಧಿಸಿದೆ.