ನಾಳೆ ಎಸ್‌ಐಟಿ ಕಾಲೇಜಿನಲ್ಲಿ 16ನೇ ಪದವಿ ಪ್ರದಾನ ಸಮಾರಂಭ 

ತುಮಕೂರು: ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ 16ನೇ ಪದವಿ ಪ್ರದಾನ ಸಮಾರಂಭ ನಗರದ ಎಸ್‌ಐಟಿ ಕಾಲೇಜಿನ ಆವರಣದಲ್ಲಿ ಸೆ.6 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿರವರ ಕೃಪಾಶೀರ್ವಾದ ಹಾಗೂ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ 16ನೇ ಪದವಿ ಪ್ರದಾನ ಸಮಾರಂಭಜರುಗಲಿದ್ದು, ಒಟ್ಟು 820 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ದಗಂಗಾ ಎಜುಕೇಶನ್‌ ಸೊಸೈಟಿಯ ಜಂಟಿ ಕಾರ್ಯದರ್ಶಿ ಹಾಗೂ ಎಸ್‌ಐಟಿ ಸಿಇಓ ಡಾ. ಶಿವಕುಮಾರಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

16ನೇ ಪದವಿ ಪ್ರದಾನ ಸಮಾರಂಭದಲ್ಲಿ ಎಂ.ಟೆಕ್ 27 ಅಭ್ಯರ್ಥಿಗಳು, ಬಿ.ಇ. ವಿಭಾಗಗಳ 764 ಅಭ್ಯರ್ಥಿಗಳು, ಬಿಆರ್ಕ್ 29 ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಡಿ. ಕೆ. ಸುನಿಲ್ ಭಾಗವಹಿಸಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮತ್ತು ಪದವಿ ಪ್ರದಾನ ಸಮಾರಂಭದ ಭಾಷಣ ಮಾಡಲಿದ್ದಾರೆ ಎಂದರು.

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮತ್ತು ಎಸ್.ಐ.ಟಿ. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮತ್ತು ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಆಹ್ವಾನಿತರು, ವಿದ್ಯಾರ್ಥಿಗಳು ಮತ್ತು ಪದವೀಧರರ ಪೋಷಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಗಿರೀಶ್‌ಗೆ 5 ಚಿನ್ನದ ಪದಕ

ನಮ್ಮ ಸಂಸ್ಥೆ ಮತ್ತು ದಾನಿಗಳಿಂದ 64 ಚಿನ್ನದ ಪದಕಗಳನ್ನು ಸ್ಥಾಪಿಸಲಾಗಿದೆ. ಬಿ.ಇ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂ.ಎಲ್. ಗಿರೀಶ್, ಸಿ.ಜಿ.ಪಿ.ಎ. 9.82 ಗಳಿಸಿ ಅಗ್ರಸ್ಥಾನ ಪಡೆದಿದ್ದು, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಜತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವುದಕ್ಕಾಗಿ ಇನ್ನೂ ಐದು ಚಿನ್ನದಪ ದಕಗಳನ್ನು ಸ್ವೀಕರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಎಸ್‌ಐಟಿ ಕ್ಯಾಂಪಸ್ ನೇಮಕಾತಿ ಡ್ರೈವ್‌ಗಳಿಗಾಗಿ 250ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ಈ ಪರಿಣಾಮವಾಗಿ 2024-25ನೇ ಸಾಲಿಗೆ 1060ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಒದಗಿ ಬಂದಿದ್ದು, 140 ಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವೇತನ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ. ಎಲ್ಲಾ ವಿಭಾಗಗಳಿಂದ ಒಟ್ಟು 350 ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಿಂದ ಪರಿಹಾರದ ಇಂಟರ್ನ್‌ಶಿಪ್ ಸಹಾಯ ಧನ ರೂಪದಲ್ಲಿ ರೂ. 15,000 ರಿಂದ ರೂ.1.00 ಲಕ್ಷದವರೆಗಿನ ಅವಕಾಶಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳಾದ ವೀಸಾ ಇಂಕ್. ಮೈಂಟ್ರಾ, ಮಾರ್ಗನ್ ಸ್ಕ್ಯಾನ್ನಿ, ಟೆಕ್ಸಾಸ್ ಇನ್ನುಮೆಂಟ್ಸ್ ಇಂಡಿಯಾ, ಸಿಸ್ಕೊ. ಜೆಪಿ ಮಾರ್ಗನ್ ಚೇಸ್ ಅಂಡ್ ಕಂ. ವಸ್ಕರ್ನ್ ಡಿಜಿಟಲ್, ಯುಐಪಾತ್, ಸೇಬರ್ ಕಾರ್ಪೊರೇಷನ್, ಪೆಗಾಸಿಸ್ಟಮ್ಸ್ ಇಂಕ್, ನ್ಯಾಷನಲ್ ಇನ್ನು ಮೆಂಟ್ಸ್, ಜಿಇ ಹೆಲ್ತ್ ಕೇರ್, ನೈಕ್ ಟೆಕ್ನಾಲಜಿ, ಟ್ಯಾಲಿ ಸೊಲ್ಯೂಷನ್ಸ್, ಸೀಮೆನ್ಸ್ ಹೆಲ್‌ನೀರ್ಸ್ ಸೈಡರ್ ಎಲೆಕ್ನಿಕ್, ಆಪ್ರೈಡ್ ಮೆಟೀರಿಯಲ್, ಯೂರೋಫಿನ್, ಬ್ರಿಟಿಷ್ ಟೆಲಿಕಾಂ, ಒರಾಕಲ್, ತೋಷಿಬಾ, ರೆಡ್‌ಬಸ್, ಡೈಮ್ಲರ್ ಟ್ರಿಕ್ ಇನ್ನೊವೇಶನ್ ಸೆಂಟರ್ ಇಂಡಿಯಾ, ಜೆಎಸ್‌ಡಬ್ಲ್ಯೂಡಿಶ್ ನೆಟ್ವರ್ಕ್, ಡೆಲ್ಲಾ ಎಲೆಕ್ಟ್ರಾನಿಕ್ಸ್, ನೋಕಿಯಾ ಇಂಡಿಯಾ ಪ್ರೈ ಲಿಮಿಟೆಡ್, ಹನಿವೆಲ್, ಆಲ್‌ ಸ್ಟ್ರಾಮ್ ಗ್ರೂಪ್, ಟಿಇ ಕನೆಕ್ಟಿವಿಟಿ, ಟಿವಿಎಸ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ತ್ರಿವೇಣಿ ಟರ್ಬೆನ್ ಲಿಮಿಟೆಡ್, ಟಿಸಿಎಸ್, ಕ್ಯಾಪ್ಟಜೆಮಿನಿ, ಆಕ್ಸೆಂಚರ್, ಕಾಗ್ನಿಜೆಂಟ್, ಎಚ್ಸಿಎಲ್‌ಟೆಕ್. ಇನ್ಫೋಸಿಸ್ ಮತ್ತು ಇತರ ಹಲವಾರು ಪ್ರಮುಖ ಜಾಗತಿಕ ಕಂಪೆನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಂಡಿವೆ ಎಂದು ಅವರು ವಿವರಿಸಿದರು.

 

ಕಾಲೇಜಿನ ವೈಭವ್ ಸಿಂಗ್ (ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್) ಮತ್ತು ಶ್ರೀನಿವಾಸ್ ಪಾಸ್ತೆ (ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್) ಅವರಿಗೆ ವೀಸಾ ಇಂಕ್ 32.88 ಐಕಂ ಅನ್ನು ನೀಡಿದ್ದು, ಇದು ಅತ್ಯಧಿಕ ವೇತನ ಪ್ಯಾಕೇಜ್ ಆಗಿದೆ ಎಂದರು.

2025-26 ಸಾಲಿನ ನೇಮಕಾತಿಗಳು ಸಹ ಭರದಿಂದ ಆರಂಭವಾಗಿವೆ. 7ನೇ ಸೆಮಿಸ್ಟರ್ ಪ್ರಾರಂಭವಾಗುವ ಮೊದಲೇ, 50 ಕಂಪೆನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿ, 140ಕ್ಕೂ ಅಧಿಕ ಆಫರ್‌ಗಳನ್ನು ನೀಡಿವೆ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ 10 ಐಕಿಂ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

2026 ರ ಬ್ಯಾಚ್‌ನ ಕೆಲವು ಪ್ರಮುಖ ನೇಮಕಾತಿದಾರರಲ್ಲಿ ಎಎಂಡಿ, ಮಾರ್ಗನ್ ಫ್ಯಾನ್ಸಿ ಅಪ್ಪಾಜಿಕ್ ನೆಟ್ವರ್ಕ್, ಸೇಬರ್ ಕಾರ್ಪೊರೇಷನ್, ಬುಕಿಂಗ್ ಹೋಲ್ಡಿಂಗ್ ಇಂಡಿಯಾ, ಕಾಮ್ ಸ್ಕೋಪ್ ಇಂಕ್. ಟ್ಯಾಲಿ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್. ಸ್ಪೀಡರ್ ಎಲೆಕ್ನಿಕ್, ವಿಸೈನ್ ಟೆಕ್ನಾಲಜಿ, ತೋಷಿಬಾ ಸಾಫ್ಟ್‌ವೇರ್ (ಇಂಡಿಯಾ) ಪ್ರೈ. ಲಿಮಿಟೆಡ್, ರೆಡ್‌ ಬಸ್, ನ್ಯೂಕ್ಲಿಯಸ್, ಡಿಶ್ ನೆಟ್ವರ್ಕ್ ಟೆಕ್ನಾಲಜೀಸ್, ಆಲ್ ಸ್ಮಾಮ್ ಗ್ರೂಪ್, ಟಿವಿಎಸ್ ಮೋಟಾರ್ ಕಂ. ಲಿಮಿಟೆಡ್, ಕಂಟೆಂಟ್ ಸ್ಟಾಕ್, ಟಿಇ ಕನೆಕ್ಟಿವಿಟಿ, ಅಮೆಜಾನ್ ಮತ್ತು ಇತರೆ ಕಂಪೆನಿಗಳು ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!