ತಿಪಟೂರು: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ “ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ”ದ ವತಿಯಿಂದ ನಡೆದ “ಕನ್ನಡ ಸಾಹಿತ್ಯ ಸಂಭ್ರಮ ” ಕಾರ್ಯಕ್ರಮವನ್ನು ರಾಮೋಹಳ್ಳಿ ಸಿದ್ದಾರೂಢ ಮಿಷನ್ ಆಶ್ರಮದ ಡಾ. ಆರೂಢ ಭಾರತೀಯ ಮಹಾಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವದಿಸಿದರು ನಂತರ ಕವಿಗೋಷ್ಠಿ ,ಕೃತಿ ಬಿಡುಗಡೆ, ಜಾನಪದ ನೃತ್ಯ ಉಪನ್ಯಾಸ , ಅತಿಥಿ ನುಡಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿದವು. ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗೌರವ ಪುರಸ್ಕಾರದಲ್ಲಿ ಕಲ್ಪತರು ನಾಡಿನ ರೈತಕವಿ ಡಾ.ಪಿ.ಶಂಕ್ರಪ್ಪಬಳ್ಳೇ ಕಟ್ಟೆರವರಿಗೆ’ ಸಾಹಿತ್ಯ ಮತ್ತು ಸಮಾಜ ಸೇವಾ’ ಸಾಧನೆಗಾಗಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಚಿಕ್ಕಹೆಜ್ಜಾಜಿ ಮಹದೇವ್, ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕ ರಂಗೇಗೌಡ, ಚೇತನ ಫೌಂಡೇಶನ್ ಅಧ್ಯಕ್ಷ ಡಾ. ಚಂದ್ರಶೇಖರ್ ಮಾಡಲ್ಗೇರಿ. ದಾಸ್ರಳ್ಳಿ ಜಾನಪದ ಕ ಸಾ ಪ ಅಧ್ಯಕ್ಷ ವೈ ಬಿ ಎಚ್ ಜಯದೇವ್, ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ವೀರಪುತ್ರ ಶ್ರೀನಿವಾಸ್, ಡಿ.ಕೆ ರವಿ ಅಭಿಮಾನಿ ಬಳಗದ ಅಧ್ಯಕ್ಷ ಮುರಳಿಗೌಡ. ಕಾರ್ಯಕ್ರಮ ಆಯೋಜಕರು ಮತ್ತು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಡಾ.ಜಿ ಶಿವಣ್ಣ, ಕೃತಿಕಾರಿಣಿ ಆಶಾ ಶಿವುಗೌಡ, ಭರತನಾಟ್ಯ ಪ್ರವೀಣೆಯರಾದ ಅಶ್ವಿನಿ, ರಮ್ಯಚೆಲುವಮೂರ್ತಿ, ರೈತ ಮುಖಂಡ ಬಸವರಾಜ್ ,ಬಾಲ ಪ್ರತಿಭೆ ಕು.ವೈನವಿ ಹಾಗೂ ನಾಡಿನಾದ್ಯಂತ ಆಗಮಿಸಿದ್ದ ಕವಿ ಕಲಾವಿದರು ಶಾಲಾ ಮಕ್ಕಳಿಂದ ಕನ್ನಡ ಸಾಹಿತ್ಯ ಸಂಭ್ರಮ ವಿಜ್ರಂಭಿಸಿತು.
ವರದಿ : ಸೋಮನಾಥ್