ಅಭಿವೃದ್ಧಿಯ ಹೆಸರಿನಲ್ಲಿ, ಧಾರ್ಮಿಕ ಜಾಗಕ್ಕೆ ಕುತ್ತು.

 

ನಗರದ ಪುರಾತನ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ, ಅಭಿವೃದ್ಧಿಯ ಹೆಸರಿನಲ್ಲಿ ಆವರಣದಲ್ಲಿರುವ ದೈವ ಸ್ವರೂಪಿ ಅರಳಿ ಕಟ್ಟೆ ತೆರವಿಗೆ ಮುಂದಾಗಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.

 

 

ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಹಳಷ್ಟು ವರ್ಷಗಳಿಂದ ಅರಳಿ, ಬೇವು, ಹತ್ತಿ, ಬಿಲ್ವಪತ್ರೆ ಮತ್ತು ಬನ್ನಿ ಮರಗಳೆಂಬ ಪಂಚವೃಕ್ಷಗಳಿದ್ದು. ಪ್ರತಿ ದಿನಾಲು ದೈವ ಸ್ವರೂಪಿ ಮರಗಳಿಗೆ ನೂರಾರು ಜನ ಮುಂಜಾನೆ ಮತ್ತು ಮುಸ್ಸಂಜೆ ಪೂಜೆ ಸಲ್ಲಿಸುವ ಪದ್ಧತಿ ಬಹಳಷ್ಟು ವರ್ಷಗಳಿಂದ ವಾಡಿಕೆಯಾಗಿ ಬಂದಿದೆ. ಕಲ್ಲೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಪವಳಿ ಕಟ್ಟಿಸುವ ಸಲುವಾಗಿ ದೈವ ಸ್ವರೂಪಿ ಹಾಗೂ ದೈವಾಂಶ ಸಂಭೂತ ಪಂಚವೃಕ್ಷಗಳನ್ನು, ಧರೆಗೂಳಿಸಲು ಮುಂದಾಗಿದ್ದಾರೆ. ಅದರಲ್ಲಿ ಈಗಾಗಲೇ ಹತ್ತಿ ಮರದ ಕೊಂಬೆಯನ್ನು ಕಡಿದು ಭಿನ್ನ ಗೊಳಿಸಲಾಗಿದೆ. ಹಿಂದೂ ಧರ್ಮಿಯರ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ, ತಿಪಟೂರಿನ ಇತಿಹಾಸ ಸಾರುವ ವೀರಗಲ್ಲುಗಳನ್ನು ತೆರವುಗೊಳಿಸುವ ಹುನ್ನಾರ ನಡೆಯುತ್ತಿದೆ. ಇಂತಹ ಪುರಾತನ ಜಾಗವನ್ನು ಉಳಿಸುವುದರ ಬದಲು ತೆರವು ಗೊಳಿಸಲು ಮುಂದಾಗಿದ್ದಾರೆ. ಇಲ್ಲಿರುವ ವೃಕ್ಷಗಳು ಮತ್ತು ವೀರಗಲ್ಲುಗಳನ್ನು ತೆರವುಗೊಳಿಸಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.

 

ಈಗಾಗಲೇ ಹಿಂದೂ ಧರ್ಮೀಯರ ಭಾವನೆಗಳಿಗೆ ಕೊಡಲಿ ಪೆಟ್ಟು ಹಾಕಿರುವವನ ( ಮರಕಡಿದವನು ) ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕು. ಮುಂದುವರೆದು ಇಂತಹ ಕೃತ್ಯಗಳಿಗೆ ಕೈ ಹಾಕಿದರೆ ಮುಂದೆ ಆಗುವ ಅನಾಹುತಗಳಿಗೆ ಯಾರು ಜವಾಬ್ದಾರರಲ್ಲ, ಎಂದು ಬಿಜೆಪಿ ಮುಖಂಡ ಲೋಕೇಶ್ವರ್ ತಮ್ಮ ಬೆಂಬಲಿಗರೊಂದಿಗೆ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆ ಯೋಜನೆ ಮಾಡಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

 

 

ಇದೇ ಸಂದರ್ಭದಲ್ಲಿ ಸೊಪ್ಪು ಗಣೇಶ್, ಭಾರತಿ ಮಂಜುನಾಥ್, ಬಸವರಾಜು ಮತ್ತು ಯೋಗೇಶ್ ಹಾಜರಿದ್ದರು

 

ವರದಿ: ಸೋಮನಾಥ್

Leave a Reply

Your email address will not be published. Required fields are marked *

error: Content is protected !!