ತಿಪಟೂರು: ಚೇತನ ಫೌಂಡೇಶನ್ ಕರ್ನಾಟಕ ಇವರು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ವಚನ ವೈಭವ, ಉಪನ್ಯಾಸ ವಚನ ವಾಚನ ಕವಿಗೋಷ್ಠಿ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡು
,ತಿಪಟೂರಿನ ರೈತಕವಿ ಡಾ.ಪಿ.ಶಂಕರಪ್ಪ ಬಳ್ಳೇಕಟ್ಟೆ.ಇವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ “ರಾಷ್ಟ್ರೀಯ ಬಸವ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ
ಸಮಾರಂಭದಲ್ಲಿ ಶ್ರೀ ವೇ ಜ್ಞಾನ ಬ್ರಹ್ಮ ಚಿರಂತಯ್ಯ ಹಿರೇಮಠ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ; ದಿವ್ಯ ಸಾನಿದ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಸುರೇಶ್ ,ಸಿನಿಮಾ ನಿರ್ದೇಶಕ ಓಂಕಾರಸ್ವಾಮಿ, ಗಜಲ್ ಕವಿ ಪೀರ್ ಸಾಬ್ ನದಾಫ್,ಸಾಹಿತಿಗಳಾದ ಸುನಂದ ಜಾಲವಾದಿ ,ಡಾ.ಜಿ ಶಿವಣ್ಣ ,ಸುರೇಶ್ ಕೊರಕೊಪ್ಪ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಮಾಡಲ್ಗೇರಿ ಹಾಗೂ ಬಾಲ ಪ್ರತಿಭೆಗಳಾದ ಕು.ಅನುಷಾ ಕರಿಬಸವಯ್ಯ ಕು.ವೈನವಿ ಭಗವತ್ಗೀತಾ ಹಾಗೂ ನಾಡಿನ ಅನೇಕ ಸನ್ಮಾನಿತ ಕವಿವರ್ಯಕಲಾಭಿಮಾನಿಗಳು., ಉಪಸ್ಥಿತಿತಲಿದ್ದರು,