ತಿಪಟೂರು ತಾಲೂಕಿನ ಮಾವಿನಹಳ್ಳಿ ಗ್ರಾಮವಾಸಿಯಾದ ವಿರೂಪಾಕ್ಷ ಮೂರ್ತಿಯವರ ಮಗನಾದ 19 ವರ್ಷದ ಕೀರ್ತನ. ವಿ ಎಂಬ ಯುವಕ ಕೃಷಿ ಕೊಂಡಕ್ಕೆ ಬಿದ್ದು ಪ್ರಾಣವನ್ನು ಬಿಟ್ಟ ದುರ್ಘಟನೆ ನಡೆದಿದೆ.
ಮೃತ ದುರ್ದೈವಿ ಯುವಕ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಇವರು ತಿಪಟೂರು ತಾಲೂಕಿನ ನೆಲಗೊಂಡನಹಳ್ಳಿ ತೋಟದ ಮನೆಯಲ್ಲಿ ವಾಸವಾಗಿದ್ದು ಇಂದು ಸಂಜೆ 4:30ರ ವೇಳೆಯಲ್ಲಿ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ದುರ್ಘಟನೆಯಾಗಿದೆ. ಮೃತ ವಿದ್ಯಾರ್ಥಿ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಮೃತ ದುರ್ದೈವಿ.
ಮೃತ ಯುವಕನ ತಂದೆಯ ಹೆಸರು ವಿರೂಪಾಕ್ಷ ಮೂರ್ತಿ ಮೂಲತಃ ಕೃಷಿಕರಾಗಿದ್ದು
ತಾಯಿಯ ಹೆಸರು ಕೆ.ಜಿ ಕಲಾವತಿ ತಾಲೂಕಿನ ಬಿ ಮುದ್ದೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರು ವೀರಶೈವ ಸಮಾಜಕ್ಕೆ ಸೇರಿದವರೆಂದು ತಿಳಿದು ಬಂದಿದೆ.