ರಸ್ತೆ ಅಪಘಾತ ತಾಯಿ ಮಗಳ ಸಾವು.

ತಿಪಟೂರು. ಪದೇ ಪದೇ ಹೆಚ್ಚುತ್ತಿರುವ ಅಪಘಾತಗಳಿಂದ ರೋಸಿ ಹೋದ ಗ್ರಾಮಸ್ಥರಿಂದ ಶವ ತೆಗೆಯಲು ಬಿಡದೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ವರದಿಯಾಗಿದೆ.

 

ಬೈಪಾಸ್ ಗೆ ಹೊಂದಿಕೊಂಡಂತಿರುವ ರಾಮಶೆಟ್ಟಿ ಹಳ್ಳಿ ಗ್ರಾಮದ ಕಮಲಮ್ಮ (35) ವೀಣಾ (14) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.

 

ಇಂದು ಬೆಳಗ್ಗೆ 8:50 ರ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ,ತಾಯಿ ಮಗಳ ಹಿಂಬದಿಯಿಂದ ಬಂದ ಗಾರ್ಮೆಂಟ್ ನಾ ಮಿನಿ ಬಸ್ (kA-05 AD-4275) ನಂಬರ್ ನ ಗಾಡಿಯು ಅತಿ ವೇಗವಾಗಿ ಬರುತ್ತಿತ್ತು.

 

 

ರಾಮಶೆಟ್ಟಿಹಳ್ಳಿ ಕಡೆಯಿಂದ ಟಿವಿಎಸ್ ಮೊಪೆಡ್ ಗಾಡಿಯಲ್ಲಿ ರೈತನೊಬ್ಬ ದಿಡೀರನೆ ಅಡ್ಡ ಬಂದ ಪರಿಣಾಮ ಟಿವಿಎಸ್ ಸವಾರರನ್ನು ಪಾರು ಮಾಡಲು ಹೋಗಿ ಬಸ್ಸನ್ನು ಬಲಕ್ಕೆ ತಿರುಗಿಸಲಾಗಿದೆ ರಸ್ತೆ ಬದಿಯಲ್ಲಿದ್ದ ತಾಯಿ ಮತ್ತು ಮಗಳ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

 

ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಆಗಮಿಸಿ ಸ್ಥಳ ಮಹಜರು ಮಾಡಿ, ಮೃತ ದೇಹವನ್ನು ಸಾಗಿಸಲು ಮುಂದಾದಾಗ ರೊಚ್ಚಿಗೆದ್ದ ಗ್ರಾಮಸ್ಥರು ಮೃತ ದೇಹಗಳನ್ನು ತೆಗೆಯಲು ಬಿಡದೆ ಧರಣಿ ಕೂತರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು,ಮೃತದೇಹಗಳ ವಾರಸುದಾರರ ಜೊತೆ ಸೇರಿ ಪೊಲೀಸರು ವಿರುದ್ಧ ಪ್ರತಿಭಟನೆ ನಡೆಸಿದರು.

 

 

ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಬಹಳಷ್ಟು ವಾಗ್ವಾದ ನಡೆಯಿತು.ವಿಷಯ ತಿಳಿದ ಕೂಡಲೇ ತಾಲೂಕಿನ ಉನ್ನತ ಅಧಿಕಾರಿಗಳಾದ ತಾಲೂಕು ದಂಡಾಧಿಕಾರಿ ಪವನ್ ಕುಮಾರ್, ಮತ್ತು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರತಿಭಟನಕಾರರ ಮನವಲಿಸಿ ಪೊಲೀಸ್ ಸಿಬ್ಬಂದಿಗಳ ಕಾವಲಿನಲ್ಲಿ ಮೃತ ದೇಹಗಳನ್ನು, ಮರಣೋತ್ತರ ಪರೀಕ್ಷೆಗಾಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ವಿಪರ್ಯಾಸವೆಂದರೆ ಯಾರನ್ನು ಉಳಿಸಲು ಬಸ್ ಚಾಲಕ ಪ್ರಯತ್ನಪಟ್ಟನು, ಆ ಮೊಪೆಟ್ ಚಾಲಕನಿಗೂ ಕೂಡ ಕಾಲು ಮುರಿದು ತಲೆಗೆ ತೀವ್ರವಾದ ಪೆಟ್ಟಾ ಪೆಟ್ಟು ಬಿದ್ದಿದೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 

 

 

 

ರಾಷ್ಟ್ರೀಯ ಹೆದ್ದಾರಿ ಗೆ ಸಂಬಂಧಪಟ್ಟ ಅಧಿಕಾರಿ ಕೇಶವ ಪಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಅಂಡರ್ ಪಾಸ್ ಅಥವಾ ಸ್ಕೈ ವಾಕರ್ ನಿರ್ಮಿಸುವಂತೆ ಒತ್ತಾಯಿಸಿದರು. ಪಾದ ಚಾರಿಗಳಿಗೆ ಸೂಕ್ತ ಮಾರ್ಗ ನಿರ್ಮಿಸುವುದಾಗಿ ಭರವಸೆ ನೀಡಿದರು.

 

 

 

ಇದೇ ಸಂದರ್ಭದಲ್ಲಿ ಬಿಇಓ ಚಂದ್ರಯ್ಯ, ನಗರ ಠಾಣಾ ಇನ್ಸ್ಪೆಕ್ಟರ್ ವೆಂಕಟೇಶ್, ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಸಿದ್ದರಾಮಯ್ಯ, 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *