ತಿಪಟೂರು. ತಿಪಟೂರು ಮತ್ತು ಅರಸೀಕೆರೆ ಪಟ್ಟಣಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಅಡಿ 1993 ನೇ ಇಸವಿಯಲ್ಲಿ ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಈಚನೂರು ಗ್ರಾಮದ ಸರ್ವೆ ನಂಬರ್ 65 ರ,338 ಎಕರೆ ವಿಸ್ತೀರ್ಣವುಳ್ಳ ಈಚನೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುತ್ತಿದೆ.
ಈಚನೂರು ಕೆರೆಯಿಂದ ತಿಪಟೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಹೇಮಾವತಿ ನೀರನ್ನು ಬಹಳಷ್ಟು ವರ್ಷಗಳಿಂದ ಸರಬರಾಜು ಮಾಡಲಾಗುತ್ತಿದ್ದು,ಈಚನೂರು ಕೆರೆಯ ಪಂಪ್ ಹೌಸ್ ಅಲ್ಲಿ 40 ಹೆಚ್ ಪಿ ಯ ಎರಡು ಪಂಪ್ ಸೆಟ್ಟುಗಳಿದ್ದು ಜೊತೆಗೆ 250 ಎಚ್ ಪಿ ಯ ಒಂದು ಮೋಟರ್ ಪಂಪ್ ಸೆಟ್ ಕೂಡ ಇದೆ.ಈ ಮೂರು ಪಂಪ್ ಪಂಪ್ ಸೆಟ್ ಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಿದ್ದಾರೆ,
ಈಚನೂರು ಕೆರೆ 45 ರಿಂದ 50 ದಿವಸದ ಒಳಗೆ ತುಂಬುತ್ತದೆ. ಪಂಪ್ ಹೌಸ್ ಅನ್ನು ಕಾರ್ಯ ನಿರ್ವಹಿಸುತ್ತಿರುವವರು ಕೇವಲ 40 ಎಚ್ ಪಿ ಒಂದು ಪಂಪ್ ಸೆಟ್ ಮಾತ್ರ ಆನ್ ಮಾಡುತ್ತಾರೆ. ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ಆ ಮೋಟಾರ್ ಕೂಡ ಕಾರ್ಯನಿರ್ವಹಿಸುವುದಿಲ್ಲ. ಈ ವಿಚಾರವಾಗಿ ಕೆಲಸ ಮಾಡುವವರನ್ನು ಕೇಳಿದರೆ ಸಮರ್ಪಕವಾದ ವಿದ್ಯುತ್ ಸರಬರಾಜು ಇಲ್ಲ ಎಂದು ಉತ್ತರಿಸುತ್ತಾರೆ.
ಪಂಪ್ ಸೆಟ್ಟಿಗೆ ಸರಬರಾಜು ಆಗುತ್ತಿರುವುದರ ವಿದ್ಯುತ್ ಸಮಸ್ಯೆ ಇದಿಯಾ ? ಎಂದು ಕೆಇಬಿ ಅಧಿಕಾರಿಗಳಿಗೆ ಕೇಳಿದರೆ 11,600 ವೋಲ್ಟೇಜ್ ವಿದ್ಯುತ್ ಸರಬರಾಜು ಈಗಾಗಲೇ ಚಾಲ್ತಿಯಲ್ಲಿ ಇದೆ ಎನ್ನುತ್ತಾರೆ. ಇದನ್ನು ಗಮನಿಸಿದರೆ ಪಂಪ ಹೌಸ್ ನಲ್ಲಿ ಕೆಲಸ ಮಾಡುತ್ತಿರುವವರು ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿರುವಂತೆ ಕಂಡು ಬರುತ್ತದೆ. ರೈತರ ಅನುಕೂಲಕ್ಕಾಗಿ ಕೆರೆಯ ಮಣ್ಣನ್ನು ರೈತರು ತೆಗೆಯಲು ಹೋದರೆ ಅಧಿಕಾರಿಗಳು ಕೇಸ್ ಹಾಕುತ್ತಾರೆ.
ಕೆರೆಯ ಹೂಳು ಎತ್ತಲು ಬಳಸಿದ್ದ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಎರಡು ಹಿಟಾಚಿ ಯಂತ್ರಗಳು ಹಲವಾರು ವರ್ಷಗಳಿಂದ ಇಲ್ಲೇ ತುಕ್ಕು ಹಿಡಿಯುತ್ತಿದ್ದು, ಹೂಳು ಎತ್ತುವುದರಲ್ಲಿ ಏನೋ ಗೋಲ್ ಮಾಲ್ ಆಗಿರಬಹುದುದೆಂದು ಸಂಶಯ ಮೂಡುತ್ತಿದೆ.ಇನ್ನು ಕೆರೆಗೆ ಮತ್ತು ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸಲು ಹೋದರೆ ಸಂಬಂಧಪಟ್ಟ ಅಧಿಕಾರಿಗಳು ಎದುರಿಸುವುದರ ಜೊತೆಗೆ ಕೇಸ್ ಹಾಕುವುದಾಗಿ ಧಮ್ಕಿ ಹಾಕುತ್ತಾರೆ.ಹಲವಾರು ಬಾರಿ ಕೆರೆಗೆ ಕೆಮಿಕಲ್ ನೀರು ಮಿಶ್ರಣವಾಗಿ ಕೆರೆಯ ಬಹುಪಾಲು ಜಾಗದಲ್ಲಿ ನೊರೆ ತುಂಬಿಕೊಂಡಿರುತ್ತದೆ. ಕೆಮಿಕಲ್ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಈಗಾಗಲೇ ಲಕ್ಷಾಂತರ ರೂಪಾಯಿ ಬೆಲೆಬಾಳುವ 15 ರಿಂದ 20 ಕುರಿಗಳು ಸಾವನ್ನಪ್ಪಿರುವುದರ ಜೊತೆಗೆ ಜಲರಾಶಿಗಳಿಗೆ ಜೀವಕಂಠಕ ಉಂಟಾಗಿದೆ.
ಇನ್ನು ಈಚನೂರು ಕೆರೆಯಿಂದ ಕುಡಿಯಲು ಯೋಗ್ಯವಲ್ಲದ ಯುಜುಡಿ ಮಿಶ್ರಿತ ಗಲೀಜು ನೀರು ನಗರ ವಾಸಿಗಳ ಹೊಟ್ಟೆ ಸೇರುತ್ತಿದೆ. ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಕೂಡ ಉಂಟು.ಎಂದು ರೈತರು ಹಾಗೂ ಗ್ರಾಮಸ್ಥರು ನಗರ ಸಭೆ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಈಚನೂರು ಕೆರೆಯನ್ನು ಎರಡು ಭಾಗವನ್ನಾಗಿ ಮಾಡಿ ಕೆರೆಯ ಹೂಳು ಎತ್ತುವ ಕೆಲಸ ಮಾಡಲಾಗಿದೆ. ಕೆರೆಯ ಒಂದು ಭಾಗದಲ್ಲಿ ಎಂಟು ಅಡಿ ಆಳ ಹೂಳು ಎತ್ತಿದ್ದು, ಹೂಳು ಎತ್ತಿರುವ ಜಾಗದಲ್ಲಿ ಸಂಪೂರ್ಣವಾಗಿ ತಿಪಟೂರು ನಗರದಿಂದ ಹರಿದು ಬರುತ್ತಿರುವ ಯೂಜುಡಿ ನೀರು ತುಂಬಿಕೊಂಡಿದೆ.ಕೂಡಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಯೂಜುಡಿ ನೀರು ಕೆರೆಯ ನೀರಿನಾ ಜೊತೆಗೆ ಮಿಶ್ರಣವಾಗುತ್ತಿರುವುದನ್ನು ತಡೆಗಟ್ಟಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಈಚಲೂರು, ಹುಲ್ಲುಕಟ್ಟೆ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ಈ ಮೂಲಕ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದರ ಜೊತೆಗೆ, ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್,ಹುಲ್ಲುಕಟ್ಟೆ ಮಹೇಶ್,ಶಾಂತಕುಮಾರ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.