ಸಮಾಜದಲ್ಲಿ ಸಮಾನತೆ, ಸಂಘಟನೆ ಬೆಳೆದರೆ ಮಾತ್ರ ಯಶಸ್ವಿಗೆ ಮುನ್ನುಡಿ -ಸಾಣೇಹಳ್ಳಿ ಶ್ರೀ

  1. ತಿಪಟೂರು ನ್ಯೋಸ್

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಎಸ್.ಎಲ್‌.ಬಿ.ಎಸ್ ಪ್ರೌಢಶಾಲಾ ಆವರಣದಲ್ಲಿ ಶಿವ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ,ಲಿಂಗೈಕ್ಯ ಎಸ್.ಬಿ. ಗಂಗಾಧರ ಗೌಡರ ಶಿವಗಣಾರಧನೆ ಮತ್ತು ಧಾರ್ಮಿಕ ಸಮಾರಂಭದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ,ಮಾತನಾಡಿದ ಶ್ರೀ ತರಳಬಾಳು ಶಾಖಾ ಮಠ ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿರವರು,ಗಂಗಾಧರ ಗೌಡರ ನಿಧನ ಇಡೀ ಸಮುದಾಯಕ್ಕೆ ತುಂಬಾ ದುಃಖಕರವಾಗಿದ್ದು,ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟು,ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ ಮಾಡಿಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.ಸಮಾಜದಲ್ಲಿ ಸಮಾನತೆ ಮತ್ತು ಸಂಘಟನೆ ಅಳವಡಿಸಿಕೊಂಡಾಗ ಯಶಸ್ವಿಗೆ ದಾರಿ ದೀಪವಾಗುತ್ತದೆ.ಸಾಮಾಜಿಕ ಕಳಕಳಿ ಪ್ರತಿಯೊಬ್ಬರು ಅಳವಡಿಸಿಕೊಂಡರೆ ತಮ್ಮ ಮನೆ ಮತ್ತು ಸಮಾಜವನ್ನು ಬೆಳೆಸಿದ ಕೀರ್ತಿಗೆ ಪಾತ್ರವಾಗುತ್ತಾರೆ.ಗಂಗಾಧರ ಗೌಡರ ನಂಟು, ನಮ್ಮ ಮಠದ ಹಿರಿಯ ಶ್ರೀಗಳ ತುಂಬಾ ನೆಚ್ಚಿನ ಶಿಷ್ಯರಾಗಿ ಕರ್ತವ್ಯ ನಿರ್ವಹಿಸಿದ ಒಬ್ಬರಲ್ಲಿ ಪ್ರಮುಖ ಪಾತ್ರ ವಹಿಸಿದ್ದು,ತರಳಬಾಳು ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ತಿಳಿಸಿದರು.

 

 

 

ಮಾಡಾಳು ನಿರಂಜನ ಪೀಠ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ,ಹೋಮ ಮತ್ತು ಹವನಗಳನ್ನು ಆಚರಿಸುವುದು ನಮ್ಮ ಲಿಂಗಾಯತ ಧರ್ಮದಲ್ಲಿಲ್ಲ ಆದ್ದರಿಂದ ತಾವುಗಳು ಮೌಡ್ಯ ಆಚರಿಸುವುದು ಮತ್ತು ಬೆಳೆಸುವುದನ್ನು ನಿಷೇಧಿಸಬೇಕು. ಗಂಗಾಧರ ಗೌಡರು ಜ್ಞಾನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದು ಅವರ ಹೆಸರು ಶಾಶ್ವತವಾಗಿ ಉಳಿದಿದೆ. ಅವರ ಹಾದಿಯಲ್ಲಿ ಇನ್ನುಳಿದ ಸಮಾಜದ ಬಂಧುಗಳು ಮತ್ತು ಕುಟುಂಬ ವರ್ಗ ಅವರ ಹೆಸರನ್ನು ಶಾಶ್ವತಗೊಳಿಸಲು ಅತಿಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು.

 

 

 

ನಿವೃತ್ತ ಎಸಿಪಿ ಲೋಕೇಶ್ವರ ಮಾತನಾಡಿ,ಗಂಗಾಧರ ಗೌಡರವರು ಅಪಾರ ಗುರುಭಕ್ತಿ ಹೊಂದಿದವರಲ್ಲಿ ಒಬ್ಬರಾಗಿದ್ದು, ಇಂತಹ ವಿದ್ಯಾ ಸಂಸ್ಥೆಯನ್ನು ಗ್ರಾಮೀಣ ಭಾಗದಲ್ಲಿ ತೆರೆಯಲು ಸಹಕಾರಿಯಾಗಿದೆ. ಇಂತಹ ವಿದ್ಯಾ ಸಂಸ್ಥೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕುಟುಂಬ ವರ್ಗ ಕಾರ್ಯನಿರ್ವಹಿಸಬೇಕೆಂದರು.

 

 

 

ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನುಡಿಯಲ್ಲಿ,ಗುರು ಹಿರಿಯರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆದರೆ, ಮುಂದಿನ ದಿನದಲ್ಲಿ ಆ ಪ್ರಜೆಯು ಸತ್ಪ್ರಜೆಯಾಗಿ ಹೊರ ಹೊಮ್ಮಲಿದ್ದು, ಪೋಷಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು, ವಿದ್ಯಾಭಾಸ ಮಾಡಿಸಿ,ಉತ್ತಮ ಸಂಸ್ಕಾರ ನೀಡಿ ರಾಷ್ಟ್ರ ಅಭಿಮಾನದ ಅರಿವು ಮೂಡಿಸಿ ದೇಶಕ್ಕೆ ಉತ್ತಮ ಪ್ರಜೆ ಯನ್ನಾಗಿ ಬೆಳೆಸಬೇಕು.ಅದೇ ರೀತಿ ಮಕ್ಕಳು ವಯಸ್ಸಾದ ಸಂದರ್ಭದಲ್ಲಿ ಪೋಷಕರನ್ನು ತಮ್ಮ ನೆಚ್ಚಿನ ಚಿಕ್ಕ ಮಕ್ಕಳಂತೆ ಪೋಷಿಸಿದ್ದೆ ಆದಲ್ಲಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದರು. ತರಳಬಾಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

 

 

 

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಶಿವಕುಮಾರ್,ಗ್ರಾಪಂ ಮಾಜಿ ಅಧ್ಯಕ್ಷರಾದ ಪರಮೇಶ್ವರಯ್ಯ, ಚನ್ನಬಸವಯ್ಯ,ಸಮಾಜದ ಜಯದೇವಪ್ಪ,ಗಂಗಾಧರ್ ನಂಜುಂಡಯ್ಯ,ಸಾಹಿತಿ ಶಿವಕುಮಾರ್,ದಿನೇಶ್ ಮತ್ತು ಚಂದ್ರಶೇಖರ್ ಸೇರಿದಂತೆ ಸಾಧು ವೀರಶೈವ ಸಮಾಜದ ಮುಖಂಡರುಗಳು,ಕುಟುಂಬ ವರ್ಗ ಮತ್ತು ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *