ತಿಪಟೂರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನುಸೇವಾ ಸಮಿತಿ ಹಾಗೂ ನಗರಸಭೆ ವತಿಯಿಂದ, ನಗರದಲ್ಲಿ ಅತಿ ಹೆಚ್ಚು ಸರಕಾರಿ ಶಿಕ್ಷಕರೇ ವಾಸವಿರುವ ಶಂಕರನಗರದಲ್ಲಿ ಶಂಕರನಗರ ಹಿತರಕ್ಷಣಾ ವೇದಿಕೆ ಮತ್ತು ಶಂಕರನಗರ ಹಿತಾಸಕ್ತಿ ಮತ್ತು ಕುಂದು ಕೊರತೆಗಳ ಚಾವಡಿ ಸಹಯೋಗದೊಂದಿಗೆ ಬಡಾವಣೆಯ ದಕ್ಷಿಣ ಭಾಗದ 40 ಅಡಿ ರಸ್ತೆಗೆ ಹೊಂದಿಕೊಂಡತೆ ಇರುವ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.