ಮುದ್ರಾ ನರ್ಸಿಂಗ್ ಕಾಲೇಜ್’ ವಿದ್ಯಾರ್ಥಿಗಳ ‘ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ’ ಉದ್ಘಾಟನಾ ಕಾರ್ಯಕ್ರಮ
ತಿಪಟೂರು : ನರ್ಸಿಂಗ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ ನರ್ಸಿಂಗ್ ವಿದ್ಯಾರ್ಥಿಗಳ ವೃತ್ತಿಪರ ಅವಕಾಶಗಳಿಗೆ ದಾರಿದೀಪ ಶಿಕ್ಷಣದ ಗುಣಮಟ್ಟ ಮತ್ತು ವೃತ್ತಿಪರತೆಯಲ್ಲಿ ನೈತಿಕತೆ ಕುಸಿಯುತ್ತಿರುವಾಗ ತಿಪಟೂರಿನಲ್ಲಿ ಒಂದು ನರ್ಸಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ನೀಡುತ್ತಿದೆ. ‘ಮುದ್ರಾ ಕಾಲೇಜ್ ಆಫ್ ನರ್ಸಿಂಗ್ ‘ ಆಡಳಿತ ಮಂಡಳಿಯು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗವನ್ನು ಆಯ್ಕೆ ಮಾಡಲು ಉತ್ಸುಕರಾಗಿರುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಕಲ್ಪಿಸಿಕೊಡಲು ಹಾಗೂ ಸಮಾಜದಲ್ಲಿ ವೈದ್ಯಕೀಯ ಸೇವೆಗಳಲ್ಲಿ ಉದಾತ್ತ ಮೌಲ್ಯಗಳನ್ನು ಬಿತ್ತರಿಸುವ ಉದ್ದೇಶದಿಂದ ಜೂನ್ 15 ರಂದು ಒಂದು ವಿಶಿಷ್ಟ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ನರ್ಸಿಂಗ್ ಪದವಿ ವಿದ್ಯಾರ್ಥಿಗಳಿಗೆ ನೈತಿಕತೆ ಕಾಪಾಡುವ ಪ್ರತಿಜ್ಞೆ ಮಾಡಲಾಗುವುದು ಮತ್ತು ಜ್ಞಾನದ ಪ್ರಸಾರದ ಸಂಕೇತವಾಗಿ ದೀಪ ಬೆಳಗಿಸಲಾಯಿತು.
ನೆರವು ಚಾರಿಟಬಲ್ ಟ್ರಸ್ಟ್’ನ ಮುದ್ರಾ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಜ್ಯೋತಿ ಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರದ’ ಒಂದು ವಿಶೇಷ ಕಾರ್ಯಕ್ರಮವನ್ನು ದಿ.15-06-2024 ರಂದು ಹಮ್ಮಿಕೊಳ್ಳಲಾಗಿದೆ. 2021 ರಲ್ಲಿ ಪ್ರಾರಂಭವಾಗಿರುವ ನಮ್ಮ ನರ್ಸಿಂಗ್ ಕಾಲೇಜು 3 ವರ್ಷಗಳ ವೈದ್ಯಕೀಯ ಶಿಕ್ಷಣ ಇತಿಹಾಸದಲ್ಲಿ ತಿಪಟೂರಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಪ್ರತಿಭಾನ್ವಿತ ನರ್ಸಿಂಗ್ ಪದವೀಧರರನ್ನು ಸಮಾಜಕ್ಕೆ ಕೊಡುಗೆ ನೀಡುತ್ತಿದೆ.
ನರ್ಸಿಂಗ್ ಕ್ಷೇತ್ರದ ಮಹಾತಾಯಿ ಪ್ಲಾರೆನ್ಸ್ ನೈಟಿಂಗೇಲ್ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬ ಧ್ಯೇಯ ಹೊಂದಿದ್ದರು ಮತ್ತು ಸಮಾಜಸೇವೆಗಾಗಿ ಜೀವಮಾನವನ್ನೇ ಮುಡಿಪಾಗಿಟ್ಟಿದ್ದರು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲಾ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಅದೇ ರೀತಿ ಇದೇ ಶನಿವಾರ ‘ದೀಪಧಾರಿಣಿ’ ನೈಟಿಂಗೇಲ್ ಸ್ಮರಣಾರ್ಥವಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರತಿಯೊಬ್ಬರೂ ಸಹ ಮೇಣದ ಬತ್ತಿ ಹಿಡಿದುಕೊಂಡು ಗೌರವ ಸೂಚಿಸುವ ಈ ಸಮಾರಂಭವನ್ನು ಮುದ್ರಾ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಆಯೋಜನೆ ಮಾಡಿದೆ.
ನರ್ಸಿಂಗ್ ಪದವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರದ ಸಭೆ
ನರ್ಸಿಂಗ್ ವಿದ್ಯಾರ್ಥಿಗಳು ವೃತ್ತಿಪರತೆಯ ಮೂಲಕ ಸ್ವಸ್ಥ ಸಮಾಜಕ್ಕೆ ಬೆಳಕಾಗಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಮುದ್ರಾ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ತರಬೇತಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ ಮತ್ತು ನರ್ಸಿಂಗ್ ವೃತ್ತಿಯ ಮಹತ್ವಪೂರ್ಣ ಅಂಶಗಳನ್ನು ಸಂಕೇತಿಸುತ್ತದೆ. ದೀಪ ಬೆಳಗಿಸುವ ಮತ್ತು ‘ಪ್ರತಿಜ್ಞಾವಿಧಿ’ ಸ್ವೀಕರಿಸುವ ಈ ಸಮಾರಂಭವು ಔಪಚಾರಿಕವಾಗಿ ವಿದ್ಯಾರ್ಥಿಯ ನರ್ಸಿಂಗ್ ವೃತ್ತಿಯ ಪ್ರವೇಶಕ್ಕೆ ನಾಂದಿ ಹಾಡುತ್ತದೆ.
ಈ ಉದ್ಘಾಟನಾ ಸಮಾರಂಭಕ್ಕೆ ಬೆಂಗಳೂರಿನ ಸಂಧ್ಯಾಕಿರಣ ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರ ಡಾ.ಕೆ.ಆರ್.ಶ್ರೀನಿವಾಸ್ ರವರು,
ನೆರವು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಬಾಬು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮತ್ತು ಕಾಲೇಜಿನ ಗೌರವಾನ್ವಿತ ಅಧ್ಯಕ್ಷರಾಗಿರುವ ಡಾ.ಚಂದ್ರಮೌಳಿ, ಕಾರ್ಯದರ್ಶಿ ಡಾ.ಶ್ರೀಧರ್, ಟ್ರಸ್ಟಿಗಳಾಗಿರುವ ಡಾ.ಅನಿಲ್, ಡಾ.ವಿವೇಚನ್, ಡಾ. ರವಿ, ಖಜಾಂಚಿ ಡಾ. ಹೇಮಂತ್ ಕುಮಾರ್, ಪ್ರಾಂಶುಪಾಲರಾಗಿರುವ ಡಾ.ಕೊಟ್ಟೂರೇಶ ಕೆ ಎಂ, ವಿದ್ಯಾರ್ಥಿಗಳು ಹಾಗೂ ಪೋಷಕರು ಬೋಧಕ,ಬೋಧಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜನೆಗೊಳಿಸಲಾಗಿತ್ತು,