ಭಾರಿ ಮಳೆಗೆ ಹೆಚ್.ಬೈರಾಪುರ ಗ್ರಾಮದ ಎರಡು ಸೇತುವೆಗಳು ಜಲಾವೃತ.

ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೆಚ್.ಬೈರಾಪುರ ಗ್ರಾಮದಲ್ಲಿ ಇಂದು ಬಿದ್ದ ಭಾರಿ ಮಳೆಗೆ,ತಿಪಟೂರು-ಹುಳಿಯಾರು ರಸ್ತೆ ಮಧ್ಯದ ಹೆಚ್.ಬೈರಾಪುರದ ಗ್ರಾಮದ ಮಧ್ಯಭಾಗದಲ್ಲಿರುವ ಎರಡು ಸೇತುವೆಗಳು ಆಪಿನಕಟ್ಟೆ ಹಳ್ಳ ಮತ್ತು ಕುನ್ನಿರಕಟ್ಟೆ ಹಳ್ಳದ ಬಳಿ ಹಳ್ಳದಿಂದ ನೀರು ಬರುತ್ತಿದ್ದು, ಹುಳಿಯಾರು ಮಾರ್ಗದ ರಸ್ತೆ ಸಂಪೂರ್ಣ ಜಲಾವೃತಿಯಾಗಿದ್ದು, ಈ ಎರಡು ಕೆರೆಯ ನೀರುಗಳು ಈ ಸೇತುವೆ ಮಾರ್ಗ ಬರುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮತ್ತು ದಾರಿ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು,ಈ ಭಾಗದಲ್ಲಿ ವಾಹನ ಸಂಪೂರ್ಣ ದಟ್ಟಣೆಯಾಗಿದ್ದು,ಈ ಸೇತುವೆಗಳು ತೀರ ಚಿಕ್ಕದಾಗಿದ್ದು,ಮಳೆ ಬಂದಾಗಲೆಲ್ಲ ಪದೇ ಪದೇ ಈ ರೀತಿ ತೊಂದರೆಗಳು ಅನುಭವಿಸುತ್ತಿರುವುದು,ಈ ಸೇತುವೆ ಗಳು ಸಂಪೂರ್ಣ ಜಲಾವೃತವಾಗಿದೆ.

ಹಾಗೂ ಈ ಎರಡು ಸೇತುವೆಗಳನ್ನು ಮೇಲ್ಸೇತ್ವೆಗಳಾಗಿ ನಿರ್ಮಾಣ ಮಾಡಿ, ಈ ಗ್ರಾಮದ ರೈತರು ಈ ಎರಡು ರಸ್ತೆಗಳನ್ನು ಕೃಷಿ ಚಟುವಟಿಕೆಗೆ ಅವಲಂಬಿಸಿದ್ದು ಮತ್ತು ವಾಹನ ಸವಾರರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರ ಒತ್ತಾಯ..

Leave a Reply

Your email address will not be published. Required fields are marked *