ಕೊರಟಗೆರೆ: ತಾಲೋಕಿನ ಕೋಳಾಲ ಹೋಬಳಿಯ ಮಾವತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಣಸಂದ್ರ ಗ್ರಾಮದಲ್ಲಿ ಮಾರಮ್ಮ ದೇವಿ ಸ್ಥಿರ ಬಿಂಬ ಹಾಗೂ ಪ್ರಾಣ ಪ್ರತಿಷ್ಠಾಪನ ಮಹೋತ್ಸವವನ್ನು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ: ಹನುಮಂತನಾಥ ಸ್ವಾಮೀಜಿ ದಿವ್ಯ ಸ್ವಾನಿತ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪೂಜಾ ಕಾರ್ಯಗಳು ನಡೆಯಿತು.
ಸಂದರ್ಭದಲ್ಲಿ ಗಣಪತಿ ಪೂಜೆ. ಗಂಗಾ ಪೂಜೆ. ಪಂಚಗವ್ಯ. ಕಳಸ ಪ್ರತಿಷ್ಠಾಪನೆ. ಕುಂಕುಮಾ ಆರ್ಚನೆ. ಗಣಪತಿ ಹೋಮ. ಜಲದಿವಾಸ. ದಾನ್ಯ ಧಿವಸ. ವಾಸ್ತುವಮ. ಮಹಾ ಮಂಗಳಾರತಿ. ಮೂರು ದಿನಗಳ ಕಾಲ ಏರ್ಪಡಿಸಲಾಗಿತ್ತು ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂದರ್ಭದಲ್ಲಿ ಹಲವಾರು ರಾಜಕೀಯ ಪಕ್ಷದ ಮುಖಂಡರು ಅಕ್ಕಪಕ್ಕದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು ವಿಶೇಷವಾಗಿ ದೇವಸ್ಥಾನಕ್ಕೆ 10 ಕುಂಟೆ ಭೂಮಿಯನ್ನು ದಾನ ಮಾಡಿದ ಲೇಟ್ ಮುದ್ದರಂಗಪ್ಪ ಪುಟ್ಟಮ್ಮ ಕುಟುಂಬದವರಿಗೆ ಸನ್ಮಾನ ಮಾಡಲಾಗಿತು.
ಹಾಗೂ ಕೊರಟಗೆರೆ ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿಯ ಮಂಡಲದ ಅಧ್ಯಕ್ಷರಾದ ದರ್ಶನ್ ಪಾತಗನಹಳ್ಳಿ ನಂಜುಂಡಪ್ಪ ಮೆಡಿಕಲ್ ಹನುಮಂತರಾಜು ಹಾಗೂ ಬಿಜೆಪಿ ಕಾರ್ಯಕರ್ತರ ಜೊತೆಗೆ ಮಿಣಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಮಾರಮ್ಮ ದೇವಿ ಆಶೀರ್ವಾದ ಪಡೆದರು.