
ತುಮಕೂರು :ಸನ್ಮಾನ್ಯ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ತುಮಕೂರು ದಸರಾ ಉತ್ಸವ ಸಭೆಯಲ್ಲಿ ತುಮಕೂರು ದಸರಾ ಉತ್ಸವವನ್ನು ಅತ್ಯಂತ ಗೌರವಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ದಿನಾಂಕ: 22.09.2025 ರಿಂದ 02.10.2025 ರವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕೆಳಕಂಡ ಮಾರ್ಗದ ಅಂಬಾರಿ ಡಬಲ್ ಡೆಕ್ಕರ್ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸನ್ಮಾನ್ಯ ಡಾ|| ಜಿ. ಪರಮೇಶ್ವರ, ಮಾನ್ಯ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ರವರು ದಿನಾಂಕ: 22.09.2025. ಸೋಮವಾರದಂದು ಅಂಬಾರಿ ಡಬಲ್ ಡೆಕ್ಕರ್ ಬಸ್ ಪ್ರಯಾಣಕ್ಕೆ ಸಂಜೆ 06.30 ಗಂಟೆಗೆ ಚಾಲನೆ ನೀಡುವರು. (ಚಾಲನೆ ಸ್ಥಳ: ಬಿ.ಜಿ.ಎಸ್. ವೃತ್ತ, ತುಮಕೂರು, ಸಮಯ: ಸಂಜೆ: 06.30 ಗಂಟೆಗೆ)
ಅಂಬಾರಿ ಡಬಲ್ ಡಕ್ಕರ್ ಬಸ್ ಕಾರ್ಯಾಚರಣೆಯಾಗುವ ಮಾರ್ಗ ಈ ಕೆಳಗಿನಂತಿರುತ್ತದೆ.

ಜೂನಿಯರ್ ಕಾಲೇಜು ಮೈದಾನ (ದಸರಾ ಉತ್ಸವ ಮೈದಾನದ ಸ್ಥಳ) ದಿಂದ ಹೊರಟು ಟೌನ್ ಹಾಲ್ ಸರ್ಕಲ್- ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ರಸ್ತೆ ಅಮಾನಿಕೆರೆ ಆಂಜನೇಯ ಸ್ವಾಚು ಶಿವಕುಮಾರ್ಸ್ವಾಮಿ ಸರ್ಕಲ್ ಪ್ರಾರಂಭಿಕ ಸ್ಥಳವಾದ ಜೂನಿಯರ್ ಕಾಲೇಜು ಮೈದಾನಕ್ಕೆ (ದಸರಾ ಉತ್ಸವ ಮೈದಾನ) ಆಗಮಿಸುತ್ತದೆ.
ಅಂಬಾರಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ಸಮಯ ಈ ಕೆಳಗಿನಂತಿರುತ್ತದೆ.
ಬೆಳಿಗ್ಗೆ 10.30 ಗಂಟೆಯಿಂದ ರಾತ್ರಿ 08.00 ಗಂಟೆ ವರೆಗೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ಆಗುತ್ತದೆ. (ಮಧ್ಯಾಹ್ನ 01.00 ಗಂಟೆಯಿಂದ 02.00 ಗಂಟೆವರೆಗೆ ಬಿಡುವು ಇರುತ್ತದೆ)
ಈ ಡಬಲ್ ಡೆಕ್ಕರ್ ಅಂಬಾರಿ ಬಸ್ ಲಂಡನ್ನ ಬಿಗ್ ಬಸ್ ಶೈಲಿಯಲ್ಲಿದ್ದು, ಒಳಗೆ ಹಾಗೂ ಅದರ ಮೇಲೆ ತೆರೆದ ಆಸನಗಳನ್ನು ಒಳಗೊಂಡಿದ್ದು, ಮಳೆ ಬಂದರೆ ಒಳಗಿನ ಆಸನದಲ್ಲಿ ಕುಳಿತು ರಕ್ಷಣೆ ಪಡೆಯಬಹುದಾಗಿದೆ. ಮೇಲೆ ತೆರೆದ ಆಸನದ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರು ತುಮಕೂರು ದಸರಾ ವೈಭವವನ್ನು ಹಾಗೂ ದೀಪಾಲಂಕಾರವನ್ನು ಕುಳಿತುಕೊಂಡೇ ದರ್ಶನ ಮಾಡಬಹುದಾಗಿರುತ್ತದೆ. ಇದಕ್ಕೆ ಪ್ರಯಾಣ ವೆಚ್ಚ ಇರುವುದಿಲ್ಲ ಸಂಪೂರ್ಣ ಉಚಿತವಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.