ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಆರ್ಥಿಕ ನೆರವು

ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಮತ್ತು ಪತ್ರಕರ್ತ ಬಿ.ಟಿ.ಕುಮಾರ್ ನೆರವು.

ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಮತ್ತು ಆಕಸ್ಮಿಕ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ತಿಪಟೂರಿನ ಕೆಪಿಸಿಸಿ ಸದಸ್ಯ ವಿ.ಯೋಗೇಶ್ 25.000/-ರೂಗಳು ಮತ್ತು ಪತ್ರಕರ್ತ ಬಿ.ಟಿ.ಕುಮಾರ್ 5,000/-ರೂಗಳು ಆರ್ಥಿಕ ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

 

 

ಹುಳಿಯಾರಿನ ಪತ್ರಕರ್ತ ರಮೇಶ್ ರವರಿಗೆ ಸುಮಾರು 5 ತಿಂಗಳಿಂದ ಇದ್ದಕ್ಕಿದ್ದಂತೆ ದೃಷ್ಟಿ ಹೀನತೆ ಸಮಸ್ಯೆ ಎದುರಾಗಿ ಕಣ್ಣು ಕಾಣದ ಸ್ಥಿತಿ ಉಂಟಾಗಿದ್ದು,ಅವರ ಕುಟುಂಬ ಸಂಕಷ್ಟದಲ್ಲಿದ್ದ ವಿಚಾರವನ್ನು ಕೆಪಿಸಿಸಿ ಸದಸ್ಯ ವಿ.ಯೋಗೇಶ್ ರವರಿಗೆ ತಿಳಿಸಿದಾಗ, ವೈಯಕ್ತಿಕವಾಗಿ 25,000 ರೂಗಳನ್ನು ನೀಡಿ ಇನ್ನೊಂದು ಬಾರಿ ಅವರನ್ನು ಭೇಟಿಯಾಗಿ ಬರುತ್ತೇನೆ. ತುರ್ತು ಕಾರ್ಯಕ್ರಮದ ನಿಮಿತ್ತ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ನೀವೇ ಅವರಿಗೆ ತಲುಪಿಸಿ ಎಂದು ಹೇಳಿದ್ದರು. ತಿಪಟೂರಿನ ಸ್ನೇಹಿತರು ಮತ್ತು ಹುಳಿಯಾರಿನ ಪತ್ರಿಕೋದ್ಯಮದ ಸ್ನೇಹಿತರೊಂದಿಗೆ, ರಮೇಶ್ ರವರ ಮನೆಗೆ ಆಗಮಿಸಿ, ಯೋಗ ಕ್ಷೇಮ ವಿಚಾರಿಸಿ, ಮುಂದೆಯೂ ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಬಿ.ಟಿ.ಕುಮಾರ್ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ್,ತಾಪಂ ಮಾಜಿ ಸದಸ್ಯ ಹೆಚ್.ಎನ್.ಕುಮಾರ್,ತಿಪಟೂರು ಜಯಕರ್ನಾಟಕ ಜನಪರ ವೇದಿಕೆ ತಾ.ಉಪಾಧ್ಯಕ್ಷ ರೇಣುಕಮೂರ್ತಿ (ಎಸ್.ಎಲ್.ವಿ), ಪತ್ರಕರ್ತರಾದ ಕಿರಣ್ ಕುಮಾರ್, ಸೋಮಶೇಖರ್, ತಿಪಟೂರು ರೋಹನ್ ರಾಜ್ ಮತ್ತು ಮುಖಂಡ ನವೀದ್ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!