ಸರ್ಕಾರಿ ಶಾಲೆಗೆ ಉಚಿತ ಕ್ರೀಡಾ ಸಮವಸ್ತ್ರವಿತರಣೆ

ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಡಾಳು ಸಂತೆ ಮೈದಾನ ಶಾಲೆಯ ಎಲ್ಲಾ ಮಕ್ಕಳಿಗೆ ತಿಪಟೂರಿನ ವಂದನ ಟೆಕ್ಸ್ ಟೋರಿಯಂ ಮಾಲೀಕರಾದ ಶ್ರೀಯುತ ಪ್ರಕಾಶ್ ಮತ್ತು ಸಹೋದರರು ಅವರ ತಂದೆಯವರಾದ ಶ್ರೀಯುತ ನೇಮಿನಾಥ್ ಜೈನ್ ರವರ ಸ್ಮರಣಾರ್ಥ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ರವರು ಮಕ್ಕಳು ಸರ್ಕಾರ ಹಾಗೂ ಧಾನಿಗಳು ನೀಡುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳ ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಿ ಮುಂದೆ ನೀವು ಓದಿದ ಶಾಲೆಗೆ ,ನಿಮ್ಮ ಗ್ರಾಮಕ್ಕೆ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ನೀವು ಬೇರೆಯವರಿಗೆ ಮಾದರಿಯಾಗಬೇಕು ಡಾ//. ಬಿ .ಆರ್. ಅಂಬೇಡ್ಕರ್ ರವರು ಹೇಳಿರುವಂತೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಎನ್ .ನರಸಿಂಹಮೂರ್ತಿ ಮಾತನಾಡಿ ನಮ್ಮ ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೆ ಸುಮಾರು ನಾಲ್ಕು ಸಾವಿರ ಬೆಲೆಬಾಳುವ ಪ್ಯಾಕೇಜ್ ಅಂದರೆ ವಿಶೇಷ ಸಮವಸ್ತ್ರ, ಕ್ರೀಡಾ ಸಮವಸ್ತ್ರ, ಟೈ ,ಬೆಲ್ಟ್ ,ಐಡಿ ಕಾರ್ಡ್ ,ಸ್ವೆಟರ್, ಬ್ಯಾಗ್, ವೈಟ್ ಶೂ ಮತ್ತು ಸ್ಯಾಕ್ಸ್ ಗಳನ್ನು ದಾನಿಗಳ ನೆರವಿನಿಂದ ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಟಿ.ಕೆ. ಪಟ್ಟಾಭಿರಾಮು ರವರು ಪ್ರತಿವರ್ಷ ನೀಡುತ್ತಾ ಬಂದಿದ್ದು ಈಕಾರಣ ದಿಂದ ನಮ್ಮ ಶಾಲಾ ದಾಖಲಾತಿ ಹೆಚ್ಚಳ ವಾಗಿದೆ ಮತ್ತು ಕಲಿಕೆಯು ಉತ್ತಮವಾಗಿದೆ.

ಆದ್ದರಿಂದ ಎಲ್ಲಾ ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿ ಎಂದು ಮನವಿ ಮಾಡಿದರು ಈ ಕಾರ್ಯಕ್ರಮದಲ್ಲಿ ವಂದನ ಟೆಕ್ಸ್ಟೋರಿಯಂ ನ ಶ್ರೇಯಾನ್ಸ್ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ ಕೆ ಪಟ್ಟಾಭಿರಾಮು, ಎಸ್ ಡಿ ಎಂ ಸಿ ಸದಸ್ಯರಾದ ಸ್ವರೂಪ್, ಸತ್ಯ ಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿರೂಪಾಕ್ಷ ಗ್ರಾಮಸ್ಥರಾದ ಟೈಲರ್ ಶೇಖ ರಣ್ಣ ,ಪಂಚಾಕ್ಷರಿ, ಸಹಶಿಕ್ಷಕಿ ಹೆಚ್. ಸಿ. ಪವಿತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!