ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ

ಶೈಕ್ಷಣಿಕ -ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ವಿನಿಮಯ:
ಮಲೇಶಿಯಾ ವಿವಿ ಜೊತೆ ಸಿದ್ಧಾರ್ಥ ಮ್ಯಾನೇಜ್‌ಮೆಂಟ್ ಸ್ಟಡೀಸ್ ಒಡಂಬಡಿಕೆ

ತುಮಕೂರು: ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಉನ್ನತ ಶಿಕ್ಷಣವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (SSIBM) ಮಲೇಶಿಯಾದ ಐಎನ್‌ಟಿಐ  ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.
ಮಲೇಶಿಯಾದ ಕೌಲಾಲಂಪುರ್‌ದ ಯುಸಿಎಸ್‌ಐ ವಿಶ್ವವಿದ್ಯಾಲಯದಲ್ಲಿನ ಕ್ಯಾಂಪಸ್ ಹಮ್ಮಿಕೊಳ್ಳಲಾದ ೫ ದಿನಗಳ ಜಾಗತಿಕ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂಬಿಎ ಶೈಕ್ಷಣಿಕ ಡೀನ್ ಶ್ರೀಮತಿ ಪವಿತ್ರಾ ಎನ್ ಮತ್ತು ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸ್ಮಿತಾ ಎಸ್ ಅವರನ್ನೊಳಗೊಂಡ ತಂಡ ಐಎನ್‌ಟಿಐ (INIT) ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರತಿನಿಧಿಗಳ ಜಂಟಿ ಸಭೆಯಲ್ಲಿ ಎರಡು ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸಹಕಾರ ಸಂಬಂಧಗಳ ಕುರಿತು ಚರ್ಚಿಸಿದವು. ನಂತರ ಒಡಂಬಡಿಕೆ ಪರಸ್ಪರ ಸಹಿ ಹಾಕಲಾಯಿತು.
ಒಪ್ಪಂದದ ಅಡಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು, ಶೈಕ್ಷಣಿಕ ಸಹಯೋಗದ ಕಾರ್ಯಕ್ರಮಗಳು, ಜಂಟಿ ಸಂಶೋಧನೆ ಮತ್ತು ಪ್ರಕಟಣೆಗಳು, ಶೈಕ್ಷಣಿಕ ಮಾಹಿತಿಯ ವಿನಿಮಯ, ಅಂತಾರಾಷ್ಟ್ರೀಯ ಕೇಂದ್ರದ ಸ್ಥಾಪನೆ ಹಾಗೂ ಕೋರ್ಸ್ಗಳು, ವಿಚಾರ ಸಂಕಿರಣಗಳು, ತರಬೇತಿ, ಸಮ್ಮೇಳನಗಳು ಮತ್ತು ವಿಜ್ಞಾನ ಮಾಲಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಎರಡೂ ಸಂಸ್ಥೆಗಳ ಪರಸ್ಪರ ಒಪ್ಪಿಗೆಯಿಂದ ಇತರೆ ಹಲವು ಶೈಕ್ಷಣಿಕ ಕ್ರಿಯಾಕಲಾಪಗಳನ್ನೂ ಮುಂದುವರಿಸಲು ಯೋಜಿಸಲಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿರುವ  ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಶೈಕ್ಷಣಿಕ ಡೀನ್ ಶ್ರೀಮತಿ ಪವಿತ್ರಾ ಎನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಒಡಂಬಡಿಕೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ತರಗತಿಯೇತರ ಸಮುದಾಯಗಳು ಚಟುವಟಿಕೆಗಳು ಮತ್ತು ಇತರೆ ಉದ್ದೇಶಗಳೊಂದಿಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು. ವಿದ್ಯಾರ್ಥಿಗಳು ತಮ್ಮ ಪರಸ್ಪರ ಕೌಶಲ್ಯಗಳನ್ನು ಬಲಪಡಿಸಲು ಮತ್ತು ಅವರ ವೈಯಕ್ತಿಕ ಅಭಿವೃದ್ಧಿ ಮತ್ತು ವಿಶ್ವವಿದ್ಯಾಲಯದ ಅನ್ವಯಿಕೆಗಳಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಈ ಒಪ್ಪಂದ ಸಹಾಯ ಮಾಡುತ್ತದೆ
ಈ ಶೈಕ್ಷಣಿಕ ನಿಯೋಗದದಲ್ಲಿ  ಕಾಲೇಜಿನ 10 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರನ್ನೋಲಗೊಂಡ ತಂಡ ಮಲೇಶಿಯಾದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ  UCSI   ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಜಾಗತಿಕ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿದೆ.  ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿನ ಶೈಕ್ಷಣಿಕ ಪರಿಸರ, ವೃತ್ತಿಪರ ಸಂವಾದಗಳು ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಅನುಭವ ದೊರಕಿತು. ಈ ಪ್ರಯಾಣವು ವಿದ್ಯಾರ್ಥಿಗಳಲ್ಲಿ ಜಾಗತಿಕ ದೃಷ್ಟಿಕೋಣ ಬೆಳೆಯಲು ಹಾಗೂ ಶೈಕ್ಷಣಿಕವಾಗಿ ನೂತನ ಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯವಾಗಿದೆ.

ಕುಲಾಧಿಪತಿಗಳ ಹರ್ಷ:
ಸಂಸ್ಥೆಯ ಎಂಬಿಎ ವಿಭಾಗದ ತಂಡ ಮಲೇಶಿಯಾದ ವಿವಿಯೋಂದಿಗೆ  ವಿದ್ಯಾರ್ಥಿಗಳ ವಿನಿಮಯ, ಜಂಟಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು ವಿಸ್ತರಣೆ, ಶೈಕ್ಷಣಿಕ ಪಠ್ಯ ಮತ್ತು ಪ್ರಕಟಣೆಗಳ ವಿನಿಮಯ ಮಾಡಿಕೊಳ್ಳುವ ಮೂಲಕ ತುಮಕೂರಿನಂತ ಎರಡನೆ ಹಂತದ ನಗರದಲ್ಲೂ ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬಹುದು ಎಂಬುದು ಸಾಬೀತಾಗಿದೆ ಎಂದು ಸಾಹೇ ಕುಲಾಧಿಪತಿಗಳು ಆದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಹರ್ಷ ವ್ಯಕ್ತಡಿಸಿದ್ದಾರೆ.
ಕುಲಾಧಿಪತಿಗಳ ಸಲಹೆಗಾರರರದ ಡಾ.ವಿವೇಕ ವೀರಯ್ಯ ಅವರು, ಜಾಗತಿಕ ಮಟ್ಟದಲ್ಲಿ ಸ್ವರ್ಧೆ ಎದುರಿಸಲು ಆಮೂಲಾಗ್ರ ಶೈಕ್ಷಣಿಕ ಸುಧಾರಣಾ ಕ್ರಮಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಕುರಿತು ಮನವರಿಕೆ ಮಾಡಿಕೊಳ್ಳಲು ವಿದೇಶಿ ಶಿಕ್ಷಣ ಸಂಸ್ಥೆಗಳೋAದಿಗೆ ಪರಸ್ಪರ ಒಡನಾಟ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಲೇಶಿಯಾದಲ್ಲಿ ಯಶಸ್ವಿಯಾಗಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಮುಗಿಸಿದ ತಂಡವನ್ನು ಎಂಬಿಎ ಪ್ರಾಂಶುಪಾಲರಾದ ಡಾ.ಅಜ್ಮತುಲ್ಲಾ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!