ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು”

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷಟು ವಿಷಯಗಳು ಹರಿದಾಡುತ್ತದೆ ಆದರೆ ನಮಗೆ ಸರಿ ಎನಿಸಿದ ವಿಷಯಗಳನ್ನು ಮಾತ್ರ ಪಡೆದುಕೊಳ್ಳಬೇಕು ಸಾಮಾಜಿಕ ಮಾಧ್ಯಮಗಳಲ್ಲಿ ಯೂಟೂಬರ್ಗಳು ಎಚ್ಚರಿಕೆಯಿಂದ ಸಾಮಾಜಿಕ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ವಿಡಿಯೋಗಳನ್ನು ಮಾಡಬೇಕು ಎಂದು ಪ್ರಜಾಪ್ರಗತಿಯ ಸಂಪಾದಕರಾದ ಎಸ್ ನಾಗಣ್ಣ ಸಲಹೆ ನೀಡಿದರು.

ನಗರದ ಶ್ರೀ ಸಿದ್ಧಾಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದಾರ್ಥ ಸಂಕಲ್ಪ 2025 ಕಾರ್ಯಕ್ರಮದಲ್ಲಿ ತುಮಕೂರಿನಲ್ಲಿ ಹೆಸರು ಮಾಡಿರುವಂತಹ ಬ್ಲಾಗರ್ಸ್ ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ನಾಡಿನ ಸಾಮಾಜಿಕ ಸ್ವಾಸ್ಥ್ಯವನ್ನು ಉಳಿಸಿಕೊಂಡು ಹೋಗುವ ಕೆಲಸ ಬ್ಲಾಗರ್ಗಳು ಮಾಡಬೇಕು, ಸಮಾಜದ ಒಳಿತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸವನ್ನು ಮಾಡಬೇಕು, ವೃತ್ತಿಯ ಜೊತೆಗೆ ಪ್ರವೃತ್ತಿಯ ಹಲವರಿಗೆ ಸಂತಸ ತಂದಿದ್ದು, ತಮ್ಮಲ್ಲಿನ ಕೌಶಲ್ಯದಿಂದ ವಿಭಿನ್ನ ಅಭಿರುಚಿ ಇರುವ ಅಂತಹವರನ್ನು ಆಕರ್ಷಿಸುವುದು ಸಾಮಾನ್ಯದ ಮಾತಲ್ಲ ಎಂದು ಬ್ಲಾಗರ್ಸ್ ಗಳಿಗೆ ಕಿವಿ ಮಾತನ್ನು ಹೇಳಿದರು,

ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತಾ ರವರು ಮಾಧ್ಯಮ ಎಂಬುದು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದು ಎಂದು ತುಮಕೂರಿನಲ್ಲಿ ಹೆಸರಾದಂತಹ ಬ್ಲಾಗಸ್ರ್ಗಳಿಗೆ ಸನ್ಮಾನಿಸಿರುವುದು ನಮಗೆ ಸಂತೋಷದ ವಿಷಯವಾಗಿದ್ದು ಜೊತೆಗೆ ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕವನ್ನು ಗಳಿಸಿರುವುದು ಹಾಗೂ ಪ್ರಸಕ್ತ ಸಾಲಿನ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ 2025 ರ ಪ್ರಶಸ್ತಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸಂದಿರುವುದು ಇನ್ನು ಸಂತೋಷದ ವಿಷಯವಾಗಿದೆ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಮಾಧ್ಯಮ(ಜಾಲತಾಣ ) ಎಲ್ಲವೂ ಸಮಾಜದ ಒಳಿತಿಗಾಗಿ ಕಾರ್ಯವನ್ನು ನಡೆಸುತ್ತಾ ಬಂದಿರುವುದು ನಮ್ಮೆಲ್ಲರಿಗೂ ಖುಷಿಯ ವಿಷಯವಾಗಿದೆ ಎಂದು ತಿಳಿಸಿದರು

 

ಇದೇ ವೇಳೆ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಬೋಧಕ – ಬೋದಿಕೇತ್ತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!