ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಬ್ಬಿ ತಾಲೂಕಿನ ಬಿದಿರೆ ವಲಯದ ಪ್ರಭಾವತ್ ಹಳ್ಳಿ ಹಾಗೂ ಕಲ್ಲೂರು ಗ್ರಾಮದಲ್ಲಿ ಸ್ಫೂರ್ತಿ ಹಾಗೂ ನವಭಾರತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಜೀವ ಜಲ ಉಳಿಸಿ ಹಾಗೂ ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಬಗ್ಗೆ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀಯುತ ಸತೀಶ್ ಸುವರ್ಣ ಸರ್ ರವರು ದೀಪಾ ಬೆಳಗಿಸುವುದರ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮ ಮಾತೃಶ್ರೀ ಅಮ್ಮನವರ ಆಶಯ ವಯಕ್ತಿಕ ಹಾಗೂ ಗ್ರಾಮದ ಸ್ವಚ್ಛತೆ, ಯು ಟ್ಯೂಬ್ ಚಾನೆಲ್ ಬಗ್ಗೆ ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ತಿಳಿಸಿದರು.
ಮಂಡ್ಯ ಸೌಹಾರ್ದ ಕಲಾ ತಂಡದ ಶ್ರೀಯುತ ಶೇಖರ್ ಸರ್ ಹಾಗೂ ಟೀಮ್ ಮೂಲಕ ನೀರಿನ ಸಂರಕ್ಷಣೆ, ಶೌಚಾಲಯ ಸ್ವಚ್ಛತೆ, ಕೃಷಿ ಚಟುವಟಿಕೆ, ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಯೋಜನೆ ಕಾರ್ಯಕ್ರಮಗಳ ಕುರಿತು ನಾಟಕ ಮಾಡಿದರು ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀಯುತ ರಾಜೇಶ್ ಸರ್ ರವರು, ಜಿಲ್ಲಾ ಜನ ಜಾಗೃತಿ ಸದಸ್ಯರಾದ ಶ್ರೀಯತ ಲಕ್ಕಣ್ಣೆ ಗೌಡ ಸರ್ ಹಾಗೂ ಶ್ರೀಯುತ ಲೋಕೇಶ್,ಊರಿನ ಗಣ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು,ಮೇಲ್ವಿಚಾರಕರು ಶ್ರೀಮತಿ ಶಶಿಕಲಾ ಹಾಗೂ ಶ್ರೀಯುತ ಶ್ರೀನಿವಾಸ ಸರ್ ,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಜಯಲಕ್ಷ್ಮಿ,ಸೇವಾಪ್ರತಿನಿಧಿ ಶ್ರೀಯುತ ರಾಜಣ್ಣ ಹಾಗೂ ನರಸಿಂಹ ಮೂರ್ತಿ, ಶ್ರೀಮತಿ ನೇತ್ರಾವತಿ ,ಜ್ಞಾನ ವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಸ್ವ ಸಹಾಯ ಸಂಘದ ಸದಸ್ಯರು ಊರಿನ ಸಮಸ್ತರು ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮದ ಕುರಿತು ಉತ್ತಮ ಅನಿಸಿಕೆ ವ್ಯಕ್ತ ಪಡಿಸಿದರು.