ತುಮಕೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ದರಗಳನ್ನು ಪರಿಷ್ಕರಿಸುವ ಮೂಲಕ ತೆರಿಗೆ ಹೊರೆ ಕಡಿತಗೊಳಿಸಿ ಎಲ್ಲಾ ವರ್ಗದ ಜನರ ಬದುಕನ್ನು ಸರಳ ಹಾಗೂ ಸುಲಭಗೊಳಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಎಸ್‍ಟಿ ಪರಿಷ್ಕರಣೆ ಜನಸಾನ್ಯರ ತೆರಿಗೆ ಹೊರೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ಗರಿಷ್ಠ ವಸ್ತುಗಳ ಮೇಲೆ ಗಮನಾರ್ಹ ಪರಿಹಾರವನ್ನು ನೀಡಿದೆ. ರೈತರು, ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ಇದರಿಂದ ಪ್ರಯೋಜನವಾಗಿದೆ. ವೆಚ್ಚವನ್ನು ಕಡಿಮೆ ಮಾಡುವ ಮತ್ತು ಸುಗಮ ವ್ಯಾಪಾರ, ವ್ಯವಹಾರಗಳನ್ನು ಪ್ರೋತ್ಸಾಹಿಸುವ ಮೂಲಕ ಜನಸಮಾನ್ಯರಿಗೆ ದೀರ್ಘಕಾಲೀನ ಪರಿಹಾರ ತರುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯ ವಿಮೆ ಪಾಲಿಸಿಗಳು ಜಿಎಸ್‍ಟಿಯಿಂದ ಸಂಪೂರ್ಣ ವಿನಾಯಿತಿ ದೊರಕಿದೆ. ಔಷಧಿಗಳು, ವೈದ್ಯಕೀಯ ಸಾಧನಗಳು ಗಮನಾರ್ಹವಾಗಿ ಅಗ್ಗವಾಗಲಿವೆ. ಹಾಲು, ಪನ್ನೀರ್, ಚಪಾತಿ, ಪರೋಟ ಮುಂತಾದ ಅಗತ್ಯ ಪದಾರ್ಥಗಳು ಈಗ ತೆರಿಗೆ ಮುಕ್ತವಾಗಿವೆ. ಜಿಎಸ್‍ಟಿ ಪರಿಷ್ಕರಣೆ ರೈತರಿಗೆ ವರದಾನವಾಗಲಿದೆ. ರಸಗೊಬ್ಬರ, ಕ್ರಿಮಿನಾಶಕ, ಟ್ರಾಕ್ಟರ್, ಮತ್ತಿತರ ಕೃಷಿ ಉಪಕರಣಗಳಿಗೆ ಈಗ ಕೇವಲ ಶೆಕಡ 5ರಷ್ಟು ತೆರಿಗೆ ಇದೆ. ಎಲೆಕ್ಟ್ರಾನಿಕ್ಸ್ ಉಪಕಣಗಳ ಮೇಲಿತ ತೆರಿಗೆಯನ್ನು ಶೇಕಡ 28ರಿಂದ 18ಕ್ಕೆ ಇಳಿಸಲಾಗಿದೆ. ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳು, ವಿವಿಧ ವಾಹನಗಳ ಬಿಡಿಭಾಗಗಳ ಮೇಲಿನ ತೆರಿಗೆ ಇಳಿಸಿ ಮೋದಿ ಸರ್ಕಾರ ಜನಸಾಮಾನ್ಯರಿಗೆ ನೆರವಾಗಿದೆ ಎಂದು ಟಿ.ಆರ್.ಸದಾಶಿವಯ್ಯ ತಿಳಿಸಿದ್ದಾರೆ.