ಹೆಬ್ಬೂರು ಪದವಿ ಕಾಲೇಜು ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ
ತುಮಕೂರು: ಬದುಕನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯವ ಶಕ್ತಿ ಶಿಕ್ಷಣಕ್ಕಿಗಿದೆ. ಉನ್ನತ ಶಿಕ್ಷಣ ಪಡೆದರೆ ಹಣ, ಸ್ಥಾನಮಾನ, ಗೌರವ ಎಲ್ಲವೂ ದೊರೆಯುತ್ತದೆ. ವಿದ್ಯಾರ್ಥಿಗಳು ಅನ್ಯ ವಿಚಾರಗಳಿಗೆ ಗಮನಹರಿಸದೆ ಕಲಿಕೆಗೆ ಚಿತ್ತಹರಿಸಬೇಕು ಎಂದು ಶಾಸಕ ಬಿ.ಸುರೇಶ್‍ಗೌಡರು ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಸರ್ಕಾರಿ ಪದವಿ ಕಾಲೇಜಿನ ಈ ಸಾಲಿನ ಸಾಂಸ್ಕøತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತಿತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳಿಗೆ ಕಲಿಕೆಯೊಂದೇ ಗುರಿಯಾಗಬೇಕು. ಶಿಸ್ತು, ಶ್ರದ್ಧೆಯಿಂದ ಕಲಿತು ತಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗಾಗಿ ಎಲ್ಲಾ ರೀತಿಯ ಸೌಕರ್ಯಗಳನ್ನು ತಾವು ಒದಗಿಸಿಕೊಡಲು ಬದ್ಧ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಿ ಕಾಲೇಜಿಗೆ, ಊರಿಗೆ, ಹೆತ್ತವರಿಗೆ ಕೀರ್ತಿ ತರಬೇಕು. ವಿದ್ಯೆಯ ಜೊತೆಗೆ ನಮ್ಮ ಸಂಸ್ಕøತಿ, ಆಚಾರವಿಚಾರ, ಹಿರಿಯರನ್ನು ಗೌರವಿಸುವ, ದೇಶಪ್ರೇಮದ ಮನೋಭಾವ ಬೆಳೆಸಿಕೊಂಡು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಸುರೇಶ್‍ಗೌಡರು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಕೃಷ್ಣ, ಜಾನಪದ ಗಾಯಕ ಶಶಿಕುಮಾರ್ ಹಾಗೂ ಕಾಲೇಜು ಬೋಧಕರು, ಸಿಬ್ಬಂದಿ ಹಾಜರಿದ್ದರು.
ಶಾಲಾ ಕಟ್ಟಡ ನಿರ್ಮಾಣಕ್ಕೆ ನೆರವು
ಬಾಷ್ ಕಂಪನಿಯವರು ತಮ್ಮ ಸಿಎಸ್‍ಆರ್ ನಿಧಿಯಡಿ ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಸರ್ಕಾರಿ ಪ್ರೌಢಶಾಲೆ ಕೊಠಡಿಗಳ ನಿರ್ಮಾಣಕ್ಕೆ ನೆರವು ನೀಡಲು ಮುಂದೆ ಬಂದಿದ್ದಾರೆ. ಬಾಷ್ ಕಂಪನಿಯ ಸೀನಿಯರ್ ಮೇನೇಜರ್ ಪುಂಡಲೀಕ ಕಾಮತ್, ಅಸಿಸ್ಟೆಂಟ್ ಮ್ಯಾನೇಜರ್ ಸುದರ್ಶನ್ ಅವರು ಶಾಸಕ ಬಿ.ಸುರೇಶ್‍ಗೌಡರೊಂದಿಗೆ ಇತ್ತೀಚೆಗೆ ಹೆಬ್ಬೂರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರವಾಗಿ ಶಾಲಾ ಕಟ್ಟಡ ಕಾಮಗಾರಿ ಆರಂಭಿಸಲು ಒಪ್ಪಿಕೊಂಡರು.